ಲೋಕದರ್ಶನ ವರದಿ
ಗದಗ 18: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದೇಶಾದ್ಯಂತ ಂಉಆಖಗ ಮತ್ತು ಓಗಉಆಖ ಕೇಂದ್ರ ಸಂಘಟನೆಗಳು ಅನಿದರ್ಿಷ್ಟ ಮುಷ್ಕರಕ್ಕೆ ಕರೆ ನೀಡಿದ ಹಿನ್ನಲೆಯಲ್ಲಿ ನಗರದ ಕೇಂದ್ರ ಅಂಚೆ ಕಚೇರಿಯ ಆವರಣದಲ್ಲಿ ಗ್ರಾಮೀಣ ಅಂಚೆ ನೌಕರರು ಅನಿಧರ್ಿಷ್ಠಾವದಿ ಮುಷ್ಕರಕ್ಕೆ ಬೆಂಬಲ ಸೂಚಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಉತ್ತರ ಕನರ್ಾಟಕ ವಲಯದ ಪ್ರಾಂತೀಯ ಕಾರ್ಯದಶರ್ಿ ಎಂ.ಎನ್. ಕುರಹಟ್ಟಿ ಅವರು ಮಾತನಾಡಿ, ಅಂಚೆ ಇಲಾಖೆಯ ಉನ್ನತ ಅಧಿಕಾರಿಗಳು ಕಮಲೇಶ್ ಚಂದ್ರ ವರದಿಯನ್ನು ಸಂಪೂರ್ಣವಾಗಿ ಅನುಮೋದನೆಗೆ ಕಳುಹಿಸದೆ ಗ್ರಾಮೀಣ ಅಂಚೆ ನೌಕರರ ಬೆನ್ನಿಗೆ ಚೂರಿ ಹಾಕಿದ್ಧಾರೆ. ಕೇಂದ್ರ ಮಂತ್ರಿಗಳಿಂದ ಸಹ ವೇತನವನ್ನು 3 ಪಟ್ಟು ಹೆಚ್ಚಿಸಿದ್ದೇವೆ ಎಂದು ಸುಳ್ಳು ಹೇಳಿಕೆಯನ್ನು ಹೇಳಿಸಿದ್ದಾರೆ. ನಮಗೆ ನ್ಯಾಯವಾಗಿ ಕೊಡಬೇಕಾದ ಸವಲತ್ತುಗಳನ್ನು ಕೊಡಲು ಮಿನಾಮೇಷ ಎಣಿಸುತ್ತಿರುವ ಇಲಾಖೆಯ ಹಿರಿಯ ಅಧಿಕಾರಿಗಳ ಮಲತಾಯಿ ಧೋರಣೆಯನ್ನು ಖಂಡನೀಯವಾಗಿದೆ ಎಂದು ಹೇಳಿದರು.
ಕಮಲೇಶ್ ಚಂದ್ರ ವರದಿಯ ಶಿಪಾರಸ್ಸುಗಳು ಇಲಾಖೆ ನೌಕರಿಗೆ ದೊರತಂತೆ ಗ್ರಾಮೀಣ ಅಂಚೆ ನೌಕರರಿಗೆ 01-01-2016 ರಿಂದ ಜಾರಿಯಾಗಬೇಕು ದೊರೆಯಬೇಕು. ಸೇವಾ ಜೇಷ್ಠತೆ ಮೇಲೆ ನೌಕರರಿಗೆ 12, 24, 36 ವರ್ಷಗಳು ಸೇವೆ ಸಲ್ಲಿಸಿದರೆ ನೀಡುವ ವಿಶೇಷ ಭಡ್ತಿಯನ್ನು ನೀಡಬೇಕು. 6 ಸಾವಿರ ರೂ.ಶಿಕ್ಷಣ ಭತ್ಯೆಯ ಆದೇಶವನ್ನು ನೀಡಬೇಕು. ವರದಿಯಲ್ಲಿ ತಿಳಿಸಿರುವಂತೆ ವಗರ್ಾವಣೆ ನೀತಿಯನ್ನು ಸಡಿಲಗೊಳಿಸಬೇಕು. ಒಬ್ಬರು ಕೆಲಸ ಮಾಡುತ್ತಿರುವ ಎಲ್ಲಾ ಬ್ರಾಂಚ್ ಪೋಸ್ಟ್ ಆಫೀಸ್ಗಳಿಗೆ ಎರಡು ಹುದ್ದೆಯನ್ನು ನೀಡಬೇಕು. ಎಲ್ಲಾ ಬ್ರಾಂಚ್ ಪೋಸ್ಟ್ ಆಫೀಸ್ಗಳಲ್ಲಿ ಕೆಲಸದ ಅವಧಿಯನ್ನು 8 ಗಂಟೆ ನಿಗದಿಗೊಳಿಸಿ ಎಲ್ಲಾ ಗ್ರಾಮೀಣ ಅಂಚೆ ನೌಕರರನ್ನು ಖಾಯಂ ಗೊಳಿಸಬೇಕು. ವರ್ಷಕ್ಕೆ 30 ದಿನಗಳ ರಜೆಯನ್ನು ನೀಡಬೇಕು, ಮತ್ತು 180 ದಿನಗಳು ರಜೆಯನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕು ಮತ್ತು ನಗದಿಕರಿಸಲು ಅಂದರೆ ಉಳಿಸಿಕೊಂಡ ರಜೆಯ ಹಣವನ್ನು ನಿವೃತ್ತಿ ಸಮಯದಲ್ಲಿ ನೀಡಬೇಕು.ಗ್ರಾಚ್ಯುಟಿ ಮಿತಿಯನ್ನು 1.5 ಲಕ್ಷರೂ.ಗಳಿಂದ ಸಮಿತಿಯ ಶಿಪಾರಸ್ಸಿನಂತೆ 5 ಲಕ್ಷ ರೂ.ಗಳವರೆಗೆ ಹೆಚ್ಚಿಸಬೇಕೆಂದು ಆಗ್ರಹಿಸಿ ಬೇಡಿಕೆ ಈಡೇರುವವರೆಗೂ ಅನಿಧರ್ಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗದಗ ಘಟಕದ ಜಿಲ್ಲಾಧ್ಯಕ್ಷ ಜಿ.ಆರ್.ಕಮ್ಮಾರ ಅವರು ಮಾತನಾಡಿ, ಇದೇ ಡಿ. 20 ಗುರುವಾರದಂದು ಬೆಳಿಗ್ಗೆ 11 ಗಂಟೆಗೆ ನಗರದ ತೋಂಟದಾರ್ಯ ಮಠದಿಂದ ಗ್ರಾಮೀಣ ಅಂಚೆ ನೌಕರರು ಮೆರವಣಿಗೆ ಮೂಲಕ ತೆರಳಿ ಮಹಾತ್ಮಾಗಾಂಧಿ ವೃತ್ತದಲ್ಲಿ ಮಾನವ ಸರಪಳಿ ಹಮ್ಮಿಕೊಳ್ಳಲಾಗುವುದು. ನಂತರ ಪ್ರಧಾನ ಅಂಚೇ ಕಚೇರಿಯ ಉಪ ಆಧೀಕ್ಷಕರಿಗೆ, ಸಂಸದರಿಗೆ ಹಾಗೂ ವಿಭಾಗೀಯ ಕಚೇರಿಯ ಅಂಚೆ ಆಧೀಕ್ಷಕರಿಗೆ ಗದಗ ಹಾಗೂ ಕೊಪ್ಪಳ ಜಿಲ್ಲೆಯ ಗ್ರಾಮೀಣ ಅಂಚೆ ನೌಕಕರಿಂದ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಹಾಯಕ ಕಾರ್ಯದಶರ್ಿ ಯು.ಪಿ.ಮುಷಣ್ಣವರ, ಗೌರವಾಧ್ಯಕ್ಷ ಎಂ.ಕೆ.ಹೊನ್ನಪ್ಪನವರ, ಬಿ.ಎಫ್ ಹಡಪದ, ಶರಣಪ್ಪ ಹೊಂಬಳ, ಎಂ.ಎಚ್.ಹೊಸಳ್ಳಿ, ಕೆ.ಎಸ್.ಬ್ಯಾಳಿ, ಮಹೇಶ ನರಗುಂದ, ರೇಣುಕಾ ಹೊಳೆಯಮ್ಮನವರ, ಅಶ್ವಿನಿ ಕುಲಕಣರ್ಿ, ಶಾರದಾ ನರಗುಂದ, ಎಚ್.ಎಂ.ಹುದ್ದಾರ, ಶ್ರೀದೇವಿ ಕಲಕೇರಿ, ವಾಣಿಶ್ರೀ ಕುಲಕಣರ್ಿ, ಬಿ.ಎಫ್ ಪೂಜಾರ, ಆರ್.ಆ..ಮಾಂಡ್ರೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.