ಲೋಕದರ್ಶನ ವರದಿ
ಯರಗಟ್ಟಿ 05: ರಾಜ್ಯದ ರೈತರ ಕಬ್ಬಿನ ಹಿಂದಿನ ಬಾಕಿ ನೀಡದೆ ಮತ್ತು ಈ ಹಂಗಾಮಿನ ದರ ಘೋಷಣೆ ಮಾಡದೇ ರಾಜ್ಯದ ಸಕ್ಕರೆ ಖಾಕರ್ಾನೆಗಳು ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿದ್ದು ರೈತರಲ್ಲಿ ಗೊಂದಲ ಮೂಡಿದೆ ಸೂಕ್ತ ಬೆಲೆ, ಹಿಂದಿನ ಬಾಕಿ ನೀಡುವಂತೆ ಒತ್ತಾಯ ಕಬ್ಬಿನ ದರ ತಾರತಮ್ಯದ ವಿರುದ್ಧ ನ.5 ರಂದು ಮದ್ಯಾಹ್ನ 3ಕ್ಕೆ ಮೂಡಲಗಿಯ ಬಸವ ಮಂಟಪದಲ್ಲಿ ಕಬ್ಬು ಬೆಳೆಗಾರರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಪಕ್ಷಾತೀತವಾಗಿ ರೈತರ ಆಥರ್ಿಕ ಭದ್ರತೆಗಾಗಿ ಎಲ್ಲರೂ ಭಾಗವಹಿಸಬೇಕು ಎಂದು ಕನರ್ಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾದ್ಯಕ್ಷ ಕೆ.ಟಿ.ಗಂಗಾಧರ ಹೇಳಿದರು.
ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡುತ್ತಾ ರೈತನಿಗೆ ಕಬ್ಬಿನನಿಂದ ತಯಾರಾಗುವ ಸಕ್ಕರೆ ಆಧಾರಾದ ಮೇಲೆ ಬೆಲೆ ನೀಡಲಾಗುತ್ತಿದ್ದು ಕಬ್ಬಿನಿಂದ ಇನ್ನೂ ಹಲವಾರು ಉಪವಸ್ತುಗಳನ್ನು ತಯಾರಿಸಲ್ಪಡಲಾಗುತ್ತದೆ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಖಾಕರ್ಾನೆಗಳು ಕಬ್ಬಿಗೆ ಬೆಲೆ ನಿಗದಿ ಮಾಡಬೇಕು ಎಂದರು. ಕನರ್ಾಟಕ ರಾಜ್ಯ ರೈತ ಸಂಘ ಗೌರವಾದ್ಯಕ್ಷ ಚಾಮರಸ ಮಾಲಿಪಾಟೀಲ ಮಾತನಾಡುತ್ತಾ ಮುಖ್ಯ ಮಂತ್ರಿ ಕುಮಾರ ಸ್ವಾಮಿ ಒಬ್ಬ ಸುಳ್ಳುಗಾರ ಚುಣಾವನೆ ಪ್ರಣಾಳಿಕೆಯಲ್ಲಿ ಕೊಟ್ಟ ಬರವಸೆಗಳನ್ನು ಈಡೇರಿಸಲು ವಿಫಲನಾಗಿದ್ದು ರೈತರ ಸಾಲಮನ್ನಾ ವಿಷಯದಲ್ಲಿ ಹಲವಾರು ಕರಾರುಗಳನ್ನು ಅನ್ವಯಿಸಿ ಗೊಂದಲಮಯವಾಗಿದೆ. ಭಾರತ ದೇಶ ಕೃಷಿ ಪ್ರಧಾನ ದೇಶವಾಗಿದ್ದು ಶೇ ಎಪ್ಪತ್ತಕ್ಕಿಂತಲೂ ಹೆಚ್ಚು ಜನತೆ ಕೃಷಿಯನ್ನೇ ಉದ್ಯೋಗವನ್ನಾಗಿಸಿಕೊಂಡಿದ್ದು ರೈತರ ನೆರವಿಗಾಗಿ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಸ್ವಾಮಿನಾಥನ್ ವರದಿ ಹಾಗೂ ಎಸ್.ಎ.ಪಿ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ ನ. 19 ರಂದು ಬೆಂಗಳೂರ ವಿಧಾನಸೌಧ ಮುತ್ತಿಗೆ ಮತ್ತು ನ.30 ರಂದು ಪಾಲರ್ಿಮೆಂಟ್ ಚಲೊ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂಧರ್ಭದಲ್ಲಿ ರಾಜ್ಯ ಮುಖಂಡ ಕಲ್ಯಾಣರಾವ್ ಮುಚಳಂಬಿ, ರಾಜ್ಯ ಉಪಾದ್ಯಕ್ಷ ಶಿವುನಗೌಡ ಪಾಟೀಲ, ಜಿಲ್ಲಾದ್ಯಕ್ಷ ಈರನಗೌಡ ಪಾಟೀಲ, ಘಟಕಾದ್ಯಕ್ಷ ಶಮೀರ ಜಮಾದಾರ, ಜಿಲ್ಲಾ ಉಪಾದ್ಯಕ್ಷ ಗೌಡಪ್ಪಗೌಡ ಪಾಟೀಲ, ಕಾರ್ಯದಶರ್ಿ ಶಂಕರ ಹುಗ್ಗಿ, ಬಾಳಪ್ಪ ತಡಸಿ, ಬಾಳಪ್ಪ ಕಲ್ಲೋಳ್ಳಿ ಮುಂತಾದವರಿದ್ದರು. ನಂತರ ನುಗ್ಗಾನಟ್ಟಿ, ಬೂದಿಗೊಪ್ಪ, ಮಳಗಲಿ ಗ್ರಾಮಗಳಲ್ಲಿ ರೈತ ಸಂಘಟನೆಯ ಶಾಖೆಗಳನ್ನು ಉದ್ಘಾಟಿಸಲಾಯಿತು.