ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಶ್ಲಾಘನೀಯ: ಜಿಲ್ಲಾಧಿಕಾರಿ ಹಿರೇಮಠ

ಗದಗ 27: ಸರಕಾರ ಮಾಡದ ಕೆಲಸವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಾಡುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಹೇಳಿದರು. 

ನಗರದ ಮುಳಗುಂದ ರಸ್ತೆಯಲ್ಲಿರುವ ಧರ್ಮಸ್ಥಳ ಯೋಜನಾ ಸಭಾಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಹಮ್ಮಿಕೊಂಡ ಜನಮಂಗಲ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯ 240 ಅತ್ಯಂತ ದುರ್ಬಲರು ಹಾಗೂ ವಿಕಲಚೇತನರಿಗೆ ಸುಮಾರು  5.45 ಲಕ್ಷ ರೂ.ಗಳ ಸಲಕರಣೆಗಳನ್ನು ವಿತರಿಸಿ ಅವರು ಮಾತನಾಡಿ, ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕ್ರಮಗಳು ಶ್ಲಾಘನೀಯವಾಗಿವೆ. ಸರಕಾರದ ಕೆಲವು ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾಗಿದೆ ಇರುವ ಕಾರ್ಯಕ್ರಮಗಳನ್ನು ಧರ್ಮಸ್ಥಳದ ಧಮರ್ಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ  ಗ್ರಾಮಾಭಿವೃದ್ದಿ ಯೋಜನೆಯು ಅತ್ಯಂತ ಯಶಸ್ವಿಯಾಗಿ ಮಾಡುತ್ತಿದೆ. ಬಡವರಿಗೆ, ಅಂಗವಿಕಲರಿಗೆ ಸರಕಾರದ ಸೌಲಭ್ಯಗಳನ್ನು ನೀಡಲು ಕೆಲವೊಂದು ಕಟ್ಟುಮಿಟ್ಟಿನ ನಿಯಮಗಳಿಂದ ಅವರು ವಂಚಿರಾಗುತ್ತಿದ್ದಾರೆ. ಅದರೆ, ಗ್ರಾಮಾಭಿವೃದ್ದಿ ಸಂಸ್ಥೆಯ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಮನೆ ಬಾಗಿಲಿಗೆ ತೆರಳಿ ಒದಗಿಸುತ್ತಿರಿರುವುದು ನಿಜವಾದ ಸೇವೆಯಾಗಿದೆ ಎಂದು ಹೇಳಿದರು. 

ಹೈದ್ರಾಬಾದ ಕರ್ನಾಟಕ  ಪ್ರಾದೇಶಿಕ ವಿಭಾಗದ ನಿದೇರ್ಶಕ ಪುರುಷೋತ್ತಮ ಪಿ.ಕೆ. ಅವರು ಮಾತನಾಡಿ, ಜಿಲ್ಲೆಯಲ್ಲಿ 240 ಫಲಾನುಭವಿಗಳಿಗೆ ಸಲಕರಣೆಗಳನ್ನು ವಿತರಿಸುತ್ತಿರುವುದು ರಾಜ್ಯದಲ್ಲಿ ಅತೀ ಹೆಚ್ಚು ಫಲಾನುಭವಿಗಳಿಗೆ ಸಲಕರಣೆ ವಿತರಿಸಲಾಗುತ್ತಿರುವ ಜಿಲ್ಲೆ ಗದಗ ಮಾತ್ರವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ರಾಜ್ಯದಲ್ಲಿ ನೀರು ಸಂಗ್ರಹವಾಗದ ಸುಮಾರು 200 ಕೆರೆಗಳನ್ನು ಹೂಳೆತ್ತುವ ಕಾರ್ಯವನ್ನು ಮಾಡುತ್ತಿದ್ದಾರೆ.  ಅದೇರೀತಿ ಗದಗ ಹಾಗೂ  ಕೊಪ್ಪಳ ಜಿಲ್ಲೆಯಲ್ಲಿ 18 ಕೆರೆಗಳನ್ನು ಹೂಳೆತ್ತುವ ಕಾರ್ಯ ಹಮ್ಮಿಕೊಂಡಿದ್ದು, ಪ್ರತಿ ಕೆರೆಗೆ 5 ರಿಂದ 24 ಲಕ್ಷ ರೂ.ಗಳಷ್ಟು ಖಚರ್ಾಗಲಿದೆ ಎಂದು ಹೇಳಿದರು. 

ವೇದಿಕೆ ಮೇಲೆ ಜಿಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ರ, ಪತ್ರಕರ್ತ ಮಂಜುನಾಥ ಬಮ್ಮನಕಟ್ಟಿ, ಉದ್ಯಮಿ ಈಶ್ವರಸಾ ಮೆಹರವಾಡೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿದರ್ೇಶಕ ಶಿವಾನಂದ ಆಚಾರ್ಯ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.  ಅರ್ಹ ಫಲಾನುಭವಿಗಳಿಗೆ ವೀಲ್ ಚೇರ್-87, ವಾಟರ್ಬೆಡ್-69, ವಾಕರ್ ಅಲ್ಯೂಮಿನಿಯಂ-33, ಎಲ್ಬೋ ಕ್ರಚಿಸ್-3, ಕಮೋಡ್ ಚೇರ್-20,ವಾಕಿಂಗ್ ಸ್ಟಿಕ್ ತ್ರಿ ಲೆಗ್-23, ವಾಕಿಂಗ್ಸ್ಟಿಕ್ ಸಿಂಗಲ್ ಲೆಗ್-5 ಸಲಕರಣೆಗಳು ಸೇರಿದಂತೆ ಸುಮಾರು 5,44,693 ರೂ. ಮೌಲ್ಯದ ಸಲಕರಣೆಗಳನ್ನು 240 ಫಲಾನುಭವಿಗಳಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಅನುಸೂಯಾ ಪ್ರಾಥರ್ಿಸಿದರು. ತಾಲ್ಲೂಕಾ ಯೋಜನಧಿಕಾರಿ ಸುಕೇಶ ಎ.ಎಸ್. ಕಾರ್ಯಕ್ರಮ ನಿರೂಪಿಸಿದರು. ಬೆಟಗೇರಿ ಮೇಲ್ವಿಚಾರಕ ಚಂದ್ರಶೇಖರ ವಂದಿಸಿದರು.