ಲೋಕದರ್ಶನ ವರದಿ
ಧಾರವಾಡ23: ಎಸ್.ಡಿ.ಎಮ್.ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯ ಧಾರವಾಡದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗವು ವಿ.ಜಿ.ಎಸ್.ಟಿ.ಕನರ್ಾಟಕ ಸಕರ್ಾರದ ಪ್ರಾಯೋಜಕತ್ವದಅಡಿಯಲ್ಲಿ ಫ್ಯಾಕಲ್ಟಿಡೆವಲೆಪ್ಮೆಂಟ್ ಪ್ರೋಗ್ರಾಮ್ (ಎಫ್.ಡಿ.ಪಿ)ಗೆ ಸಂಬಂಧಿಸಿದಂತೆ 'ತಾಂತ್ರಿಕಶಿಕ್ಷಣ ಮತ್ತು ಭಾರತದಲ್ಲಿ ಕೌಶಲ್ಯ ಅಭಿವೃದ್ಧಿ' ವಿಷಯದ ಮೇಲೆ ಮೂರು ದಿನಗಳ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಈ ಕಾಯರ್ಾಗಾರದ ಉದ್ಘಾಟನೆಯನ್ನು ಡಾ. ಸತೀಶಅಣ್ಣಿಗೇರಿ, ರಿಜಿಸ್ರಾರ್, ಮೌಲ್ಯಮಾಪನ, ವಿಶ್ವೇಶ್ವರಯ್ಯಾತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಇವರು ನೆರವೇರಿಸುತ್ತ, ಭಾರತದಲ್ಲಿ ತಾಂತ್ರಿಕ ಶಿಕ್ಷಣದಲ್ಲಿ ಕೌಶಲ್ಯ ಮತ್ತು ಜ್ಞಾನದ ಅಗತ್ಯವನ್ನು ವಿವರಿಸಿದರು. ಇಂದು ದೇಶದಲ್ಲಿ ತಾಂತ್ರಿಕ ಶಿಕ್ಷಣದ ಸವಾಲುಗಳನ್ನು ಎದುರಿಸಬೇಕಾದ ಪ್ರಸ್ತುತ ಸನ್ನಿವೇಶದ ಬಗ್ಗೆ ಒತ್ತು ನೀಡಿದರು.ಈ ಬಗ್ಗೆ ತಾಂತ್ರಿಕ ಶಿಕ್ಷಣದ ಪಠ್ಯಕ್ರಮವನ್ನು ಬದಲಿಸುವ ಅಗತ್ಯತೆಯ ಬಗ್ಗೆ ಉಲ್ಲೇಖಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಮ್.ಶಿಕ್ಷಣ ಸಂಸ್ಥೆಯ ಕಾರ್ಯದಶರ್ಿಗಳಾದ ಜೀವಂಧರಕುಮಾರ್ ಇವರು ವಿದ್ಯಾಥರ್ಿಗಳ ವೃತ್ತಿ ಜೀವನವನ್ನು ರೂಪಿಸುವಲ್ಲಿ ಉತ್ತಮ ಶಿಕ್ಷಕರ ಜವಾಬ್ದಾರಿಯನ್ನು ಮತ್ತು ಅವರಿಗೆ ಕೌಶಲ್ಯ ಮತ್ತು ಜ್ಞಾನದ ಹಂತದ ಶಿಕ್ಷಣದ ಅವಶ್ಯಕತೆಯಿದೆ ಎಂದು ಹೇಳಿದರು.ಇದೇ ಸಂಧರ್ಭದಲ್ಲಿ ಪ್ರಾಚಾರ್ಯರಾದಡಾ.ಎಸ್.ಬಿ.ವಣಕುದರೆ ಇವರು ತಾಂತ್ರಿಕ ಶಿಕ್ಷಣದಲ್ಲಿ ಭೋಧನೆಯ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಸವಾಲುಗಳು ಹಾಗೂ ಅದರ ಕೌಶಲ್ಯಗಳ ಅಗತ್ಯತೆ ಇದೆ ಎಂದು ಹೇಳಿದರು.
ದೇಶಾದ್ಯಂತ ವಿವಿಧ ಇಂಜಿನಿಯರಿಂಗ್ ಕಾಲೇಜುಗಳಿಂದ ಸುಮಾರು 108 ಶಿಕ್ಷಕರು ಈ ಕಾಯರ್ಾಗಾರದ ಶಿಬಿರಾಥರ್ಿಗಳಾಗಿ ಭಾಗವಹಿಸಿದ್ದಾರೆ.ಈ ಮೂರು ದಿನಗಳಲ್ಲಿ ಐ.ಐ.ಟಿ, ಎನ್.ಐ.ಟಿ., ವಿಶ್ವವಿದ್ಯಾಲಯಗಳು, ಕಾಪೋರೇಟ್ ಕ್ಷೇತ್ರಗಳು ಮತ್ತು ಕೈಗಾರಿಕೆಗಳಂತಹ ಪ್ರಮುಖ ಸಂಸ್ಥೆಗಳಿಂದ ತಾಂತ್ರಿಕ ಶಿಕ್ಷಣದ ವಿವಿಧ ವಿಷಯಗಳ ಕುರಿತು ಉಪನ್ಯಾಸವನ್ನು ನೀಡಲಾಗುತ್ತಿದೆ.
ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಹಾಗೂ ಸಂಚಾಲಕರಾದ ಡಾ.ಅನಿಲಕುಮಾರ ಎಚ್.ಸಿ.ಇವರು ವಿಬಾಗದ ಬಗ್ಗೆ ವಿವರಣೆ ನೀಡುತ್ತ ಸ್ವಾಗತವನ್ನು ಕೋರಿದರು.ಡಾ. ಜಿ.ಎಮ್.ಗಡಾದ ಇವರು ಈ ಕಾಯರ್ಾಗಾರದ ಪ್ರಾಮುಖ್ಯತೆಯನ್ನ ತಿಳಿಸಿದರು. ಅಂತ್ಯದಲ್ಲಿ ವಿದ್ಯಾಥರ್ಿ ಕಲ್ಯಾಣ ವಿಭಾಗದಡೀನರಾದ ಡಾ.ಕೆ.ಗೋಪಿನಾಥ ಇವರು ವಂದನಾರ್ಪಣೆ ಸಲ್ಲಿಸಿದರು.ಈ ಕಾರ್ಯಕ್ರಮವನ್ನು ಡಾ.ವಿ.ಎಸ್.ಯಲಿವಾಳ ಇವರು ಸಂಘಟಿಸಿದ್ದರು.