ಸಬ್ ಕಾ ವಿಶ್ವಾಸ ಬಜೆಟ್: ಎಂ.ಎಂ. ಹಿರೇಮಠ

ಲೋಕದರ್ಶನ ವರದಿ

ಗದಗ 05: ಕೇಂದ್ರದಲ್ಲಿ 2ನೇ  ಭಾರಿ ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ಮಂತ್ರಿ ಮಂಡಳದ ಹಣಕಾಸು ಸಚಿವೆ ಯಾದ ನಿರ್ಮಲಾ ಸೀತಾರಾಮನ್ ರವರು ಮಂಡಿಸಿದ ಮುಂಗಡ ಪತ್ರವು ಸಮಾಜದ ಎಲ್ಲಾ ಜನರಿಗೆ ಉಪಯೋಗವಾಗುವಂತಹ ಬಜೆಟ್ ಮಂಡಿಸಿದ್ದು. ಇದೊಂದು ಎಲ್ಲರ ವಿಶ್ವಾಸದ ಬಜೆಟ್ ಆಗಿದೆ ಎಂದು ಗದಗ ಜಿಲ್ಲಾ ಬಿಜೆಪಿ ವಕ್ತಾರರಾದ ಎಂ.ಎಂ.ಹಿರೇಮಠ ರವರು ಬಜೆಟ್ನ್ನು ಸ್ವಾಗತಿಸಿರುವರು.

ಅವರಿಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ಅರ್ಥ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರ ಮುಂದಾಲೋಚನೆಯಿಂದ ಸಮಾಜದಲ್ಲಿರತಕ್ಕಂತಹ ವಿದ್ಯಾಥರ್ಿಗಳು, ಯುವಕರು, ಮಹಿಳೆಯರು, ಹಿಂದುಳಿದ ವರ್ಗದ ಜನಾಂಗ, ಅಲ್ಪಸಂಖ್ಯಾತರಿಗೆ, ದಲಿತರಿಗೆ, ಕಾಮರ್ಿಕರಿಗೆ, ಬಡವರಿಗೆ ಮದ್ಯಮ ವರ್ಗದವರಿಗೆ ಹಾಗೂ ಸಮಾಜದಲ್ಲಿರುವ ಎಲ್ಲಾ ವರ್ಗದ ಜನರಿಗೂ ಅನುಕೂಲವಾಗುವಂತ ಬಜೆಟ್ನ್ನು ಮಂಡಿಸಿಅ, 2 ನೇ ಭಾರಿ ಮೋದಿಜಿಯವರು ಪ್ರಧಾನಮಂತ್ರಿಯಾಗಿದ್ದನ್ನು ಹಾಗೂ ಚುನಾವಣೆಯಲ್ಲಿ ನೀಡಿದ ಅನೇಕ ಭರವಸೆಗಳನ್ನು ಪ್ರಾಮಾಣಿಕವಾಗಿ ಜನರಿಗೆ ಮುಟ್ಟಿಸುವ ಬಜೆಟ್ನ್ನು ಮಂಡಿಸಿದ್ದು. ಸ್ವಾಗತಾರ್ಹ.