ಕಾಯಕ ಶ್ರೇಷ್ಠವಾದುದು: ಉಪನ್ಯಾಸಕ ಹೊಳಿ

ಲೋಕದರ್ಶನ ವರದಿ

ಗಜೇಂದ್ರಗಡ 04: ಬಸವಾದಿ ಶರಣರ ವಚನಗಳು ಕಾಯಕ ಪ್ರಧಾನ, ನಡೆ-ನುಡಿಯ ಅನುಭಾವ ಸಾಹಿತ್ಯವಾಗಿದೆ. ಈ ಸಾಹಿತ್ಯ ನಮ್ಮೆಲ್ಲರ ಮನ, ಮನೆ ತಟ್ಟಲಿ, ಮುಟ್ಟಲಿ ಆಗ ಸ್ವಸ್ಥ ಸಮಾಜ ನಿಮರ್ಾಣ ಸಾಧ್ಯವಾಗುತ್ತೆ. ಕುಂಬಾರಿಕೆ ಕಾಯಕದ ಮೂಲಕ ಶಿವನನ್ನು ಒಲಿಸಿಕೊಂಡ ಮಹಾಶರಣ ಕುಂಬಾರ ಗುಂಡಯ್ಯನವರು ಅವರ  ಶರಣ ಪತ್ನಿ ಕೇತಲಾದೇವಿ ಸಹ ಅವರೊಂದಿಗೆ ಕೈಜೋಡಿಸಿ ಶರಣೆಯಾಗಿ ಹಲವು ವಚನಗಳನ್ನು ಬರೆದದ್ದೊಂದು ಅವಿಸ್ಮರಣೀಯವಾಗಿದೆ. ಎಂದು ಉಪನ್ಯಾಸಕ ಬಸವರಾಜ ಹೊಳಿ ಹೇಳಿದರು.

ಅವರು ಪಟ್ಟಣದ ಮೈಸೂರುಮಠದಲ್ಲಿ ಜರುಗಿದ ಶರಣ ಕುಂಬಾರ ಗುಂಡಯ್ಯ ಹಾಗೂ ವಚನ ಪಿತಾಮಹ ಫ ಗು ಹಳಕಟ್ಟಿಯವರ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉಪನ್ಯಾಸಕರಾದ ಬಸವರಾಜ ಶೀಲವಂತರ ಮಾತನಾಡಿ ಶರಣ ಪರಂಪರೆ ಕಾಯಕಪ್ರಧಾನವಾಗಿದ್ದು ಅವರಂತೆ ನಾವು ಕಾಯಕಶೀಲರಾಗಬೇಕಾದುದ್ದು ಅವಶ್ಯವಾಗಿದೆ ಶರಣರ ಅಮೂಲ್ಯ ವಚನಗಳನ್ನು ಸಂಗ್ರಹಿಸಿದ ಕಿತರ್ಿ ಫ ಗು ಹಳಕಟ್ಟಿಯವರಿಗೆ ಸಲ್ಲುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಜಾ.ಲಿಂ.ಮಹಾಸಭಾದ ಸಂಚಾಲಕ ಗುರುಲಿಂಗಯ್ಯ ಓದಸುಮಠ ವಹಿಸಿದ್ದರು. ಕೆ ಎಸ್ ಸಾಲಿಮಠ ನಿರೂಪಿಸಿದರು,  ರವಿ ಗಡೇದವರ ವಂದಿಸಿದರು. ವೇದಿಕೆ ಮೇಲೆ ರವೀಂದ್ರ ಹೋನವಾಡ, ಮುದಕಪ್ಪ ಕುಂಬಾರ  ಉಪಸ್ಥಿತರಿದ್ದರು.