ಸ್ವಾಮಿ ವಿವೇಕಾನಂದ ಜಯಂತಿ: ಸಿಹಿ ವಿತರಣೆ

ಲೋಕದರ್ಶನ ವರದಿ

ಕೊಪ್ಪಳ 12: ತಾಲೂಕಿನ ಕಿನ್ನಾಳ ಗ್ರಾಮದ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ವತಿಯಿಂದ  ಸ್ವಾಮಿ ವಿವೇಕಾನಂದರ 156ನೇ ಜಯಂತಿಯ ಅಂಗವಾಗಿ ಗ್ರಾಮದ ವಿವೇಕಾನಂದ ವೃತ್ತ (ಕಾಮನಕಟ್ಟಿ) ಯಲ್ಲಿ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಸಿಹಿಯನ್ನು ಹಂಚುವುದರ ಮೂಲಕ ಕಾರ್ಯಕ್ರಮವನ್ನು ಆಚರಿಸಲಾಯಿತು.

ಕಾರ್ಯಕ್ರಮದ ಪ್ರಾಸ್ತವಿಕ ನುಡಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಮೌನೇಶ ಕಿನ್ನಾಳ ಮಾತನಾಡಿ ಸಂತರ ಸಂತ ಮಹಾತ್ಮರ ಮಹಾತ್ಮ ದೇಶಭಕ್ತ, ವೀರಸನ್ಯಾಸಿ, ಅಮೃತಪುತ್ರ ಸ್ವಾಮಿ ವಿವೇಕಾನಂದರ ಆದರ್ಶಗಳೊಂದಿಗೆ ಶಿಕ್ಷಣ, ಸಂಸ್ಕೃತಿ, ಸ್ವಾವಲಂಬನೆ ಎನ್ನವ ಆಶಯದೊಂದಿಗೆ ಉತ್ತಮವಾದ ಶಿಕ್ಷಣ ಅದರ ಮೂಲಕ ನಮ್ಮ ಸಂಸ್ಕೃತಿ ಏಳ್ಗೆ ನಂತರ ಸ್ವಾವಲಂಬನೆಯ ಬದುಕಿಗಾಗಿ ಈ ನಿಟ್ಟಿನಲ್ಲಿ ಸಂಸ್ಥೆಯು ಶೈಕ್ಷಣಿಕವಾಗಿ, ಧಾಮರ್ಿಕವಾಗಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಪ್ರವೃತ್ತವಾಗಿದೆ. ಇದಕ್ಕೆಲ್ಲಾ ಸ್ಪೂತರ್ಿ ಸ್ವಾಮಿ ವಿವೇಕಾನಂದರ ಅವರ ಆದರ್ಶ ಧೇಯ್ಯೊದ್ದೇಶಗಳನ್ನು ನಾವೆಲ್ಲಾ ಹೆಚ್ಚಾಗಿ ತೊಡಗಿಸಿಕೊಂಡು ಉತ್ತಮ ಪ್ರಜೆಗಳಾಗಿರಬೇಕು ಎಂದರು. ಹಾಗೂ ಇದೇ ತಿಂಗಳ 19 ರಂದು ಬ್ರಹತ್ ಶೋಭಯಾತ್ರೆ ಮತ್ತು ಬಹಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು ಎಲ್ಲರೂ ಭಾಗಿಯಾಗಿ ಯಶಸ್ವಿಗೊಳಿಸಬೇಕೆಂದು ಕೋರಿದರು.

ನಂತರ ಗ್ರಾಮದ ಹಿರಿಯರಾದ ಕಾಳಪ್ಪ ಮಾಸ್ತರ ಪತ್ತಾರ ಮಾತನಾಡಿ ಸರ್ವರೊಳಗೂ ಶಕ್ತಿ ಇದೆ. ಅದನ್ನು ನಾವೇ ಹೊರಹಾಕಬೇಕು ಈ ಜಗತ್ತೆ ಒಂದು ಗರಡಿಮನೆ ಎಂದ ಸ್ವಾಮಿ ವಿವೇಕಾನಂದರು ಶಕ್ತಿಯೇ ಜೀವನ ದುರ್ಬಲತೆಯೇ ಮರಣ ಎಂದು ಹೇಳುವುದರ ಜೊತೆ ನಿಮ್ಮಂತಹ ಯುವಕರಿಂದ  ಸದೃಢ ಭಾರತದ ನಿಮರ್ಾಣದ ಬುನಾದಿಯಾಗಿದೆ. ಸ್ವಾಮಿ ವಿವೇಕಾನಂದರ ಮಾರ್ಗದರ್ಶನದಲ್ಲಿ ಧೇಯ್ಯೊದ್ದೇಶಗಳನ್ನು ಇಟ್ಟುಕೊಂಡು ಅನೇಕ ಸಾಮಾಜಿಕ ಶೈಕ್ಷಣಿಕ ಕಾರ್ಯದಲ್ಲಿ ತೊಡಗಿರುವ ಈ ಸಂಸ್ಥೆ ಇನ್ನು ಎತ್ತರ ಬೆಳೆಯಲಿ ಎಂದರು.

ನಂತರ ಗ್ರಾಮ ಪಂಚಾಯತಿ ಸದಸ್ಯರಾದ ಬಸವರಾಜ ಚಿಲವಾಡ್ಗಿ ಹಾಗೂ ಯುವ ಮುಖಂಡರಾದ ಭಾಷಾ ಹಿರೇಮನಿ, ಅನೀಲ ಬೋರಟ್ಟಿ ಮತ್ತು ಶಿಕ್ಷಕರಾದ ಶಕೀಲ್ ಅಮ್ಮದ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಗ್ರಾಮದ ಹಿರಿಯರಾದ ಮಂಜುನಾಥ ಶಿರಗೇರಿ, ಉದಯಕುಮಾರ ಚಿತ್ರಗಾರ, ನಾಗರಾಜ ಬಿದರೂರು, ನರಸಿಂಹರಾವ್ ಕುಲಕಣರ್ಿ, ರಮೇಶ ಘೋರ್ಪಡೆ, ಪ್ರಶಾಂತ ಕುಲಕಣರ್ಿ, ಕೋಟ್ರೇಶ ಗಂಗಾವತಿ, ವಿರೇಶ ಇಟಗಿ, ಹನುಮೇಶ ಬುಡಶೆಟ್ನಾಳ ಶಿಕ್ಷಕರಾದ ಮುತ್ತಣ್ಣ ಕೆ, ಜಯಶ್ರೀ ಅಂಗಡಿ ಮತ್ತು ಶರಣಮ್ಮ ಶಿಕ್ಷಕರು ಹಾಗೂ ಸಂಸ್ಥೆಯ ಸರ್ವಪದಾಧಿಕಾರಿಗಳು ವಿದ್ಯಾಥರ್ಿಗಳು ಗ್ರಾಮದ ಯುವಕರು ಉಪಸ್ಥಿತಿಯಲ್ಲಿದ್ದರು. ಸಂಸ್ಥೆಯ ಜಂಟಿ ಕಾರ್ಯದಶರ್ಿ ರಾಘವೇಂದ್ರ ಕಿನ್ನಾಳ ಮತ್ತು ಸಂತೋಷ ಕಠಾರೆ ನಿರೂಪಿಸಿದರು. ಹಾಗೂ ಕೊನೆಗೆ ಸಂಸ್ಥೆಯ ಕಾರ್ಯದಶರ್ಿ ಮೈಲಾರಪ್ಪ ಕುಣಿ ವಂದಿಸಿದರು.