ಜನಾಕರ್ಷಣೆ ಕೇಂದ್ರವಾದ ವಾತರ್ಾ ಇಲಾಖೆ ವಸ್ತು ಪ್ರದರ್ಶನ ಮಳಿಗೆ

ಧಾರವಾಡ 06: ಲಕ್ಷಾಂತರ ಜನಸ್ತೋಮದ ಮಧ್ಯೆ ಅರ್ಥಪೂರ್ಣವಾಗಿ ನಡೆಯುತ್ತಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯ ಆವರಣದಲ್ಲಿ ಕಲಾತ್ಮಕವಾಗಿ ವಿನ್ಯಾಸಗೊಳಿಸಿ ಸ್ಥಾಪಿಸಲಾಗಿರುವ  ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ  ವಸ್ತು ಪ್ರದರ್ಶನ ಮಳಿಗೆಯು ದಿನನಿತ್ಯ ಸಹಸ್ರಾರು ಜನರನ್ನು ಆಕಷರ್ಿಸುತ್ತಿದೆ.

ನಾಡಿನ ಹೆಸರಾಂತ ಕವಿಗಳ ಹಸ್ತಾಕ್ಷರ, ಲೇಖನಿ, ದೌತಿ (ಇಂಕ್ ಬಾಟಲ್), ಕನ್ನಡದ 8 ಜನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪುತ್ಥಳಿಗಳು, ಕೃತಿಗಳು ಹಾಗೂ ಕನರ್ಾಟಕ ನಕ್ಷೆಯಲ್ಲಿ ನಾಡಿನ ವೈವಿಧ್ಯತೆಯನ್ನು ಬಿಂಬಿಸುವ ಚಿತ್ರದೊಂದಿಗೆ ಮುಖ್ಯದ್ವಾರ ಮೊದಲ ನೋಟದಲ್ಲಿಯೇ ನೋಡುಗರ ಗಮನ ಸೆಳೆಯುತ್ತಿದೆ.

ಒಳಭಾಗದ ಮೊದಲ ವೃತ್ತದಲ್ಲಿ  ವರಕವಿ ಡಾ.ದ.ರಾ.ಬೇಂದ್ರೆ, ಸಾಹಿತಿ ಚನ್ನವೀರ ಕಣವಿ, ಸಮ್ಮೇಳನದ ಸವರ್ಾಧ್ಯಕ್ಷರಾದ ಡಾ.ಚಂದ್ರಶೇಖರ ಕಂಬಾರ ಅವರ ಜೀವನ  ಮತ್ತು ಸಾಧನೆಗಳನ್ನು ಬಿಂಬಿಸುವ 3 ಪ್ಯಾನೆಲ್ಗಳು, ಡಿ.ದೇವರಾಜ ಅರಸು ಅವರು ಮೈಸೂರು ರಾಜ್ಯಕ್ಕೆ ಕನರ್ಾಟಕ ಎಂದು ನಾಮಕರಣ ಮಾಡಿದ ಸಂದರ್ಭದ ಛಾಯಾಚಿತ್ರಗಳು, ನಾಡಿನ ಕವಿಕ್ಷೇತ್ರಗಳ ಕುರಿತಾದ ಸುಂದರ ವಿನ್ಯಾಸಗಳಿವೆ. 

ಎರಡನೇ ವೃತ್ತದಲ್ಲಿ ಕನರ್ಾಟಕ ಸಕರ್ಾರವು ಚೀನಾ ಮಾದರಿಯಲ್ಲಿ  ರಾಜ್ಯದ 9 ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್ಗಳ ಸ್ಥಾಪನೆ, ರೈತಬಂಧು ಯೋಜನೆಯಡಿ 48 ಸಾವಿರ ಕೋಟಿ ರೂ.ಮೊತ್ತದ ಬೆಳೆಸಾಲ ಮನ್ನಾ ಮಾಡಿ, 43.50 ಲಕ್ಷರನ್ನು ಋಣಮುಕ್ತರಾಗುವ ಹಾದಿಯಲ್ಲಿ ಸಾಗುತ್ತಿರುವುದು.

ಶೂನ್ಯಬಂಡವಾಳದ ಕೃಷಿ ಹಾಗೂ ಇಸ್ರೇಲ್ ತಂತ್ರಜ್ಞಾನ ಕೃಷಿ ಪದ್ಧತಿ ಅಳವಡಿಕೆಗೆ 350 ಕೋಟಿ ರೂ.ಅನುದಾನ ಒದಗಿಸಿರುವುದು. ಬಡವರ ಬಂಧು ಯೋಜನೆಯಡಿ ಬೀದಿ ಬದಿಯ ವ್ಯಾಪಾರಿಗಳಿಗೆ ಗರಿಷ್ಠ 10 ಸಾವಿರ ರೂ. ಬಡ್ಡಿರಹಿತ ಸಾಲ ಸೌಲಭ್ಯ, ಸರಕಾರಿ ಶಾಲಾ-ಕಾಲೇಜುಗಳಲ್ಲಿ ಮೂಲಸೌಕರ್ಯ ಗುಣಮಟ್ಟಕ್ಕೆ ಆದ್ಯತೆ ನೀಡುತ್ತಿರುವ ಕುರಿತ ಆಕರ್ಷಕ ವಿನ್ಯಾಸಗಳನ್ನು ಈ ಮಳಿಗೆಯಲ್ಲಿ ಅಳವಡಿಸಲಾಗಿದೆ.  

ಮಳಿಗೆಯ ಮುಂದೆ ಸೆಲ್ಫಿ: ಮೊದಲ ದಿನ 10 ಸಾವಿರಕ್ಕೂ ಹೆಚ್ಚುಜನ ಮಳಿಗೆಗೆ ಭೇಟಿ ನೀಡಿದ್ದಾರೆ. 3 ಸಾವಿರಕ್ಕೂ ಅಧಿಕ ಜನ ಅಭಿಪ್ರಾಯ ದಾಖಲಿಸಿದ್ದಾರೆ. ಎರಡನೇ ದಿನವಾದ ಜ.5ರಂದು ಕೂಡ ಸಾವಿರಾರು ಯುವಕರು ಮಳಿಗೆಯ ಮುಂದೆ ನಿಂತು ಸೆಲ್ಫಿ ತೆಗೆಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.