ರ್ಮನ್ ಕನ್ನಡ ಪ್ರಾಥಮಿಕ, ಪ್ರೌಢಶಾಲೆಯ ಬೆಳ್ಳಿ ಮಹೋತ್ಸವ

Silver Jubilee of Rman Kannada Primary and High School

ರ್ಮನ್ ಕನ್ನಡ ಪ್ರಾಥಮಿಕ, ಪ್ರೌಢಶಾಲೆಯ ಬೆಳ್ಳಿ ಮಹೋತ್ಸವ  

ಬೆಳಗಾವಿ 11: ನಗರದ ಶರ್ಮನ್ ಕನ್ನಡ  ಮಾಧ್ಯಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ 1999- 2000 ನೇ ಸಾಲಿನ ಸ್ನೇಹಿತರ ಬಳಗದ ವತಿಯಿಂದ 25 ನೇ ವರ್ಷದ ಬೆಳ್ಳಿ ಮಹೋತ್ಸವ ಕಾರ್ಯಕ್ರಮವು ದಿ. 10ರಂದು ಕ್ಯಾಂಪ್ ಸೆಂಟ್ ಜೆವಿಯರ್ ಎದುರಿಗಿನ ಯೂನಿಯನ್ ಜಮಖಾನಾ ಹೆರಿಟೆಜ್ ಕಿಚನ ಹಾಲ್‌ನಲ್ಲಿ ನಡೆಯಿತು.  

ಮುಖ್ಯ ಅತಿಥಿಗಳಾದ ಭಾರತಿ ಕೋರೆ, ರೂಪಾ ಜಾದವ, ಚನಮಲ್ಲಪ್ಪ ಪುಟ್ಟಿ, ಸುಶೀಲಾ ಹಂಚಿನಮನಿ, ಭಾರತಿ ದೇವದಾನ ಮಾತನಾಡಿ, ವಿದ್ಯಾರ್ಥಿಗಳು ಒಂದೇಡೆ ಸೇರಿ ಸಮಾಗಮ ಕಾರ್ಯಕ್ರಮ ಏರಿ​‍್ಡಸಿರುವದು ಶ್ಲಾಘನೀಯ. ಇಲ್ಲಿಯರೆಗೂ ನೀವೇಲ್ಲ ಶಾಲೆಯ ಮೇಲೆ ಅಭಿಮಾನವಿಟ್ಟು, ಗುರುಗಳನ್ನು ಸೇರಿಸಿ ಗುರುವಂದನೆ ನಡೆಸಿರುವದು ಮಾದರಿಯಾಗಿದೆ. ಇದೇ ಇನ್ನೂ ಅನೇಕ ಕಾರ್ಯಕ್ರಮ ಮಾಡುವ ಮೂಲಕ ಶಾಲೆಯ ಕೀರ್ತಿ ಹೆಚ್ಚಿಸಿರಿ ಎಂದರು.  

   ಅನುರಾಧಾ ಮಂಗಾವತಿ ಸಂಗಡಿಗರು ಶಿಕ್ಷಕರ ಪರಿಚಯವನ್ನು ನೆರವೇರಿಸಿ, ಸ್ವಾಗತಿಸಿದರು. ಲಕ್ಷ್ಮಣ ಡೊಂಬರ ನಿರೂಪಿಸಿದರು. ಯಂಡ್ರಾವಿ ವಂದಿಸಿದರು.  

ಶಿಕ್ಷಕರಾದ ಇಂದಿರಾ ಹವಾಲ್ದಾರ, ಸಲೋಮಿ ಉಪ್ಪಾರ, ಮರ್ಸಿ ಕಿನೆಕರ, ನಿರ್ಮಲಾ ಬಡಿಗೇರ, ರೂಪಾ ಸಿಗ್ಗಾಂವ, ಸುಭಾಸ ಶ್ಯಾಂಡಿಗೆ, ಗುರುಪುತ್ರ ಬಡಿಗೇರ, ಹಳೆಯ ವಿದ್ಯಾರ್ಥಿಗಳಾದ ಕಿರಣ ಜುಗ್ಗನ್ನವರ, ರಾಘವೇಂದ್ರ ಪಿಳ್ಳೆ, ಇನ್ನಿತರ ಸ್ನೇಹಿತರ ಬಳಗ ಹಾಜರಿದ್ದರು.