ಉನ್ನತ ಶಿಕ್ಷಣ ಕವಲು ದಾರಿಯಲ್ಲಿ, ರಾಜ್ಯ ಮಟ್ಟದ ವಿಚಾರ ಸಂಕಿರಣ ಮೇಷ್ಟ್ರಗಿಂತ ಬೇರೆ ಬ್ರಹ್ಮನಿಲ್ಲ: ತ್ಯಾಗರಾಜ

ಲೋಕದರ್ಶನ ವರದಿ

ಬೆಳಗಾವಿ,23: ಭಾರತದ ಉನ್ನತ ಶಿಕ್ಷಣ ಇಡೀ ವಿಶ್ವಕ್ಕೆ ಮಾದರಿಯಾಗಿ, ಅಪ್ರತಿಮ ಶ್ರೇಷ್ಠ ಜ್ಞಾನದ ಮತ್ತು ಮನು ಕುಲಕ್ಕೆ ಪ್ರಯೋಜನ ವಾಗುತ್ತಿದ್ದ ಕಾಲವೊಂದಿತ್ತು ಅದರ ಪ್ರತಿಫಲವಾಗಿಯೇ ರಾಧಾಕೃಷ್ಣನ್, ಅರವಿಂದ ಘೋಷ, ರಾನಡೆಯಂತ ಜಗತ್ ವಂದ್ಯ ಮಹಾನ ವ್ಯಕ್ತಿಗಳು ಈಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆಂದು  ಸಂಗೋಳ್ಳಿ ರಾಯಣ್ಣ ಕಾಲೇಜಿನ ಪ್ರಾಚಾರ್ಯ ಪ್ರೊ. ಸಿ.ಎಂ.ತ್ಯಾಗರಾಜ  ಅಭಿಪ್ರಾಯಪಟ್ಟರು.

ಸ್ಥಳೀಯ ಸಂಗೋಳ್ಳಿರಾಯಣ್ಣ ಘಟಕ ಕಾಲೇಜಿನಲ್ಲಿ ರಾ.ಚ.ವಿ.ವಿಯ  ವಾಣಿಜ್ಯ ಮತ್ತು ವ್ಯವಸ್ಥಾಪನಾ ಶಿಕ್ಷಕರ ಸಂಘದವರು ಅಯೋಜಿಸಿದ್ದ ಉನ್ನತ ಶಿಕ್ಷಣ ಕವಲು ದಾರಿಯಲ್ಲಿ ಎಂಬ ಒಂದು ದಿನದರಾಜ್ಯ ಮಟ್ಟದ ವಿಚಾರ ಸಂಕೀರಣದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

ಇಂದಿನ ಶಿಕ್ಷಣದಿಂದ ಇಂತಹ ವಿಶ್ವಮಾನರು ಏಕೆ ಹುಟ್ಟುತ್ತಿಲ್ಲವೆಂದು ಪ್ರಶ್ನಿಸುವ ಸ್ಥಿತಿ ಉದ್ಭವಿಸಿದೆ.  ಮೇಷ್ಟ್ರಗಿಂತ ಬೇರೆ ಬ್ರಹ್ಮನೇನಿಲ್ಲವೆಂದು ವಿದ್ಯಾಥರ್ಿಗಳು  ಭಾವಿಸುತ್ತಿದ್ದ ಕಾಲ ನಮ್ಮ ದೇಶದಲ್ಲಿಯೇ ಇತ್ತು. ಇಂದು ಜಾಗತೀಕರಣದ ಸುಳಿಯಲ್ಲಿ ಗುಣಮಟ್ಟ ದಿದ ದುರ್ಬಲವಾಗಿದೆ. ಇದಕ್ಕೆ ಪರಿಹಾರ ಬೇರೆ ಎಲ್ಲಿಯೂ ಇಲ್ಲ ನಮ್ಮಲ್ಲಿಯೇ ಕಂಡುಕೊಳ್ಳಬೇಕೇಂದರು.  

ಅವರು, ಮುಂದುವರಿದು ಉನ್ನತ ಶಿಕ್ಷಣದ ಫಲಾನುಭವಿಗಳಾದ ವಿದ್ಯಾಥರ್ಿಗಳು, ಶಿಕ್ಷಕರು, ಪಾಲಕರು, ಪಠ್ಯಕ್ರಮ ಮತ್ತು ಶಿಕ್ಷಣಕ್ಷೇತ್ರಕ್ಕೆ ಆಯವ್ಯಯದ ಹಂಚಿಕ್ಕೆ  ಇವು ಎಲ್ಲವು ಕವಲು ದಾರಿಯಲ್ಲಿವೆಎಂದು  ಹೇಳಿದರು. ಸದ್ಯ ಮುಖ್ಯವಾಗಿರುವ ಪ್ರಶ್ನೆಎಂದರೆ ಉನ್ನತ ಶಿಕ್ಷಣದಲ್ಲಿ ಸಂಖ್ಯಾ ಗಾತ್ರ ಅರ್ಥ ಗುಣಮಟ್ಟ ಯಾವುದು ಬೇಕೆಂಬುದನ್ನು ನಿರ್ಧರಿಸುವ ಹಂತ ತಲುಪಿದ್ದೇವೆಯೆಂದು  ಹೇಳಿ, ಈ ದಿಶೆಯಲ್ಲಿ ವಿಶ್ವವಿದ್ಯಾಲಯಗಳು ಮತ್ತು ಮಹಾವಿದ್ಯಾಲಯಗಳು ತಲೆಯತ್ತಿವೆ. ಆದರೆ ಗುಣಮಟ್ಟ ಎತ್ತ ಸಾಗುತ್ತಿದೆಯೆಂದು ಚಿಂತನ ನಡೆಸಲುಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಡಾ.ಚಂದ್ರಶೇಖರ ಗುಡಸಿ ಮಾತನಾಡಿ, ಸಮಸ್ಯೆ ಎಲ್ಲ ಕ್ಷೇತ್ರಗಳಲ್ಲಿ ಇವೆ ವಿಶ್ವದ ಶೇಷ್ಠ ವಿದ್ಯಾಲಯದ ಪಟ್ಟಿಯಲ್ಲಿ ಭಾರತದ ವಿಶ್ವವಿದ್ಯಾಲಯಗಳಿಗೆ ಸ್ಥಾನ ದೊರೆಯುತ್ತಿಲ್ಲ  ಸದ್ಯ ಬಿ. ಕಾಂ.ಕೋರ್ಸವು ಉನ್ನತ ಸ್ಥಾನದಲ್ಲಿದೆ.ಇದನ್ನುಮುಂದುವರಿಸಿಕೊಂಡು ಹೋಗುವುದೇ ನಮ್ಮ ಇಂದಿನ ಸವಾಲಾಗಿದೆ. ಸಂಶೋಧನೆ ಮಾಡಿದಶಿಕ್ಷಕರ ಸಂಶೋಧನಾಕಾರ್ಯಇನ್ನು ಮುಂದು ತೀವ್ರಗೊಳಿಸಬೇಕೆಂದು ಅಭಿಪ್ರಾಯಿಸಿದರು.

  ಈ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ಡಾ. ವೈ.ಜಿ. ಬಾಳಿಗಟ್ಟಿ ಮತ್ತು ಪಿ.ಹೆಚ್.ಡಿ ಪಡೆದ ಪ್ರಾಧ್ಯಾಪಕರಾದ ಸಿ.ವಿ. ಕೊಪ್ಪದ, ಬಿ.ಎಂ.ಹಿರೇಮಠ, ಈರಣ್ಣ ಬುಸ್ತಾಳಿ, ಎಂ.ಎಸ್. ಪಾಟೀಲ, ಹೆಚ್ಜೆ.ಮೋಳೆರಾಖಿ ಮತ್ತು ವಿವೇಕಾನಂದಉಗಾಢೆಯವರನ್ನು ಸತ್ಕರಿಸಲಾಯಿತು.ಇವರ ವಿವರವನ್ನು ಸಂಘದಖಜಾಂಚಿಡಾ.ಎಸ್.ಓ. ಹಲಸಗಿಯವರು ನೀಡಿದರು.

ಈ ಸಂದರ್ಭದಲ್ಲಿ  ಸಂಕಿರಣದ ಸಂಯೊಜಕ ಡಾ.ಅರ್.ಎಂ. ಪಾಟೀಲ, ಪರೀಕ್ಷಾ ಮಂಡಳಿಯ ಚೇರಮನ ಪ್ರೊ, ಡಿ.ಎಸ್. ಗುಡದಿನ್ನಿ, ಚಿಕ್ಕೋಡಿ ಉಪಾಧ್ಯಕ್ಷ ಪ್ರೊ.ಬಿ.ಎಸ್. ಮಾಳಿ, ಪ್ರೊ. ಎಂ.ಸಿ. ಬಕನೆತ್ತಿ, ಪ್ರೊ.ಎಸ್.ಕೆ.ಮೂಲಿಮನಿ, ಡಾ.ಸುವರ್ಣ ವಾಲಿಕಾರ, ಪ್ರೊ ಮಾರುತಿಡೊಂಬರ, ಪ್ರೊ.ಬಿ.ಎ. ಕಂಠಿ, ಪ್ರೊ.ಬಿ.ಎಸ್. ಕಾಚರ್ಿ ಪ್ರೊ.ನಾಕಾಚರ್ಿಹೀಗೆ ಸುಮಾರು 200 ಜನ ಪ್ರಾಧ್ಯಾಪಕ ಸದಸ್ಯರು ಕಾರ್ಯಕ್ರಮದಲ್ಲಿ ಹಾಗೂ ಉಪಸ್ಥಿತಿರಿದ್ದರು. 

ಈ ಕಾರ್ಯಕ್ರಮದಲ್ಲಿ ಪ್ರೊ. ಸಂದ್ಯಾಜೋಷಿ ಸ್ವಾಗತಗೀತೆ ಹಾಡಿದರು. ಪ್ರೊ.ಎಸ್.ಎಸ್. ಶಿಂದೆ ಸ್ವಾಗತಿಸಿದ್ದರು, ಡಾ. ವಿದ್ಯಾಜಿರಗೆ ಪರಿಚಯಿಸಿದರು.  ಪ್ರೊ.ನಾಗವೇಣಿ ಧರೇಣ್ಣವರ ನಿರೂಪಿಸಿದರು. ಸಂಘದ ಕಾರ್ಯದಶರ್ಿ ಡಾ.ಸಿ.ವಿ. ಕೊಪ್ಪದ ವಂದಿಸಿದರು.