ಆತ್ಮವಿಶ್ವಾಸದ ಅದಮ್ಯ ಚೇತನವೇ ಸ್ವಾಮಿ ವಿವೇಕಾನಂದ: ರಾಘು ಅಣ್ಣೀಗೇರಿ

ಲೋಕದರ್ಶನ ವರದಿ

ವಿಜಯಪುರ 12:ಸ್ವಾಮಿ ವಿವೇಕಾನಂದ ಎನ್ನುವ ಹೆಸರಲ್ಲೇ ಅದೇನೋ ಒಂದು ಚಮತ್ಕಾರವಿದೆ. ಪ್ರತಿಕ್ಷಣ ಆ ನಾಮವನ್ನು ಜಪಿಸುವವನು ಆತ್ಮ ಸಾಕ್ಷಾತ್ಕಾರಕ್ಕೆ ಒಳಗಾಗುತ್ತಾನೆ. ಹೀಗಿರುವಾಗ ಆ ಮಹಾತ್ಮನ ವಿಚಾರಗಳನ್ನು ಓದಿ ಜೀವನದಲ್ಲಿ ಅಳವಡಿಸಿಕೊಂಡರೆ ಆ ವ್ಯಕ್ತಿ ಜಗತ್ತನ್ನೇ ಗೆಲ್ಲುವಂತ ಶಕ್ತಿಯನ್ನು ಮೈತುಂಬಿಕೊಳ್ಳುತ್ತಾನೆ. ಕಾರಣ ಸ್ವಾಮಿ ವಿವೇಕಾನಂದ ಎಂದರೆ ಅವರು ಕೇವಲ ವ್ಯಕ್ತಿಯಲ್ಲ. ಆತ್ಮ ವಿಶ್ವಾಸದ ಅದಮ್ಯ ಚೇತನ. ರಣ ಹೇಡಿಯನ್ನು ಸಹ ರಣವಿಕ್ರಮನನ್ನಾಗಿ ಮಾಡುವ ಅವರ ಆದರ್ಶಗಳು ಇಂದು ಭಾರತದ ಯುವ ಪೀಳಿಗೆಗೆ ಅತ್ಯಾವಶ್ಯಕವಾಗಿವೆ ಎಂದು ಸ್ವಾಮಿ ವಿವೇಕಾನಂದ ಸೇನೆಯ ಕಾರ್ಯನಿರತ ರಾಜ್ಯಾಧ್ಯಕ್ಷ ರಾಘು ಅಣ್ಣೀಗೇರಿ ಹೇಳಿದರು.

ನಗರದ ವಿದ್ಯಾವರ್ಧಕ ಸಂಘದ ಕಲಾ, ವಾಣಿಜ್ಯ ಹಾಗೂ ಬಿಸಿಎ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ 157ನೇ ಜನ್ಮ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಯುವದಿನವನ್ನುದ್ದೇಶಿಸಿ ಮಾತನಾಡಿದ ಅವರು; ಸ್ವಾಮಿ ವಿವೇಕಾನಂದರಂತ ಸಿಡಿಲ ಸನ್ಯಾಸಿಯೋರ್ವರು ಭಾರತ ದೇಶದಲ್ಲಿ ಜನಿಸದೇ ಹೋಗಿದ್ದರೆ ಬಹುಶಃ ಭಾರತದ ಇತಿಹಾಸವು ಅಪೂರ್ಣವಾಗುತ್ತಿತೇನೊ ಎನ್ನಿಸುತ್ತದೆ. ಕಾರಣ ದೇಶಪ್ರೇಮದ ಪ್ರತಿರೂಪವಾಗಿದ್ದ ಸ್ವಾಮಿ ವಿವೇಕಾನಂದ ಜಗತ್ತಿನಾಧ್ಯಂತ ಸಂಚರಿಸಿ ಭಾರತದ ಸನಾತನ ಸಂಸ್ಕೃತಿ ಹಾಗೂ ಪರಂಪರೆಯ ಪರಿಚಯ ಮಾಡಿಸಿದರು. ಯುಶಕ್ತಿಯಲ್ಲಿನ ಸೂಪ್ತ ಶಕ್ತಿಯನ್ನು ಜಾಗೃತವನ್ನಾಗಿ ಮಾಡಿ ಸದೃಢ ಭಾರತ ನಿಮರ್ಾಣಕ್ಕಾಗಿ ಸತತ ಶ್ರಮಿಸಿದರು ಎಂದು ಹೇಳಿದರು.

ಆದರೆ ಇಂದು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮರೆತು ನಡೆಯುತ್ತಿರುವ ಯುವನತೆ ಅಧಃಪಥನದ ದಾರಿಯಲ್ಲಿ ಹೆಜ್ಜೆಹಾಕುತ್ತಿದ್ದಾರೆ. ಇದರಿಂದ ಸ್ವಾಮಿಜಿ ಕಂಡ ಕನಸು ಕನಸಾಗಿಯೇ ಉಳಿಯುತ್ತಿದೆ. ಇಂದಿನ ಯುವಕರು ಗರಡಿಮನೆಯಲ್ಲಿ ಕಳೆಯುವುದಕ್ಕಿಂತ ಹೆಚ್ಚಿನ ಸಮಯವನ್ನು ಮದಿರಾಖಾನೆಗಳಲ್ಲಿ ಕಳೆಯುತ್ತಿರುವುದು ದೇಶವನ್ನು ಮತ್ತಷ್ಟು ಕಳವಳಕ್ಕೀಡು ಮಾಡಿದೆ. ಅದಲ್ಲದೇ ಧರ್ಮದ ಹೆಸರಲ್ಲಿ ದೇಶ ಒಡೆಯುವ ಹುನ್ನಾರವು ಯುವಕರನ್ನು ದಾರಿ ತಪ್ಪಿಸುತ್ತಿದೆ. ಇದನ್ನು ಹೋಗಲಾಡಿಸುವ ಮೊದಲ ಹೆಜ್ಜೆ ಎಂದರೆ ಸಕರ್ಾರದ ಕಾರ್ಯಗಳಿಗಾಗಿ ತುಂಬವ ಅಜರ್ಿಯಲ್ಲಿ ಕೇವಲ ರಾಷ್ಟ್ರೀಯತೆ ಎನ್ನುವ ಒಂದೇ ಕಾಲಂ ಇರಬೇಕೆ ಹೊರತು ಧರ್ಮ ಎನ್ನುವುದಿರಬಾರದು. ಆಗ ಮಾತ್ರ ದೇಶಾಭಿಮಾನದ ಯುಗ ಆರಂಭವಾಗುತ್ತದೆ. ಯುವಕರು ಆತ್ಮಸಾಕ್ಷಾತ್ಕಾರಕ್ಕೆ ಒಳಗಾದಾಗ ಮಾತ್ರ ಭಾರತದ ಭವಿಷ್ಯ ಬದಲಾಗುತ್ತದೆ ಎಂದುಹೇಳಿದರು.

ಸಕರ್ಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಡಾ.ಸುಮಿತ್ರಾ ಸಾವಂತ ಹಾಗೂ ಪ್ರಾಚಾರ್ಯ ಜಿ.ಹೆಚ್. ಮಣ್ಣೂರವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಎನ್.ಎಸ್.ಎಸ್ ಘಟಕಾಧಿಕಾರಿಗಳಾದ ಆರ್.ಬಿ.ಕಪಾಳಿ ಹಾಗೂ ಸೀಮಾ ಪಾಟೀಲ ಉಪಸ್ಥಿತರಿದ್ದರು. ಬಿ.ಎಸ್.ಕರ್ಜಗಿ ಪ್ರಾಥರ್ಿಸಿದರು, ಉಪನ್ಯಾಸಕ ಎಂ.ಎಸ್.ದೊಡಮನಿ ಸ್ವಾಗತಿಸಿದರು, ಆರತಿ ಬಿಟಗೊಂಡ ವಂದಿಸಿದರು ಹಾಗೂ ಸುನೀಲ ಯಾದವ ನಿರೂಪಿಸಿದರು.