ರಾಣೇಬೆನ್ನೂರು ಬಸ್ ಸ್ಟ್ಯಾಂಡ್ ನಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ
ರಾಣೆಬೆನ್ನೂರು 12: ಇಲ್ಲಿನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಲ್ದಾಣದಲ್ಲಿ, ರವಿವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಾಖೆಯು ಸಿಡಿಲಸಂತ ಯೋಧ ಸನ್ಯಾಸಿ ಶ್ರೀ ಸ್ವಾಮಿ ವಿವೇಕಾನಂದರ 162ನೇ ಜಯಂತೋತ್ಸವನ್ನು ಆಚರಿಸಿದರು. ಕೆ.ಎಸ್.ಆರ್. ಟಿ.ಸಿ ವ್ಯವಸ್ಥಾಪಕ ಉಮೇಶ್ ನಾಯಕ್ ಅವರು ವಿವೇಕಾನಂದರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ, ಜಯಂತೋತ್ಸವಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಎಬಿವಿಪಿ ಕರ್ನಾಟಕ ಉತ್ತರ ಪ್ರಾಂತದ ರಾಜ್ಯ ಸಹ ಕಾರ್ಯದರ್ಶಿ ಅಭಿಷೇಕ್ ದೊಡ್ಡಮನಿ, ನಗರ ಸಹ ಕಾರ್ಯದರ್ಶಿ ಎಲ್ಲಮ್ಮ ಆರ್. ಎಂ, ಕಾರ್ಯಕರ್ತರಾದ ಬಸವರಾಜ್ ಬನ್ನಿಹಟ್ಟಿ, ವೈಷ್ಣವಿ ಕಂಬಳಿ, ಶೃತಿ ಆರ್.ಎಂ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.