ವಿಶೇಷ ತರಬೇತಿ ಶಿಬಿರ

Special training camp

ವಿಶೇಷ ತರಬೇತಿ ಶಿಬಿರ  

ಗದಗ   28:  ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಹಾಗೂ ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗದಗ ಜಿಲ್ಲೆಯ ಎಲ್ಲಾ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ವಿಶೇಷ ತರಬೇತಿ ಶಿಬಿರವನ್ನು  ಮಂಗಳವಾರ ರೋಟರಿ ಕಮ್ಯುನಿಟಿ ಕೇರ್ ಸೆಂಟರ್, ಜಿಲ್ಲಾ ಕ್ರೀಡಾಂಗಣ ಎದುರಿಗೆ, ತಾ.ಜಿ. ಗದಗ ಇದರ ಸಭಾಭವನದಲ್ಲಿ ಜರುಗಿತು. 

ಕಾರ್ಯಕ್ರಮದ ಉದ್ಘಾಟನೆಯನ್ನು ಸಹಕಾರ ಸಂಘಗಳ ಉಪನಿಬಂಧಕಿಯರಾದ ಶ್ರೀಮತಿ ಎಸ್‌.ಎಸ್‌. ಕಬಾಡೆಯವರು ಸಹಕಾರ ಜ್ಯೋತಿ ಬೆಳಗಿಸುವದರೊಂದಿಗೆ ಉದ್ಘಾಟಿಸಿ ಮಾತನಾಡುತ್ತಾ ಸ್ತ್ರೀಯರು ಸರ್ಕಾರದ ಹಾಗೂ ಈ ಕಾರ್ಯಕ್ರಮದ ಹಲವಾರು ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಅದಕ್ಕಾಗಿ ನೀಡಲಾಗುವ ತರಬೇತಿಗಳನ್ನು ಪಡೆದು ಬದುಕಿನಲ್ಲಿ ಆರ್ಥಿಕ ಸದೃಢತೆ ಹೊಂದಬೇಕು, ಇದರಿಂದ ಕುಟುಂಬ ನಿರ್ವಹಣೆಗೆ ಸಹಾಯವಾಗಲಿದೆ ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿ., ಬೆಂಗಳೂರು ಇದರ ನಿರ್ದೇಶಕರು ಹಾಗೂ ಸಹಕಾರ ರತ್ನ ಪುರಸ್ಕೃತರಾದ ಎಚ್‌. ಜಿ. ಹಿರೇಗೌಡ್ರ ಮಾತನಾಡುತ್ತಾ ಹಲವಾರು ಸ್ವ ಉದ್ಯೋಗದ ಯೋಜನೆಗಳಿದ್ದು, ಅದಕ್ಕಾಗಿ ನಿರ್ದಿಷ್ಟ ತರಬೇತಿಗಳನ್ನು ಸರ್ಕಾರದ ವತಿಯಿಂದ ಉಚಿತವಾಗಿ ನೀಡಲಾಗುತ್ತಿದ್ದು ತರಬೇತಿಗಳನ್ನು ಪಡೆದು ಸರ್ಕಾರದಿಂದ ಸಿಗುವ ಆರ್ಥಿಕ ಸೌಲಭ್ಯವನ್ನು ಉಪಯೋಗಿಸಿಕೊಂಡು ಸ್ವ ಉದ್ಯೋಗಿಗಳಾಗಿ ಮಹಿಳೆಯರು ತಮ್ಮ ಕುಶಲತೆಗೆ ಸಂಬಂಧಿಸಿದ ಆಸಕ್ತಿವುಳ್ಳ ವಿವಿಧ ತರಬೇತಿಗಳನ್ನು ಪಡೆದು ಸಣ್ಣ ಬಂಡವಾಳದಿಂದ ಪ್ರಾರಂಭಿಸಿ ತರಬೇತಿಗಳು ಬದುಕಿನಲ್ಲಿ ಬಹಳ ಉಪಯುಕ್ತತೆಯಾಗಿದ್ದು, ಅದರಲ್ಲೂ ಸ್ವ ಉದ್ಯೋಗದ ತರಬೇತಿಗಳು ಉದ್ಯಮಶೀಲತೆಗೆ ಸಹಕಾರ ನೀಡುತ್ತವೆ. ಗ್ರಾಹಕರು ಅಥವಾ ಗ್ರಾಹಕರನ್ನು ಆಕರ್ಷಿಸಲು ಪರಿಣಾಮಕಾರಿಯಾದ ಮಾರ್ಕೆಟಿಂಗ್ ಅವಶ್ಯ ಅದಕ್ಕಾಗಿ ಸ್ವ ಉದ್ಯೋಗದಾತರು ಗ್ರಾಹಕರೊಂದಿಗೆ ಸೌಮ್ಯವಾಗಿ ವರ್ತಿಸಿ ವ್ಯಾಪಾರವನ್ನು ವೃಧ್ಧಿಸಿಕೊಳ್ಳಬೇಕು ಎಂದರು.  

ಧಾರವಾಡ ಹಾಲು ಒಕ್ಕೂಟದ ನಿರ್ದೇಶಕರಾದ ಲಿಂಗರಾಜಗೌಡ ಎಚ್‌. ಪಾಟೀಲ ಮಾತನಾಡುತ್ತಾ ಸ್ವಾವಲಂಬನೆ, ಸಬಲೀಕರಣ ಇವು ಸಹಕಾರಿ ವಲಯದ ಮುಲಬೂತ ಆಶಯಗಳಾಗಿವೆ, ಸಹಕಾರ ಸಂಘ ಸಂಸ್ಥೆಗಳು ಮಹಿಳೆಯರ ಸ್ವಾವಲಂಬಿ ಬದುಕಿನ ಆಸರೆಗಳೆಂದರೆ ತಪ್ಪಗಲಾರದು ಸಹಕಾರಿ ಉದ್ಯಮಗಳಲ್ಲಿ ಮಹಿಳೆಯರು ಪಾಲ್ಗೊಂಡರೆ, ಅವರು ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲರಾಗುವುದರಲ್ಲಿ ಯಾವುದೇ ಸಂಶಯವಿರಲಾರದು, ಏಕೆಂದರೆ ಸದಸ್ಯರ ಆರ್ಥಿಕ ಬಲಿಷ್ಠತೆಗೆ  ಪ್ರೇರಣೆ ಹಾಗೂ ಪ್ರೋತ್ಸಾಹ ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ರೂಪಿಸುವಲ್ಲಿ ಸಹಕಾರ ವಲಯ ಈಗಾಗಲೇ ನಮ್ಮ ರಾಷ್ಟ್ರ ಹಾಗೂ ರಾಜ್ಯದಲ್ಲಿ ಯಶಸ್ವಿಯಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ದೊರೆಯುವ ಸೌಲಭ್ಯಗಳಾದ ಅಂಗನವಾಡಿ ಕೇಂದ್ರಗಳಿಂದ ಪ್ರತಿ 1000 ಜನಸಂಖ್ಯೆಯಲ್ಲಿ ಶೇಕಡ 12ಅ ರಷ್ಟು 6 ವರ್ಷದೊಳಗಿನ ಮಕ್ಕಳು ಇದ್ದಲ್ಲಿ ಅಂಗನವಾಡಿ ಕೇಂದ್ರಗಳನ್ನು ತೆರೆಯಬಹುದಾಗಿದೆ. ಈ ಅಂಗನವಾಡಿ ಕೇಂದ್ರಗಳ ಮೂಲಕ ಮಕ್ಕಳ ಪೊಷಣೆ, ತಾಯಂದಿರ ಸಬೆ, ಬಾಲಮೇಲಗಳು, ಆರೋಗ್ಯ ತಪಾಸಣೆ, ಪೌಷ್ಟಿಕ ಆಹಾರದ ಶಿಬಿರ ಹಾಗೂ ಪೌಷ್ಟಿಕ ಆಹಾರದ ವಿತರಣೆ ಕಾರ್ಯಕ್ರಮಗಳನ್ನು ನಡೆಸಲಾಗತ್ತಿದೆ ಇಂತಹ ತರಬೇತಿಯ ಸದುಪಯೋಗ ಪಡೆದುಕೊಂಡು ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು “ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು” ಎಂದು ಹೇಳಿದರು. 

ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಉಪನಿರ್ದೇಶಕರಾದ ಅರವಿಂದ ಎನ್‌. ನಾಗಜ್ಜನವರ ಮಾತನಾಡುತ್ತಾ ಸ್ರ್ತೀ ಶಕ್ತಿ ಯೋಜನೆ ಅಂಗನವಾಡಿ ಕೇಂದ್ರಗಳಿರುವ ಪ್ರದೇಶದಲ್ಲಿನ ಮಹಿಳೆಯರನ್ನು ಒಂದುಗೂಡಿಸಿ ಮಹಿಳೆ ಸ್ವಸಹಾಯ ಗುಂಪುಗಳನ್ನು ಮಾಡುವುದರೊಂದಿಗೆ ಮಹಿಳೆಯರಲ್ಲಿ ಉಳಿತಾಯದ ಮನೋಭಾವನೆಯನ್ನು ಕಂಡುಕೊಳ್ಳುವಂತೆ ಮಾಡುವುದು. ಸಮಾಜ ಕಲ್ಯಾಣ ಇಲಾಖೆ ಯಿಂದ ಶ್ರೇಯೋಭಿವೃಧ್ಧಿ ಕೇಂದ್ರಗಳು: ಇಲ್ಲಿ ಉಚಿತವಾದಂತಹ ಕೌಶಲ್ಯ ತರಬೇತಿ, ವೃತ್ತಿಪರ ಶಿಕ್ಷಣ, ಕಂಪ್ಯೂಟರ್ ತರಬೇತಿ ಮಾಡಲು ಇಚ್ಚಿಸುವವರಿಗೆ ಮಾಸಿಕ ರೂ.500/- ಶಿಕ್ಷಣ ವೇತನವನ್ನು ನೀಡಲಾಗುತ್ತದೆ. ಹೊಲಿಗೆ ತರಬೇತಿ ನೀಡಲಾಗುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಅದೇ ರೀತಿ ಎಲ್ಲಾ ಸಹಕಾರ ಸಂಘಗಳ ಅಗಷ್ಟ 31 ರ ಒಳಗಾಗಿ ಲೆಕ್ಕಪರಿಶೋಧನೆ ಮಾಡಿಸಿ ವಾರ್ಷಿಕ ಮಹಾಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಬೇಕು ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗದಗ ಜಿಲ್ಲಾ ಸಹಕಾರ ಯೂನಿಯನ್‌ದ ಅಧ್ಯಕ್ಷರಾದ ಸಿ. ಎಂ. ಪಾಟೀಲ ವಹಿಸಿ ಮಾತನಾಡುತ್ತಾ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಇಂತಹ ಹಲವಾರು ಕಾರ್ಯಕ್ರಮಗಳನ್ನು ಜರುಗಿಸುತ್ತಾ ಬರಲಾಗುತ್ತಿದೆ. ಇಂದಿನ ಕಾರ್ಯಕ್ರಮದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪ್ರತಿನಿಧಿಯರು ಭಾಗವಹಿಸಿದ್ದು, ಬಹಳ ಸಂತೋಷದ ವಿಷಯ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕೆಂದು ಹೇಳಿದರು. 

ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಸಹಕಾರ ಯೂನಿಯನ್‌ದ ನಿರ್ದೇಶಕರಾದ   ಅನಿತಾ ಕಲ್ಲಣ್ಣವರ, ರೋಣ, ಗದಗ ಮತ್ತು ನರಗುಂದ ತಾಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿಗಳಾದ   ಪ್ರಶಾಂತ ಮುಧೋಳ ಸಹಕಾರ ಅಭಿವೃದ್ಧಿ ಅಧಿಕಾರಿಗಳು, ರೋಣ ಪ್ರಕಾಶ ನವಲಗುಂದ   ಎಚ್‌. ಎಂ. ಶಾಂತಾ, ಧಾರವಾಡ ಹಾಲು ಒಕ್ಕೂಟದ ಜಿಲ್ಲಾ ಮುಖ್ಯಸ್ಥರಾದ ಡಾ. ಪ್ರಸನ್ನ ಪಟ್ಟೇದ, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಸಂಕದಾಳ, ಅಸುಂಡಿ, ಬೂದಿಹಾಳ, ನಾಗರಹಳ್ಳಿ ಮತ್ತು ಕರಕಿಕಟ್ಟಿ ಅಧ್ಯಕ್ಷರಾದ   ಶಾಂತವ್ವ ರಾಚನಗೌಡ್ರ,   ವಿಜಯಲಕ್ಷ್ಮೀ ರಾಮೇನಹಳ್ಳಿ,   ಗಿರಿಜವ್ವ ಹಡಪದ,   ಜಯಮ್ಮ ತಂಟ್ರಿ ಹಾಗೂ   ಶಿವಲೀಲಾ ಹಿರೇಮಠ ಉಪಸ್ಥಿತರಿದ್ದರು. 

 ತರಬೇತಿ ಕಾರ್ಯಾಗಾರದಲ್ಲಿ “ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಅಳವಡಿಸಿಕೊಳ್ಳಬೇಕಾದ ಕೌಶಲ್ಯಗಳು ಮತ್ತು ಮಾರುಕಟ್ಟೆ ವ್ಯವಸ್ಥೆ ಹಾಗೂ ಮಹಿಳೆಯರಿಗೆ ಸರ್ಕಾರದಿಂದ ಸಿಗುವ ಆರ್ಥಿಕ ಸೌಲಭ್ಯಗಳ” ಕುರಿತು ಡಾ. ಜಯಶ್ರೀ ಬಿ. ಹಿರೇಮಠ ಅಧ್ಯಕ್ಷರು ಮಹೇಶ್ವರಿ ವಿವಿದೊದ್ದೇಶಗಳ ಮಹಿಳಾ ಮಂಡಳ(ರಿ), ಗದಗ, “ಮಹಿಳೆಯರ ಆರೋಗ್ಯ “ಕುರಿತು ಕೆ.ಎ. ಹಾದಿಮನಿ ತಾಲೂಕಾ ಆರೋಗ್ಯ ಅಧಿಕಾರಿಗಳು, ರೋಣ, “ಸಹಕಾರ ಸಂಘಗಳಲ್ಲಿ ಆಡಳಿತಾತ್ಮಕ ನಿರ್ವಹಣೆ” ಕುರಿತು ಡಿ. ಐ. ನದಾಫ, ವಿಸ್ತರಣಾಧಿಕಾರಿಗಳು, ಧಾರವಾಡ ಹಾಲು ಒಕ್ಕೂಟ, ನರಗುಂದ ಇವರು ಉಪನ್ಯಾಸ ನೀಡಿದರು.  

  ಗಿರಿಜಾ ನಾಯಕ ನಿರ್ದೇಶಕರು, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ., ಬ್ರಹ್ಮಾನಂದಪುರ ಇವರು ಪ್ರಾರ್ಥನೆ ಮಾಡಿದರು. ಗದಗ ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಸ್‌. ಕರಿಯಪ್ಪನವರ ಸ್ವಾಗತಿಸಿ ನಿರೂಪಿಸಿದರು. ಮಹಿಳಾ ಸಹಕಾರ ಶಿಕ್ಷಕಿಯರಾದ   ರಶೀದಾಬಾನು ಸಿ. ಯಲಿಗಾರ ಇವರು ವಂದಿಸಿದರು.