ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸಿ ದೈಹಿಕ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು
ಧಾರವಾಡ 24: ಪ್ರತಿಯೊಬ್ಬ ವಿದ್ಯಾರ್ಥಿಯು ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಹಾಗೂ ನಮ್ಮ ಪರಂಪರೆಯನ್ನು ಉಳಿಸಿಕೊಳ್ಳಬೇಕು ಕ್ರೀಡೆಗಳು ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ ಎಂದು ಹುಬ್ಬಳ್ಳಿ ಜಿಮಖಾನ್ ಕ್ಲಬ್ ಅಧ್ಯಕ್ಷ ವಿನಾಯಕ ಆಕಳವಾಡಿ ಹೇಳಿದರು.
ಇಲ್ಲಿನ ಕೆ.ಇ. ಬೋರ್ಡಿನ ಪದವಿ ಪೂರ್ವ ಮಹಾವಿದ್ಯಾಲಯದ 2024-25 ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಿವೃತ್ತ ದೈಹಿಕ ಶಿಕ್ಷಕರು ರಾಮಚಂದ್ರ ಪಟ್ಟದಾರಿ ಇವರು ಮಾತನಾಡಿ, ಪ್ರತಿ ವಿದ್ಯಾರ್ಥಿಗಳಲ್ಲಿ ಕ್ರೀಡೆ ಕುರಿತು ವಿಶೇಷ ಆಸಕ್ತಿ ಜೊತೆಗೆ ನಿರಂತರ ಪ್ರಯತ್ನ ಅಗತ್ಯ. ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಸಾಹಿತಿ ಹೆಚ್ಚುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಂ.ಎ ಸಿದ್ಧಾಂತಿ ಮಾತನಾಡಿದರು.? ಪ್ರೊ ಶಿವಾನಂದ ಗಾಯಕ್ವಾಡ್ ಪ್ರತಿಜ್ಞಾವಿಧಿಯನ್ನು ಭೋದಿಸಿದರು.
ಕಾಲೇಜು ಆಡಳಿತ ಕಾರ್ಯಾಧ್ಯಕ್ಷರಾದ ಡಾ. ಸುನಿತ ಪುರೋಹಿತ್ ಹಾಗೂ ಕ್ರೀಡಾ ಅಭಿವೃದ್ದಿ ಅಧಿಕಾರಿ ವಸಂತ್ ಮುರ್ಡೇಶ್ವರ ಉಪಸ್ಥಿತರಿದ್ದರು. ಪ್ರೊ ಶಿವಪ್ಪ ಗಾಣಿಗೇರ ವಂದಿಸಿದರು. ಪೋಟೋ ಅಡಿಬರಹ ಕೆ.ಇ. ಬೋರ್ಡಿನ ಪದವಿ ಪೂರ್ವ ಮಹಾವಿದ್ಯಾಲಯದ ವಾರ್ಷಿಕ ಕ್ರೀಡಾಕೂಟವನ್ನು ಜಿಮಖಾನ್ ಕ್ಲಬ್ ಅಧ್ಯಕ್ಷ ವಿನಾಯಕ ಆಕಳವಾಡಿ ಉದ್ಘಾಟಿಸಿ ಮಾತನಾಡಿದರು