ಲೋಕದರ್ಶನ ವರದಿ
ಕೊಪ್ಪಳ 18: ಇತ್ತೀಚಿಗೆ ನಿಧನ ಹೊಂದಿದ ಚಿತ್ರ ನಟ, ಮಾಜಿ ಸಚಿವ, ಮಾಜಿ ಸಂಸದ, ಮಾಜಿ ಶಾಸಕ, ಅಂಬರೀಶ್ ರವರಿಗೆ ನಗರದ ಸಾಹಿತ್ಯ ಭವನದಲ್ಲಿ ಅಭಿನವ ಸಂಗೀತ ಕಲಾ ಹಾಗೂ ಸಾಂಸ್ಕೃತಿಕ ಶಿಕ್ಷಣ ಸಂಸ್ಥೆ ಏರ್ಪಡಿಸಿದ ಕನರ್ಾಟಕದ ಕರ್ಣ, ರೆಬೆಲ್ ಸ್ಟಾರ್ ಅಂಬಿಗೆ ಶ್ರದ್ಧಾಂಜಲಿ ಪ್ರಯುಕ್ತ ಗೀತ ನಮನ ಕಾರ್ಯಕ್ರಮವಾಗಿ ರಸಮಂಜರಿ ಕಾರ್ಯಕ್ರಮ ಜರುಗಿತು.
ಸಮಾರಂದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ. ಮಹಂತೇಶ ಮಲ್ಲನ್ ಗೌಡರ್ ವಹಿಸಿದ್ದರು ಪತ್ರಕರ್ತರ ಸಂಘದ ಅಧ್ಯಕ್ಷ ಎಂ. ಸಾದಿಕ್ ಅಲಿಯವರು ಅಂಬಿ ಭಾವ ಚಿತ್ರಕ್ಕೆ ಪುಷ್ಪನಮನ ಅಪರ್ಿಸಿ ಮಾತನಾಡಿದರು ಸಂಸ್ಥೆಯ ಗೌರವ ಅಧ್ಯಕ್ಷ ಹಾಗೂ ಪತ್ರಕರ್ತ ಸಿದ್ದಪ್ಪ ಹಂಚನಾಳ ಕಾರ್ಯಕ್ರಮ ಉದ್ಘಾಟಿಸಿದರು, ಮುಖ್ಯ ಅಥಿತಿಗಳಾಗಿ ಕೀಶೊರಿ ಬೂದೂರ್, ಗೀತಾ ಪಾಟಿಲ್, ವೀಣಾ ಹೂಳಗುಂದಿ, ಸುನಂದಾ ಹಂಚಿನಾಳ್, ಮುನಿರ್ ಸಿದ್ದಿಖಿ, ಅಭಿಯಂತರು ಮತ್ತು ಸಂಘಟನೆಗಳ ಪದಾಧಿಕಾರಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು, ಕಾರ್ಯಕ್ರಮ ಸಂಘಟಕ ಬಾಷಾ ಹೀರೆಮನಿ, ನೇತೃತ್ವದ ತಂಡ ರಸಮಂಜರಿ ಕಾರ್ಯಕ್ರಮ ನಡೆಸಿ ಅಂಬಿ ಚಲನಚಿತ್ರ ಹಾಡುಗಳನ್ನು ಹಾಡಿ ರಂಜಿಸಿದರು ಹಾಗೂ ಅಂಬಿಗೆ ಶ್ರದ್ಧಾಂಜಲಿ ಸಲ್ಲಿಸಿದರು.