ಧಾರವಾಡ, 8 : ಭಾರತದ ಅಸಂಖ್ಯಾತ ಭಕ್ತಗಣದ ಶೃದ್ಧಾಭಕ್ತಿಯ ಸುಕ್ಷೇತ್ರವಾದ ಕೇರಳದ ಶಬರಿಮಲೆಯ ಶ್ರೀಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಇತ್ತೀಚೆಗೆ ಜರುಗಿದ ಮಹಿಳೆಯರ ಪ್ರವೇಶದ ಘಟನೆಯನ್ನು ಅಮ್ಮಿನಬಾವಿ ಗ್ರಾಮದ ಆಝಾದ ಯುವಕ ಮಂಡಳದ ಮಾಜಿ ಅಧ್ಯಕ್ಷ ಪ್ರಕಾಶ ಕಕರ್ಿ ಖಂಡಿಸಿದ್ದಾರೆ.
ಬ್ರಿಟಿಷರ ಆಡಳಿತದ ದಿನಗಳಿಂದಲೂ ನಾವು ಭಾರತದ ಧಾಮರ್ಿಕ ಇತಿಹಾಸದ ಪುಟಗಳನ್ನು ತೆರದು ನೋಡಿದಾಗ ಅಲ್ಲಿ ಧರ್ಮ ಪರಂಪರೆ, ಆಚರಣೆ, ಸಂಪ್ರದಾಯ ಹಾಗೂ ಕಟ್ಟುಪಾಡುಗಳಿಗೆ ಎಲ್ಲಿಯೂ ಚ್ಯುತಿ ಒದಗದಂತೆ ನೋಡಿಕೊಳ್ಳಲಾಗಿತ್ತು. ಪ್ರತಿಯೊಂದೂ ಧರ್ಮದ ಆಚರಣೆಗಳು ತಮ್ಮದೇ ಆದ ಸೂಕ್ಷ್ಮತೆಯನ್ನು ಹೊಂದಿವೆ. ಅವೆಲ್ಲವೂ ಪರಂಪರೆಯಿಂದ ನಡೆದುಕೊಂಡು ಬಂದ ಶಿಸ್ತಿನ ನೀತಿ-ನಿಯಮಗಳನ್ನು ಹೊಂದಿವೆ.
ಪ್ರಸ್ತುತ ಕೇರಳದ ಶಬರಿಮಲೆಯ ಶ್ರೀಅಯ್ಯಪ್ಪಸ್ವಾಮಿಯ ಆರಾಧನೆಯಲ್ಲಿ 48 ದಿನಗಳ ವೃತಾಚರಣೆ ಬಹಳಷ್ಟು ಕಠಿಣ ನಿಯಮಗಳ ಪಾಲನೆಯನ್ನು ಒಳಗೊಂಡಿದೆ. ಅದೇ ರೀತಿ ನೂರಾರು ವರುಷಗಳಿಂದ ಶಬರಿಮಲೆಯ ಶ್ರೀಅಯ್ಯಪ್ಪಸ್ವಾಮಿಯ ಸಾನ್ನಿಧ್ಯದಲ್ಲಿ ಮಹಿಳೆಯರಿಗೆ ಪ್ರವೇಶಗಳನ್ನು ನಿರ್ಬಂಧಿಸಲಾಗಿತ್ತು. ಈ ನಿಯಮವನ್ನು ಮೀರಿ ಬಹಳ ಉದ್ಧಟತನದಿಂದ ಅಲ್ಲಿ ಮಹಿಳೆಯರನ್ನು ದೇವಾಲಯದೊಳಗೆ ಪ್ರವೇಶ ಮಾಡಿಸಿದ್ದನ್ನು ಶ್ರೀಅಯ್ಯಪ್ಪಸ್ವಾಮಿಯ ಸಮಸ್ತ ಭಕ್ತಗಣ ಒಕ್ಕೊರಲಿನಿಂದ ಖಂಡಿಸುತ್ತದೆ.
ಭಕ್ತರ ನಂಬಿಕೆ, ವಿಶ್ವಾಸ, ಭಕ್ತಿ, ಶೃದ್ಧೆಗಳಿಗೆ ವ್ಯತಿರಿಕ್ತವಾದುದು ಧರ್ಮಕ್ಷೇತ್ರಗಳಲ್ಲಿ ನಡೆಯದಂತೆ, ಒತ್ತಾಯಪೂರ್ವಕವಾಗಿ ನಡೆಸದಂತೆ ರಾಜ್ಯ ಹಾಗೂ ಕೇಂದ್ರ ಸಕರ್ಾರಗಳು ಕಠಿಣವಾದ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಕೊಳ್ಳಬೇಕು. ಹಿಂದಿನಿಂದ ನಡೆದು ಬಂದ ಧಾಮರ್ಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಬಾರದು. ಧರ್ಮದ ವಿಚಾರಗಳಲ್ಲಿ ನಮ್ಮ ಸರಕಾರಗಳು ಕೈಹಾಕುವುದೆಂದರೆ ಅದು ಜೇನುಹುಟ್ಟಿಗೆ ಕೈಹಾಕಿದಂತೆ. ಹಾಗಾಗಿ ಧರ್ಮದ ಸೂಕ್ಷ್ಮ ಸಂಗತಿಗಳಲ್ಲಿ ಕೈಹಾಕಿ ಸುಟ್ಟುಕೊಳ್ಳುವುದನ್ನು ಕೂಡಲೇ ನಿಲ್ಲಿಸಬೇಕೆಂದು ಪ್ರಕಾಶ ಕಕರ್ಿ ತಮ್ಮ ಮಾಧ್ಯಮ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ