ಅಮ್ಮಿನಬಾವಿಯಲ್ಲಿ ಹನುಮ ಜಯಂತಿ ಅಂಗವಾಗಿ ವಿಶೇಷ ಪೂಜೆ

Special puja at Amminabavi on the occasion of Hanuman Jayanti

ಅಮ್ಮಿನಬಾವಿಯಲ್ಲಿ ಹನುಮ ಜಯಂತಿ ಅಂಗವಾಗಿ ವಿಶೇಷ ಪೂಜೆ

ಧಾರವಾಡ 12 :ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿಹನುಮ ಜಯಂತಿ ಮಹೋತ್ಸವದ ಅಂಗವಾಗಿ  ವೀರಾಂಜನೇಯಸ್ವಾಮಿಯ ಅಲಂಕೃತ ಭಾವಚಿತ್ರದ ಮೆರವಣಿಗೆ ಶನಿವಾರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅತ್ಯಂತ ವಿಶಿಷ್ಟವಾಗಿ ಜರುಗಿತು. 

ಉದ್ಘಾಟನೆ : ಅಮ್ಮಿನಬಾವಿ ಗ್ರಾಮ ಪಂಚಾಯತಿ ಪಕ್ಕದಲ್ಲಿರುವ ಶ್ರೀವೀರಾಂಜನೇಯಸ್ವಾಮಿ ದೇವಸ್ಥಾನ, ಓಂಕಾರ ಸೇವಾ ಸಂಘ ಹಾಗೂ ಮಾರುತಿ ಅಭಿವೃದ್ಧಿ ಸೇವಾ ಸಂಘ ಹಾಗೂ ಅಮ್ಮಿನಬಾವಿಯ ವಿವಿಧ ಯುವಕ ಸಂಘಗಳ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಈ ಮೆರವಣಿಯನ್ನು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಶ್ರೀಹನುಮ ಜಯಂತಿ ಮಹೋತ್ಸವ ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು, ಪುಷ್ಪವೃಷ್ಟಿಗೈದರು.ಈ ಧರ್ಮೋತ್ಸವದಲ್ಲಿ ಎಲೆಕ್ಟ್ರಾನಿಕ್ ಆನೆ, ಯಕ್ಷಗಾನ ಕಲಾವಿದರ ಕುಣಿತ ಹಾಗೂ ವಿಭಿನ್ನ ಗೊಂಬೆ ವೇಷಧಾರಿಗಳ ಪ್ರದರ್ಶನ ಗಮನಸೆಳೆದವು. ಧಾರವಾಡದ ವಿನಾಯಕ ಬೆಂಜೋ ವಾದ್ಯಮೇಳ, ಕರಡಿಮಜಲು, ಡೊಳ್ಳು, ಮಹಿಳೆಯರ ಪೂರ್ಣಕುಂಭ ಹಾಗೂ ಕೇಸರಿ ಧ್ವಜಗಳು ಮೆರವಣಿಗೆಯ ಕಳೆಯನ್ನು ಹೆಚ್ಚಿಸಿದ್ದವು. ಮೆರವಣಿಗೆಯ ನಂತರ ಸಾಮೂಹಿಕ ಅನ್ನಸಂತರೆ​‍್ಣ ನಡೆಯಿತು.  

ತೊಟ್ಟಿಲೋತ್ಸವ : ಇದಕ್ಕೂ ಮುನ್ನ ಪ್ರಾತಃಕಾಲವೀರಾಂಜನೇಯಸ್ವಾಮಿ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಪೂಜೆ, ನಂತರ ವೀರಾಂಜನೇಯನ ತೊಟ್ಟಿಲೋತ್ಸವ ಜರುಗಿತು. ಅಧಿಕ ಸಂಖ್ಯೆಯ ಭಕ್ತರು ಬಾಲ ಹನುಮನ ದರ್ಶನಾಶೀರ್ವಾದ ಪಡೆದರು.