ಲೋಕದರ್ಶನ ವರದಿ
ಬೆಳಗಾವಿ, 1 : ಸಹಕಾರಿ ಸಂಸ್ಥೆಗಳನ್ನು ಹುಟ್ಟು ಹಾಕಿದ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲ ಸೇವೆ ಶ್ಲಾಘನೀಯ, ಸೌಹಾರ್ದ ಸಹಕಾರಿ ದಿನಾಚರಣೆಯನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚು ಹೆಚ್ಚು ಜನರೊಂದಿಗೆ ಆಚರಣೆಯಾಗಬೇಕೆಂದು ಅಧ್ಯಕ್ಷರು ಶಿವಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಿ.ಟಿ.ಮಜ್ಜಿಗೆ ಹೇಳಿದರು.
ಸ್ಥಳೀಯ ಮಾಹಾಂತೇಶ ನಗರದ ಮಂಗಳವಾರ 01 ರಂದು ಕನರ್ಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಕಛೇರಿಯ ಆವರಣದಲ್ಲಿ ಸೌಹಾರ್ದ ಸಹಕಾರಿ ದಿನಾಚಾರಣೆಯ ಧ್ವಜಾರೋಹಣ ನೇರವೆರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸಹಕಾರಿ ಸೌಹಾರ್ದಗಳು ತಮ್ಮದೇಯಾದ ಛಾಪು ಮೂಡಿಸಿವೆ, ಈ ಬ್ಯಾಂಕಿನಿಂದ ಸಾಕಷ್ಟೂ ಕಡುಬಡವರುತಮ್ಮಜೀವನವನ್ನು ರೂಪಿಸಿಕೊಂಡಿದ್ದಾರೆ.
ಸಂಯುಕ್ತ ಸಹಕಾರಿಯು ಸೌಹಾರ್ದ ಸಹಕಾರಿಗಳಿಗೆ ಹಲವಾರು ವಿಷಯಗಳಲ್ಲಿ ಹೆಚ್ಚಿನ ತಿಳುವಳಿಕೆ ನೀಡುವಕಾರ್ಯವನ್ನು ಮಾಡುತ್ತಾ ಬಂದಿದೆ. ಸಂಯುಕ್ತ ಸಹಕಾರಿಯ ನೇತೃತ್ವದಲ್ಲಿಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಾ ಬಂದಿವೆ ಎಂದರು.
ಬಸವರಾಜ ಸುಲ್ತಾನಪುರೆ ಮಾತನಾಡಿ, ಸೌಹಾರ್ದ ಸಹಕಾರಿಯ ದಿನವನ್ನು ಸಹಕಾರ ಸಪ್ತಾಹದ ದಿನವನ್ನುಆಚರಿಸುವ ಹಾಗೇ ಈ ವಿಜೃಂಭಣೆಯಿಂದ ಆಚರಿಸುವಂತಾಗಬೇಕು ಎಂದು ತಿಳಿಸಿದರು. ಅವರು ಸಹಕಾರಿಗಳು ತಾವು ಎದುರಿಸುವ ಸಮಸ್ಯೆಗಳ ಬಗ್ಗೆ ಚಚರ್ೆ ನಡೆಯಬೇಕು ಆದಾಯತೆರಿಗೆ ಇಲಾಖೆಯಿಂದ ಈಗ ಸೌಹಾರ್ದ ಸಹಕಾರಿಗಳಿಗೆ ತೆರಿಗೆ ವಿಧಿಸುತ್ತಿರುವುದರಿಂದ ಸಹಕಾರಿಗಳು ಸಮಸ್ಯೆಗೆ ಸಿಲುಕಿಕೊಂಡಿವೆ. ಈ ನಿಟ್ಟಿನಲ್ಲಿ ಸಂಯುಕ್ತ ಸಹಕಾರಿಯು ಹೆಚ್ಚಿನ ಗಮನ ಹರಿಸಿ ಈ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಒದಗಿಸಿಕೊಡಬೇಕೆಂದರು.
ನಮ್ಮ ಜಿಲ್ಲೆಯು ರಾಷ್ಟ್ರದಲ್ಲಿಯೇ ಅತಿ ಹೆಚ್ಚು ಸೌಹಾರ್ದ ಸಹಕಾರಿಗಳನ್ನು ಹೊಂದಿದೆ. ಮುಂಬರುವ ದಿನಗಳಲ್ಲಿ ಸಹಕಾರಿ ಕ್ಷೇತ್ರವು ಅಭಿವೃದ್ಧಿಯ ಕಡೆಗೆ ಸಾಗುವ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ಹೇಳಿದರು.
ಕನರ್ಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಳಗಾವಿ ವಿಭಾಗದ ಅಧಿಕಾರಿ ಶ್ರೀಕಾಂತ್ ಬರುವೆ ಮಾತನಾಡಿ, ಸೌಹಾರ್ದ ಕಾಯ್ದೆಯು ಜಾರಿಯಾಗಿ 17 ವರ್ಷ ಕಳೆಯುತ್ತ ಬಂದಿದೆ ಇಲ್ಲಿಯವರೆಗೂಯಾವುದೇಅಡೆತಡೆಇಲ್ಲದೆ ಯಶಸ್ವಿಯಾಗಿ ಸಾಗುತ್ತ ಬಂದಿದೆ. ಸೌಹಾರ್ದ ಸಹಕಾರಿಗಳಿಗೆ ತೆರಿಗೆ ಇಲಾಖೆಯಿಂದ ತೊಂದರೆಯುಂಟಾಗಿದೆ, ಈ ನಿಟ್ಟಿನಲ್ಲಿಸಂಯುಕ್ತ ಸಹಕಾರಿಯು ಕಾನೂನಾತ್ಮಕವಾಗಿ ಹಾಗೂ ರಾಜಕೀಯವಾಗಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಸದ್ಯದಲ್ಲಿಯೇ ಈ ಕುರಿತು ಪರಿಹಾರದ ನಿರೀಕ್ಷೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಧಿಕಾರಿಯಾದ ಜಿ. ಎಸ್. ಟೋಪಣ್ಣವರ, ರಾಘವೇಂದ್ರ ಪಾಟೀಲ, ಇತರೆ ಸ್ಥಳೀಯ ಸೌಹಾರ್ದ ಸಹಕಾರಿಗಳು ಸಿಬ್ಬಂದಿ ಹಾಗೂ ಉಪಸ್ಥಿತರಿದ್ದು, ಶ್ರೀಕಾಂತ್ ಬರುವೆ ಸ್ವಾಗತಿಸಿದರು. ಅಶ್ವೀನಿ ಕಮ್ಮಾರನಿರೂಪಿಸಿದರು. ಪ್ರತೀಭಾ ಹಿರೇಮಠವಂದಿಸಿದರು.