ಜಿಲ್ಲೆಯ ಐವರು ಉತ್ತಮ ನೌಕರರಿಗೆ ವಾರ್ಷಿಕ ಪ್ರಶಸ್ತಿ

ಲೋಕದರ್ಶನ ವರದಿ
ಕೊಪ್ಪಳ 01: ಕೊಪ್ಪಳ ಜಿಲ್ಲೆಯ ಸರಕಾರಿ ನೌಕರರಿಗೆ ಸರಕಾರಿ ರಂಗದ ಅಮೋಘ ಸೇವೆಗೆ ಜಿಲ್ಲೆಯ ಐವರಿಗೆ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಕೊಡಮಾಡುವ "ಬದಲಾವಣೆ ವಾಷರ್ಿಕ ಪ್ರಶಸ್ತಿ-2018" ಗೆ ಐದು ಜನ ಉತ್ತಮ ಸರಕಾರಿ ನೌಕರರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಆಗಷ್ಟ್ 18 ರಂದು ಸಾಹಿತ್ಯ ಭವನದಲ್ಲಿ ನಡೆಯುವ ಗಂಡುಗಲಿ ಕುಮಾರ ರಾಮ ಸ್ಮರಣೆಯ ಕುಮ್ಮಟ ದುಗರ್ೋತ್ಸವದಲ್ಲಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವದು ಅದಲ್ಲದೆ, ಅವರ ಸಾಧನೆಯ ನೋಟವನ್ನು ಪುಸ್ತಕ ರೂಪದಲ್ಲಿ ತರಲಾಗುತ್ತಿದೆ ಎಂದು ತಿಳಿಸಿದ್ದಾರೆ. ಸದರಿ ಕಾರ್ಯಕ್ರಮದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ವಾಲ್ಮೀಕಿ ಮಹಾಸ್ವಾಮಿಗಳು, ಕೊಪ್ಪಳ ಗವಿಮಠದ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸೇರಿದಂತೆ ಜನಪ್ರತಿನಿಧಿಗಳು, ಚಲನಚಿತ್ರ ನಟ ನಟಿಯರು, ವಿಧ್ವಾಂಸರು ಪಾಲ್ಗೊಳ್ಳುವರು.
ಕೊಪ್ಪಳ ಜಿಲ್ಲೆಯ ಸಹಾಯಕ ಆಯಕ್ತರಾದ ಸಿ.ಡಿ. ಗೀತಾ, ಸಮಾಜ ಕಲ್ಯಾಣ ಇಲಾಖೆ ಉಪನಿದರ್ೇಶಕ ಬಿ. ಕಲ್ಲೇಶ ಮೆಣೆದಾಳ, ಆರೋಗ್ಯ ಇಲಾಖೆಯ ನೌಕರ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಜುಮ್ಮನ್ನವರ್, ವಯಸ್ಕರ ಶಿಕ್ಷಣ ಇಲಾಖೆ ಜಿಲ್ಲಾ ಅಧಿಕಾರಿ ಉಮೇಶ ಎಂ. ಪೂಜಾರ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಮಹೆಮೂದ್ ಎಸ್. ರಾಯಚೂರ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಗೊಂಡಬಾಳ ಪ್ರಕಟಣೆ ನೀಡಿದ್ದಾರೆ