ವಿಜೃಂಭಣೆಯಿಂದ ಜರುಗಿದ ಶ್ರೀರಾಮಚಂದ್ರಜೀ ಮೂರ್ತಿಯ ಮೆರವಣಿಗೆ
ತಾಳಿಕೋಟೆ 07: ಸ್ಥಳೀಯ ಶ್ರೀರಾಮ ನವಮಿ ಉತ್ಸವ ಸಮಿತಿ ವತಿಯಿಂದ ಐತಿಹಾಸಿಕ ನಗರ ತಾಳಿಕೋಟೆ ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ಶ್ರೀರಾಮಚಂದ್ರ ಜೀ ಯವರ ಭವ್ಯ ಮೂರ್ತಿಯ ಮೆರವಣಗಿಗೆ ಭಾನುವಾರ ಸಂಜೆ ಮಹಾರಾಣಾ ಪ್ರತಾಪ ಸಿಂಹ ವೃತ್ತದಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು, ಪ್ರಭು ಶ್ರೀರಾಮರು ಶ್ರೀಕೃಷ್ಣನಂತೆ ಮ್ಯಾಜಿಕ್ ಮಾಡಿದವರಲ್ಲ ವಿಷ್ಣುವಿನ ಹಾಗೆ ಮಾಡಿದವರಲ್ಲ, ಅವರು ದೊಡ್ಡ ರಾಜನಾಗಿದ್ದರೂ ಪ್ರಜೆಗಳಿಗಾಗಿ ಹೇಗೆ ಸರಳವಾಗಿ ಬದುಕಬೇಕು ಎಂಬುದನ್ನು ತೋರಿಸಿದ್ದಾರೆ. ಅವರು ರಾಜಕಾರಣಿಗಳಿಗೆ ಸ್ವಾಮೀಜಿಗಳಿಗೆ , ನಾಯಕರುಗಳಿಗೂ ಆದರ್ಶವಾಗಿದ್ದಾರೆ. ಅವರ ಆದರ್ಶವನ್ನು ನಾವು ನಮ್ಮ ಬದುಕಿಗೆ ಅಳವಡಿಸಿಕೊಂಡರೆ ಉತ್ತಮ ಸಮಾಜದ ನಿರ್ಮಾಣ ಸಾಧ್ಯವಿದೆ ಎಂದರು.
ಗುಂಡಕನಾಳದ ಗುರುಲಿಂಗ ಶಿವಾಚಾರ್ಯರು ಚಾಲನೆ ನೀಡಿ ಮಾತನಾಡಿ ದಶರಥ ನಂದನ ರಾಮಚಂದ್ರಜೀ ಅವರ ಆದರ್ಶ ಜೀವನಗೆಲ್ಲರಿಗೂ ಮಾದರಿಯಾಗಿದೆ. ಹೆತ್ತವರ ವಚನ ಪಾಲನೆ, ಸೋದರ ಪ್ರೇಮ, ಶಿಷ್ಟ ರಕ್ಷಣೆ, ದುಷ್ಟ ಶಿಕ್ಷೆ ಯಂತಹ ವಿಷಯಗಳು ಅವರಿಂದ ನಾವು ಕಲಿಯಬೇಕಿದೆ ಎಂದರು. ಭವ್ಯ ಶೋಭಯಾತ್ರೆಯು ಮಹಾರಾಣಾ ಪ್ರತಾಪ ಸಿಂಹಜೀ ವೃತ್ತದಿಂದ ಶಿವಾಜಿ ವೃತ್ತ, ವಿಠ್ಠಲ ಮಂದಿರ, ಕತ್ರಿ ಬಜಾರ, ಅಂಬಾಭವಾನಿ ದೇವಸ್ಥಾನ, ಅಂಬೇಡ್ಕರ ವೃತ್ತ, ಬಸವೇಶ್ವರ ವೃತ್ತದ ಮಾರ್ಗವಾಗಿ ಮಹಾರಾಣಾ ಪ್ರತಾಪ ಸಿಂಹಜೀ ವೃತ್ತದಲ್ಲಿ ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಮುರುಗೇಶ ವಿರಕ್ತಮಠ, ದಶರಥಸಿಂಗ ಮನಗೂಳಿ,ಎಸ್.ಬಿ.ಕಟ್ಟಿಮನಿ, ಆರ್.ಎಸ್.ಪಾಟೀಲ ಕೂಚಬಾಳ, ಚಿಂತಪ್ಪಗೌಡ ಯಾಳಗಿ, ಎಚ್.ಎಸ್.ಪಾಟೀಲ, ಹರಿಸಿಂಗ್ ಮೂಲಿಮನಿ, ಮಾನಸಿಂಗ್ ಕೊಕಟನೂರ, ಬಾಬು ಹಜೇರಿ, ಗೋವಿಂದಸಿಂಗ ಮೂಲಿಮನಿ, ಜಯಸಿಂಗ ಮೂಲಿಮನಿ, ಸುರೇಶ ಹಜೇರಿ, ಶಿವಶಂಕರ ಹಿರೇಮಠ, ಪ್ರಕಾಶ ಹಜೇರಿ, ರಾಮನವಮಿ ಉತ್ಸವ ಸಮಿತಿಯ ಸದಸ್ಯರಾದ ಅಮಿತ್ ಸಿಂಗ್ ಮನಗೂಳಿ, ಗೋವಿಂದ್ ಸಿಂಗ್ ( ಪಿಂಟು) ಹಜೇರಿ, ವಿಠಲ್ ಬೆಕಿನಾಳ, ನಿತಿನ್ ಹಜೇರಿ, ಗಂಗಾರಾಮ್ ಕೊಕಟನೂರ, ರಾಜು ಹಜೇರಿ, ಸಂದೀಪ ತಿವಾರಿ, ಸೂರಜ್ ಹಜೇರಿ, ಪಿಂಟು ಹಜೇರಿ, ರಾಮು ದೇವಿ ಇದ್ದರು.