ಲೋಕದರ್ಶನ ವರದಿ
ಮಾಂಜರಿ: ಸದಲಗಾ ಪಟ್ಟಣದಲ್ಲಿ ಡಾ. ಅಬ್ದುಲ್ ಕಲಾಮ್ ಸಮುದಾಯ ಭವನ ನಿಮರ್ಾಣಕ್ಕೆ 30 ಲಕ್ಷ ರೂ ಅನುದಾನ ನೀಡುವುದಾಗಿ ಸರಕಾರದ ಮುಖ್ಯ ಸಚೇತಕ ಗಣೇಶ ಹುಕ್ಕೇರಿಯವರು ಹೇಳಿದರು.
ಅವರು ಇಂದು ಸಮೀಪದ ಸದಲಗಾ ಪಟ್ಟಣದಲ್ಲಿ ಸದಲಗಾ ಹಾಗೂ ಬೆಳಗಾವಿಯ ವಿವಿಧ ಸಂಘಟಣೆಗಳ ಆಶ್ರಯದಲ್ಲಿ ಕುವೆಂಪು ಶತಮಾನೋತ್ಸವ ಮಾದರಿ ಶಾಲೆಯ ಆವರಣದಲ್ಲಿ ಹಮ್ಮಿಕೊಂಡ ರಾಜ್ಯ ಮಟ್ಟದ ಸಾಧನೆಗೊಂದು ಸ್ಪೂತರ್ಿ ಹಾಗೂ ಡಾ, ಅಬ್ದುಲ್ ಕಲಾಮ್ ರಾಷ್ಟ್ರ ಮಟ್ಟದ ಪ್ರಶಸ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸದಲಗಾ ಪಟ್ಟಣದಲ್ಲಿ ಸರಕಾರಿ ತಾಂತ್ರಿಕ ಮಹಾವಿದ್ಯಾಲಯ ಪ್ರಾರಂಭಿಸಲಿದ್ದು, ಮುಂದಿನ ವಾರವೇ ಕಟ್ಟಡ ನಿಮರ್ಾಣ ಕಾಮಗಾರಿಗೆ ಚಾಲನೆ ನೀಡಲಿದ್ದೇವೆ ಎಂದು ಅವರು ಸಾಧಕರಿಗೆ ಪ್ರೋತ್ಸಾಹಿಸುವುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಸಕ ಸತೀಶ ಜಾರಕಿಹೋಳಿ ಮಾತನಾಡಿ, ಸಾಧನೆ ಮಾಡಿದವರನ್ನು ವೇದಿಕೆ ಮೇಲೆ ತಂದು ಸತ್ಕರಿಸಬೇಕು, ಕಾರ್ಯಕ್ರಮಗಳು ಪ್ರೇರಣೆಯಾಗಬೇಕು, ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಸದಲಗಾ ಪಟ್ಟಣದ ಯುವಕರು ಎನ್.ಜಿ.ಒ ಆರಂಭಿಸಬೇಕು ಎಂದ ಅವರು ಕಳೆದ 18 ವರ್ಷಗಳಿಂದ ಸತೀಶ ಶುಗರ್ಸ ಅವಾರ್ಡ ನೀಡಿ ಗೌರವಿಸುತ್ತಾ ಬರಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಡಾ. ಶೃದ್ಧಾನಂದ ಮಹಾಸ್ವಾಮಿಜಿಗಳು, ಲಕ್ಷ್ಮಣರಾವ ಚಿಂಗಳೆ, ಅಶೋಕಕುಮಾರ ಅಸೋದೆ, ಎಂ.ಜಿ.ದಾಸರ, ವಿಶಾಲ, ದತ್ತಾ ಖಾಮಕರ, ಆಫ್ರಿನ್ ಜಮಾದಾರ, ಅಧಿಕಾರಿ ಪುಂಡಲಿಕ ಅನವಾಲ, ಅಜರುದ್ದಿನ್ ಶೇಖಜಿ ಮುಂತಾದವರು ಮಾತನಾಡಿದರು
ಡಾ, ಶಿವಶಂಕರ ಮರಜಕ್ಕೆ, ಪುಂಡಲಿಕ ಅನ್ವಾಲ, ಡಾ, ದತ್ತಾ ಕಾಮಕರ, ಡಾ, ಪ್ರದೀಪ, ಡಾ.ಚಂದ್ರಶೇಖರ, ಗವಿಸಿದ್ಧಮಯ್ಯಾ, ರಾಮಚಂದ್ರ ಕಾಂಬಳೆ, ಆಫ್ರೀನ್ ಜಮಾದಾರ, ಮಡಿವಾಳ ಮುಕುಂದ, ಮನೀಷಾ ಪಾಟೀಲ, ಬಸಪ್ಪಾ ಸುನಧೋಳೆ, ಲಕ್ಷ್ಮೀ ರಾಯನ್ನವರ, ಸಂತೋಷ ಹುಗಾರ, ಅಭಿಷೇಕ ನವಲೆ, ಕುನೂರೆ ಬ್ರದರ್ಸ, ಸಂಜು ಬೆಳ್ಳಿಕೊಪ್ಪ, ಸರಸ್ವತಿ ಮೋರೆ, ವಾಹೀದ ಪಠಾಣ ಮತ್ತು ರಾಹುಲ ಕೊರವ ಇವರಿಗೆ ಡಾ. ಎ.ಪಿ.ಜೆ, ಅಬ್ದುಲ್ ಕಲಾಮ ರಾಷ್ಟ್ರ ಮಟ್ಟದ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಧರೇಶ್ವರ ಅಜ್ಜಾ ವಹಿಸಿದ್ದರು, ಉತ್ತಮ ಪಾಟೀಲ, ಮಹಾವೀರ ಮೋಹಿತೆ, ಸುದರ್ಶನ್ ಖೋತ, ಮಹಾವೀರ ಪಾಟೀಲ, ಪಿ.ಆಯ್,ಕೋರೆ, ಅಭಿಜೀತ ಪಾಟೀಲ, ಪೀರಗೌಡಾ ಪಾಟೀಲ, ಪುರಸಭೆಯ ಸದಸ್ಯರು, ಗಣ್ಯಮಾನ್ಯರು, ಡಾ, ಅಬ್ದುಲ್ ಕಲಾಮ್ ಯವಕ ಮಂಡಳದ ಸದಸ್ಯರು, ಸುತ್ತಮುತ್ತಲಿನರು ಪಾಲ್ಗೋಂಡಿದ್ದರು.
ಡಾ, ಅಬ್ದುಲ್ ಕಲಾಮ್ ಸೇವಾಸಂಘದ ಅಧ್ಯಕ್ಯ ಅಜರುದ್ದಿನ್ ಶೇಖಜಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಶೈಲಜಾ ಖೋಕರೆ ನಿರೂಪಿಸಿದರು. ತೆಜಶ್ವಿನಿ ಲೋಕರೆ ವಂದಿಸಿದರು.