ಏಕವಲಯ ನೆಟ್ಬಾಲ್ ಸ್ಪಧರ್ೆ : ಸತ್ಯಸಾಯಿ ಮಹಿಳಾ ಮಹಾವಿದ್ಯಾಲಯ ಪ್ರಥಮ

ಧಾರವಾಡ-ಹುಬ್ಬಳ್ಳಿ 13; ಸತ್ಯಸಾಯಿ ಮಹಿಳಾ ಮಹಾವಿದ್ಯಾಲಯದ ಆಶ್ರಯದಲ್ಲಿ ದಿ. 10 ಮತ್ತು 11 ರಂದು ನಡೆದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಂತರ ಮಹಾವಿದ್ಯಾಲಯಗಳ ಏಕವಲಯ ನೆಟ್ಬಾಲ್ ಸ್ಪಧರ್ೆಯ ಉದ್ಘಾಟಕರಾಗಿ ಅಖಿಲ ಭಾರತ ಆಟ್ಯಾ-ಪಟ್ಯಾ ಸಂಸ್ಥೆ ಅಧ್ಯಕ್ಷ ಡಾ. ವಿ.ಡಿ. ಪಾಟೀಲ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾಥರ್ಿನಿಯರು ತಮ್ಮಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡೆಯಲ್ಲಿ ಭಾಗವಹಿಸುವುದು ಅತೀ ಪ್ರಮುಖವಾಗಿದೆ. ನಮ್ಮ ದೇಶದ ಮಹಿಳೆಯರು ಕ್ರೀಡೆಯಲ್ಲಿ ಹಲವಾರು ಸಾಧನೆ ಮಾಡಿದ್ದಾರೆ. ಅದೇ ರೀತಿ ವಿದ್ಯಾಥರ್ಿನಿಯರು ಸತತ ಪರಿಶ್ರಮದಿಂದ ಕ್ರೀಡೆಯಲ್ಲಿ ಯಶಸ್ಸು ಗಳಿಸಬಹುದೆಂದು ಹೇಳಿದರು.

ಸಮಾರೋಪ ಸಮಾರಂಭದಲ್ಲಿ ಕನರ್ಾಟಕ ಸತ್ಯಸಾಯಿ ಎಜ್ಯುಕೇಶನಲ್ ಟ್ರಸ್ಟ ಶಿಕ್ಷಣ ನಿದರ್ೇಶಕ ಶಿವಶಂಕರ ರಾವ್, ಪ್ರಶಸ್ತಿ ಹಾಗೂ ಪಾರಿತೋಷಕ ವಿತರಣೆ ಮಾಡಿ ಮಾತನಾಡುತ್ತ ಕ್ರೀಡೆ ಕೇವಲ ಸೋಲು-ಗೆಲುವುಗಳಿಂದ ಕೂಡಿದ್ದಲ್ಲ, ವಿದ್ಯಾಥರ್ಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಕುಮಾರ ಪಂಚಪ್ಪ ಮಜ್ಜಿಗಿ ಇವರು ವಿದ್ಯಾಥರ್ಿನಿಯರನ್ನು ಉದ್ದೇಶಿಸಿ ಮಾತನಾಡಿ ಇಂದಿನ ಶಿಕ್ಷಣ ಸಂಸ್ಥೆಗಳು ಕ್ರೀಡೆಗೆ ಹೆಚ್ಚಿನ ಮಹತ್ವವನ್ನು ಕೊಟ್ಟು ವಿದ್ಯಾಥರ್ಿನಿಯರಿಗೆ ಪ್ರೋತ್ಸಾಹಿಸಬೇಕೆಂದು ಹೇಳಿದರು.

ಪ್ರಥಮ ಸ್ಥಾನವನ್ನು ಸತ್ಯಸಾಯಿ ಮಹಿಳಾ ಮಹಾವಿದ್ಯಾಲಯ, ಧಾರವಾಡ, ದ್ವೀತಿಯ ಸ್ಥಾನವನ್ನುಎಸ್.ಜೆ.ಎಮ್.ವಿ.ಎಸ್. ಮಹಿಳಾ ಮಹಾವಿದ್ಯಾಲಯ, ಹುಬ್ಬಳ್ಳಿ ಪಡೆದಿರುತ್ತದೆ.

ದೈಹಿಕ ಶಿಕ್ಷಣ ನಿದರ್ೇಶಕ ಮಂಜುನಾಥ ಜಾಡರ ಸ್ವಾಗತಗೈದರು, ವಂದನಾರ್ಪಣೆಯನ್ನು ಉಮಾ ಜೋಶಿ ಮಾಡಿದರು. ಕಾರ್ಯಕ್ರಮ ನಿರೂಪಣೆಯನ್ನು ಅಪೂರ್ವ ಹಾಗೂ ಸುಶ್ಮಿತಾ ನಿರ್ವಹಿಸಿದರು.