ನಮ್ಮ ದೇಶದ ಆತ್ಮ ಸಂವಿಧಾನ : ಶಾಸಕ ಡಾ.ಚಂದ್ರು ಲಮಾಣಿ
ಶಿರಹಟ್ಟಿ 27: ಭಾರತದ ಸಂವಿಧಾನವನ್ನು ಕೇವಲ ಒಂದು ದಾಖಲೆ ಎಂದು ಪರಿಗಣಿಸುವುದು ತಪ್ಪು. ಇದು ನಮ್ಮ ದೇಶದ ಆತ್ಮ, ನಮ್ಮ ಜನರ ಆಕಾಂಕ್ಷೆಗಳ ಪ್ರತಿಬಿಂಬ. ಇದು ಒಂದು ಜೀವಂತ ಸಾಕ್ಷಿಯಾಗಿದೆ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು. ಪಟ್ಟಣದ ಎಸ್.ಎಂ ಡಬಾಲಿ ತಾಲೂಕ ಕ್ರೀಡಾಂಗಣದಲ್ಲಿ 76ನೇ ಗಣರಾಜ್ಯೋವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದವರು. ಸಂವಿಧಾನವು ಜನರಿಂದ, ಜನರಿಗಾಗಿ ಮತ್ತು ಜನರ ಆಶೀರ್ವಾದದಿಂದ ರಚಿತವಾಗಿದೆ ಎಂಬುದನ್ನು ಸೂಚಿಸುತ್ತದೆ ಎಂದು ಹೇಳಿದರು. ಧ್ವಜಾರೋಹಣ ನೇರಿವೇರಿದ ತಹಶೀಲ್ದಾರ ಅನಿಲ ಕ. ಬಡಿಗೇರ ಅವರು ಮಾತಾನಾಡಿ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೆ ಮೂಲಭೂತ ಹಕ್ಕುಗಳನ್ನು ಖಾತರಿಪಡಿಸುತ್ತದೆ. ಈ ಹಕ್ಕುಗಳು ನಮ್ಮ ಗೌರವ ಮತ್ತು ಮಾನವೀಯತೆಯನ್ನು ರಕ್ಷಿಸುತ್ತವೆ. ಈ ವೇಳೆ ಪಪಂ ಅಧ್ಯಕ್ಷರ ದೇವಕ್ಕ ಯಲ್ಲವ್ವ ಗುಡಿಮನಿ.ಪಪಂ ಉಪಾಧ್ಯಕ್ಷರ ನೀಲವ್ವ ಹುಬ್ಬಳ್ಳಿ, ಸಿ.ಪಿ.ಐ ನಾಗರಾಜ್ ಮಾಡಳ್ಳಿ, ಪಿಎಸ್‌ಐ ಚನ್ನಯ್ಯ ದೇವುರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಎಸ್ ಎಸ್ ಕಲ್ಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾಣಕಿ ನಾಯಕ, ಪಪಂ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ನಾಗರಾಜ ಲಕ್ಕುಂಡಿ, ಫಕ್ಕಿರೇಶ ರಟ್ಟಿಹಳ್ಳಿ, ಪಪಂ ಮಾಜಿ ಅಧ್ಯಕ್ಷರ ಹುಮಾಯೂನ್ ಮಾಗಡಿ, ಹೊನ್ನಪ್ಪ ಶಿರಹಟ್ಟಿ, ಮಾಶಾನೌಸಂ ಜಿಲ್ಲಾಅಧ್ಯಕ್ಷರ ಎಂ.ಕೆ ಲಮಾಣಿ, ಮುಖಂಡರ ಅಕ್ಬರಸಾಬ್ ಯಾದಗಿರಿ, ಜಾನು ಲಮಾಣಿ, ಬಸವರಾಜ ನಾಯ್ಕರ, ನಂದಾ ಪಲ್ಲೆದ, ಮಹೇಶ್ ಕಲ್ಲಪ್ಪನವರ, ಅಶೋಕ್ ಶಿರಹಟ್ಟಿ, ತಿಪ್ಪಣ್ಣ ಲಮಾಣಿ ವಿವಿಧ ಮುಖಂಡರು ಹಾಗೂ ತಾಲೂಕಾಧಿಕಾರಿಗಳು ಮತ್ತು ವಿವಿಧ ಶಾಲಾ ಶಿಕ್ಷಕರ, ವಿದ್ಯಾರ್ಥಿಗಳು ಇತರರಿದ್ದರು. 26 ಎಸ್ ಆರ್ ಟಿ 1 ಶಿರಹಟ್ಟಿ ಎಸ್.ಎಂ ಡಬಾಲಿ ತಾಲೂಕ ಕ್ರೀಡಾಂಗಣದಲ್ಲಿ 76ನೇ ಗಣರಾಜ್ಯೋವದ ಅಧ್ಯಕ್ಷತೆ ವಹಿಸಿ ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿದವರು. ಪಪಂ ಅಧ್ಯಕ್ಷರ ದೇವಕ್ಕ ಯಲ್ಲವ್ವ ಗುಡಿಮನಿ, ಪಪಂ ಉಪಾಧ್ಯಕ್ಷ ನೀಲವ್ವ ಹುಬ್ಬಳ್ಳಿ, ಸಿ.ಪಿ.ಐ ನಾಗರಾಜ್ ಮಾಡಳ್ಳಿ, ಪಿಎಸ್‌ಐ ಚನ್ನಯ್ಯ ದೇವೂರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಎಸ್ ಎಸ್ ಕಲ್ಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾಣಕಿ ನಾಯಕ, ಪಪಂ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ಪಪಂ ಮಾಜಿ ಅಧ್ಯಕ್ಷರ ನಾಗರಾಜ ಲಕ್ಕುಂಡಿ, ಪಪಂ ಮಾಜಿ ಅಧ್ಯಕ್ಷರ ಹುಮಾಯೂನ್ ಮಾಗಡಿ, ಫಕ್ಕಿರೇಶ ರಟ್ಟಿಹಳ್ಳಿ, ವಿವಿಧ ಮುಖಂಡರು ಹಾಗೂ ತಾಲೂಕಾಧಿಕಾರಿಗಳು ಮತ್ತು ವಿವಿಧ ಶಾಲಾ ಶಿಕ್ಷಕರ, ವಿದ್ಯಾರ್ಥಿಗಳು ಇತರರಿದ್ದರು.