ಜಿಲ್ಲೆಯಲ್ಲಿ ಗೋಶಾಲೆ ಪ್ರಾರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಿ: ವಿಶ್ವನಾಥರೆಡ್ಡಿ

ಕೊಪ್ಪಳ 11: ತೀವ್ರ ಬರ ಹಿನ್ನೆಲೆ ರೈತರಿಗೆ ಅನುಕೂಲವಾಗುವಂತೆ ಕೊಪ್ಪಳ ಜಿಲ್ಲೆಯಾದ್ಯಂತ ಗೋಶಾಲೆಗಳನ್ನು ಪ್ರಾರಂಭಿಸಲು ಪಶುಸಂಗೋಪನಾ ಇಲಾಖೆಯು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್. ವಿಶ್ವನಾಥರೆಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.       

ಕೊಪ್ಪಳ ಜಿಲ್ಲಾ ಪಂಚಾಯತಿ ಮಾಸಿಕ ಕೆ.ಡಿ.ಪಿ. (ಕನರ್ಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಅಭಿವೃದ್ಧಿ ಕಾರ್ಯಕ್ರಮಗಳ 20 ಅಂಶಗಳ ಕಾರ್ಯಕ್ರಮ ಸೇರಿದಂತೆ) ಹಾಗೂ ವಿಶೇಷ ಅಭಿವೃದ್ಧ ಯೋಜನೆಯ ಕುರಿತು ಜಿ.ಪಂ. ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಶುಕ್ರವಾರದಂದು ಜರುಗಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಮಳೆ ಅಭಾವದಿಂದ ಕೊಪ್ಪಳ ಜಿಲ್ಲೆಯಲ್ಲಿ ಬರ ಸ್ಥಿತಿ ಹೆಚ್ಚಿದ್ದು, ರೈತರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ.  ಜಾನುವಾರುಗಳಿಗೆ ಮೇವು ದೊರಕಿಸಿಕೊಡಲು ಜಿಲ್ಲೆಯಲ್ಲಿ ಮೇವು ಬ್ಯಾಂಕ್ ಸ್ಥಾಪಿಸಿದ್ದು, ಇದರಿಂದ ಸ್ವಲ್ಪ ಅನುಕೂಲವಾಗುತ್ತಿದ್ದೆ.  ಆದರೂ ಸಹ ಮೇವು ಬ್ಯಾಂಕ್ನಿಂದ ದೂರ ಇರುವ ರೈತರು ಮೇವನ್ನು ತೆಗೆದು ಕೊಂಡು ಹೋಗುವುದಕ್ಕೆ ವಾಹನ ಬಾಡಿಗೆ ಹೀಗೆ ಅನೇಕ ಸಮಸ್ಯೆಯಾಗುತ್ತಿವೆ.  ಹೀಗಾಗಿ ಗೋಶಾಲೆಗಳನ್ನು ಸ್ಥಾಪಿಸಿದ್ದಲ್ಲಿ, ಜಾನುವಾರಗಳ ಜೊತೆ ರೈತರಿಗೂ ಸಹ ವಸತಿ ಸೌಕರ್ಯವನ್ನು ಕಲ್ಪಿಸಲಾಗುತ್ತದೆ.  ಗೋಶಾಲೆಗಳಿಂದ ರೈತರಿಗೆ ಲಾಭವಾಗುತ್ತದೆ.  ಆದ್ದರಿಂದ ಜಿಲ್ಲೆಯಲ್ಲಿ ಗೋಶಾಲೆಗಳ ಸ್ಥಾಪನೆಗೆ ಪಶುಸಂಗೋಪನಾ ಇಲಾಖೆಯು ಜಿಲ್ಲಾಧಿಕಾರಿಗಳ ಮೂಲಕ ಸಕರ್ಾರಕ್ಕೆ ಮನವಿ ಸಲ್ಲಿಸುವಂತೆ ಸೂಕ್ತ ಕ್ರಮ ವಹಿಸಬೇಕು.  

ಈ ಕುರಿತು ಜಿಲ್ಲೆಯ ಶಾಸಕರು ಈಗಾಗಲೇ ಕಂದಾಯ ಸಚಿವರಿಗೆ ಮನವಿ ಮಾಡಿದ್ದು, ಸಕರ್ಾರದಿಂದ ಒಪ್ಪಿಗೆ ಬಂದ ತಕ್ಷಣ ಗೋಶಾಲೆ ಪ್ರಾರಂಭಿಸಿ.  ಮುಂಬರು ಬೆಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು.  ಸದ್ಯ ಎಲ್ಲಿ ಸಮಸ್ಯೆಗಳಿವೇ ಎಂಬುದರ ಕುರಿತು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಎಲ್ಲಾ ಹಳ್ಳಿಗಳಲ್ಲಿ ಭೇಟಿ ನೀಡಿ ಪರಿಶೀಲಸಬೇಕು.  

ಶುದ್ಧ ಕುಡಿಯುವ ನೀರು ಪೂರೈಕೆಗೆ ವಿವಿಧ ಕಾಮಗಾರಿಗಳನ್ನು ಸಕರ್ಾರವು ಚಾಲನೆ ನೀಡಿದ್ದು, ಅವುಗಳು ಯಾವ ಹಂತದಲ್ಲಿವೆ.  ಬಾಕಿ ಉಳಿದ ಎಲ್ಲಾ ಕಾಮಗಾರಿಗಳು ಶೀಘ್ರ ಪೂರ್ಣಗೊಳ್ಳಬೇಕು.  ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳುತ್ತಿಲ್ಲ.  ಈ ಕುರಿತು ಲೋಕೋಪಯೋಗಿ ಇಲಾಖೆಯು ಜಿ.ಪಂ.ಗೆ ವರದಿ ಸಲ್ಲಿಸಬೇಕು.  ಅಲ್ಲದೇ ಎಲ್ಲಾ ಕಾಮಗಾರಿಗಳು ಉತ್ತಮ ಗುಣಮಟ್ಟದಲ್ಲಿರಬೇಕು.  ಡಾ. ಬಿ.ಆರ್. ಅಂಬೇಡ್ಕರ್, ಮಹಷರ್ಿ ವಾಲ್ಮೀಕಿ, ದೇವರಾಜ ಅರಸು ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಹಾಗೂ ವಿವಿಧ ಇಲಾಖೆಗಳ ಮೂಲಕ ನೀಡುವ ಸಕರ್ಾರದ ಹಲವು ಯೋಜನೆಗಳಡಿ ಫಲಾನುಭವಿಗಳ ಆಯ್ಕೆ ಪೂರ್ಣಗೊಂಡು, ಫೆ. 11 ರೊಳಗಾಗಿ ಸೌಲಭ್ಯ ಕಲ್ಪಿಸಬೇಕು.  ಎಲ್ಲಾ ಇಲಾಖೆಗಳ ಪ್ರಗತಿ ವರದಿಗಳು ಕಡ್ಡಾಯವಾಗಿ ಕನ್ನಡದಲ್ಲಿಯೇ ಇರಬೇಕು.  ಎಸ್.ಸಿ.ಪಿ./ ಟಿ.ಎಸ್.ಪಿ. ಯೋಜನೆಯಡಿ ಪರಿಶಿಷ್ಟ ಫಲಾನುಭವಿಗಳ ಹೊಲಗಳಲ್ಲಿ ನೀರುವಾರಿ ಸೌಲಭ್ಯ ಕಲ್ಪಿಸಲಾಗುತ್ತಿಲ್ಲ.  ಈ ಬಗ್ಗೆ ಸಣ್ಣ ನೀರಾವರಿ ಇಲಾಖೆ ತ್ವರೀತವಾಗಿ ಕ್ರಮ ವಹಿಸಬೇಕು.  ಎಲ್ಲಾ ಇಲಾಖೆಗಳ ಯೋಜನೆಗಳಡಿ ಫಲಾನುಭವಿಗಳ ಆಯ್ಕೆ ಪ್ರಕ್ರೀಯೆ ಬಾಕಿ ಉಳಿಯದಿರಲಿ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್. ವಿಶ್ವನಾಥರೆಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ರತ್ನವ್ವ ಬಿ. ನಗರ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಗೂಳಪ್ಪ ಹಲಗೇರಿ ಹಾಗೂ ಚಂಡೂರು ಹನುಮಂತಗೌಡ, ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ವೆಂಕಟ್ರಾಜಾ, ಉಪ ಕಾರ್ಯದಶರ್ಿ ಎನ್.ಕೆ. ತೊರವಿ, ಯೋಜನಾ ನಿದರ್ೇಶಕ ರವಿ ಬಸರಿಹಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.  ಸ್ವಚ್ಛ ಭಾರತ್ ಮಿಷನ್ (ಗ್ರಾ), ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಕಟಿಸಿದ 2019ರ ವಾಷರ್ಿಕ ಕ್ಯಾಲೇಂಡ್ ಇದೇ ಸಂದರ್ಭದಲ್ಲಿ ಬಿಡುಗಡೆ ಗೊಳಿಸಲಾಯಿತು.