ಹುಣಸಿಮರದ ಸಂಸ್ಥೆ ಕಾರ್ಯ ಶ್ಲಾಘನೀಯ: ಸುರೇಶ

ಲೋಕದರ್ಶನ ವರದಿ

ಗದಗ 12: ಜನಪ್ರೀಯ ಹುಣಸಿಮರದ ಹಿರಿಯ ಸೇವಾ ಸಂಸ್ಥೆಯ ಅಂಗ ಸಂಸ್ಥೆಯಾದ ಅಕ್ಕಮಹಾದೇವಿ ದಿವ್ಯಾಂಗ ಉದ್ಯೋಗಸ್ಥ ವಿದ್ಯಾಥರ್ಿನಿಯರ ಹಾಗೂ ಮಹಿಳೆಯರ ವಸತಿ ನಿಲಯ ಬಸವೇಶ್ವರ ನಗರ ಗದಗ. ವಿನೂತನ ಹಾಗೂ ವಿಕಲಚೇತನ ಸ್ನೇಹಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉದ್ಘಾಟಕರಾಗಿ ಜಿಲ್ಲಾ ಖಜಾನಾಧಿಕಾರಿಗಳು ಸುರೇಶ ಹಳ್ಯಾಳ ಅವರು ಆಡಳಿತ ಕಚೇರಿಯನ್ನು ಉದ್ಘಾಟಿಸಿದರು. ಅದೇ ರೀತಿಯಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಅಬಲೀಕರಣ ಅಧಿಕಾರಿಗಳಾದ ಆಶು ನದಾಫ ಅವರು ನವೀಕರಿಸಲಾದ ವಿದ್ಯಾಥರ್ಿನಿಯರ ಕೊಠಡಿಗಳನ್ನು ಉದ್ಘಾಟಿಸಿದರು. ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಅಕ್ಕನವರಾದ ರೇಖಾ ಅಕ್ಕನವರು ಅಡುಗೆ ಕೋಣೆಯನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದ ಸಂಸ್ಥೆಯ ಚೇರಮನ್ನರಾದ ಆರ್.ಸಿ.ಹುಣಸಿಮರದ, ವಸತಿ ನಿಲಯದ ಅಧೀಕ್ಷಕರಾದ ಮಲ್ಲಿಕಾಜರ್ುನ ಬಣಕಾರ, ಸೀತಮ್ಮ ಮಜ್ಜಿಗಿ, ಮೈಲಾರಿ ಗುಡಿಮನಿ, ಬಸವರಾಜ ಮಾಳೋಜಿ, ರೇಣುಕಾ ಆಡಕರ, ಸವಿತಾ ನಾಗಸಮುದ್ರ, ಖೈರೂನಾ ಬಂದಗಿ, ನಾಮದೇವಗೌಡರ ಹಾಗೂ ವಿದ್ಯಾಥರ್ಿನಿಯರು ಪಾಲ್ಗೊಂಡಿದ್ದರು.