ಲೋಕದರ್ಶನ ವರದಿ
ಗದಗ 14: ನಗರದ ಎಸ್.ಬಿ.ಸಂಕಣ್ಣವರ ಬಡಾವಣೆಯಲ್ಲಿರುವ ಮಹಾಗಣಪತಿ ದೇವಸ್ಥಾನದ ಪ್ರಥಮ ವಾಷರ್ಿಕೋತ್ಸವದ ಅಂಗವಾಗಿ ಮಹಾಗಣಪತಿಗೆ ರುದ್ರಾಭಿಷೇಕದ ನಂತರ ವಿರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪೂಜ್ಯಶ್ರೀ ಕಲ್ಲಯ್ಯಜ್ಜನವರಿಂದ ಮಹಾಗಣಪತಿ ಮೂತರ್ಿಗೆ ಬೆಳ್ಳಿ ಕೀರಿಟ ಧಾರಣೆ ನೆರವೇರಿತು.
ಇದೇ ಸಂದರ್ಭದಲ್ಲಿ ಬೆಳ್ಳಿ ಕೀರಿಟಕ್ಕೆ ದಾನ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು. ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಎಸ್.ಬಿ.ಸಂಕಣ್ಣವರ ಬಡಾವಣೆ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.