ರಾಷ್ಟ್ರೀಯ ಜಂತು ಹುಳು ನಿವಾರಣೆ ಕಾರ್ಯಕ್ರಮ ಯಶಸ್ವಿಗೊಳಿಸಿ

ಗದಗ 30:  ಜಿಲ್ಲೆಯಲ್ಲಿ  ಸೆಪ್ಟೆಂಬರ್ 25ರಂದು  ಜರುಗುವ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ ಕಾರ್ಯಕ್ರಮವನ್ನು   ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ  ಇನ್ನಿತರ ಇಲಾಖೆಗಳ ಸಹಯೋಗದೊಂದಿಗೆ,  ಆರೋಗ್ಯ ಇಲಾಖೆಯ  ಅನುಷ್ಠಾನ ಅಧಿಕಾರಿಗಳು ಕಾರ್ಯಕ್ರಮ ಯಶಸ್ವಿಗೊಳಿಸಲು ಗದಗ  ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ   ಅವರು ತಿಳಿಸಿದರು. 

ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ (ದಿ.29  ರಂದು) ಜರುಗಿದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಸಮನ್ವಯ  ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

      ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವಿರುಪಾಕ್ಷರೆಡ್ಡಿ ಮಾದಿನೂರ             ಅವರು  ಮಾತನಾಡಿ  ಸೆಪ್ಟೆಂಬರ್  25 ರಂದು  ಜರುಗಲಿರುವ  ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಬಗ್ಗೆ ಮಾಹಿತಿಯನ್ನು ನೀಡಿ,  ಜಿಲ್ಲೆಯಲ್ಲಿ 1 ರಿಂದ 19 ರ ವರ್ಷದೊಳಗಿನ ಸುಮಾರು 367412  ಮಕ್ಕಳಿಗೆ ಜಂತು ಹುಳು ನಿವಾರಣಾ  ಮಾತ್ರೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ  ತಿಳಿಸಿದರು.

      ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಬಿ.ಎಮ್.  ಗೊಜನೂರ ಅವರು ಮಾತನಾಡಿ ಜಂತುಹುಳುವಿನಿಂದ ಮಗುವಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ.   ಸ್ವಚ್ಛಕರ ವಾತಾವರಣ ನಿರ್ಮಾಣ ,     ಬಯಲು ಮಲವಿಸರ್ಜನೆ ತಡೆಗಟ್ಟುವುದು   ಮತ್ತು ಮಕ್ಕಳಿಗೆ, ಪಾಲಕರಿಗೆ ಸ್ವಚ್ಛತೆಯ ಕುರಿತು ತಿಳುವಳಿಕೆ ನೀಡುವುದು ಹಾಗೂ ಜಂತು ಹುಳು ನಿವಾರಣಾ ಮಾತ್ರೆಯನ್ನು ನೀಡುವದರ  ಮೂಲಕ   ಜಂತು ಹುಳುವಿನ ಬಾಧೆ   ತಡೆಗಟ್ಟಿ ಆರೋಗ್ಯಕರ ಸಮಾಜ ಇರಲು ಸಾಧ್ಯವಿದೆ. ಆಶಾ ಕಾರ್ಯಕತರ್ೆಯರಿಗೆ ಮತ್ತು ಅಂಗನವಾಡಿ ಕಾರ್ಯಕತರ್ೆಯರಿಗೆ   ತಾಲೂಕಾ ಮಟ್ಟದಲ್ಲಿ ಜಂತು ಹುಳು ನಿವಾರಣಾ ಮಾತ್ರೆ  ವಿತರಣೆ ಹಾಗೂ ಅದರ ಕುರಿತು ಜನಜಾಗೃತಿ ಮೂಡಿಸಲು    ತಿಳುವಳಿಕೆ ನೀಡಲಾಗುವುದು ಎಂದರು.

        ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರ್ರಣ ಅಧಿಕಾರಿ ಡಾ. ಅರುಂಧತಿ ಕೆ,   ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ.ಎಸ್.ಎಸ್. ನೀಲಗುಂದ, ಡಾ. ರೇಣುಕಾ ಕೋರನವರ, ತಾಲೂಕು ಆರೋಗ್ಯಾಧಿಕಾರಿಗಳು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ,  ತಾಲೂಕು ಆರೋಗ್ಯಾಧಿಕಾರಿಗಳು, ಕಾರ್ಯಕ್ರಮದ ಅನುಷ್ಟಾನ ಅಧಿಕಾರಿಗಳು,   ವಿವಿಧ ಇಲಾಖೆಯ ಅಧಿಕಾರಿಗಳು  ಉಪಸ್ಥಿತರಿದ್ದರು.