ಧರ್ಮಸ್ಥಳ ಸಂಘದ ಕಾರ್ಯ ಶ್ಲ್ಯಾಘನೀಯ: ಶಾಸಕ ಡಾ. ಚಂದ್ರು ಲಮಾಣಿ
ಶಿರಹಟ್ಟಿ: ನಿರಾಶ್ರಿತರಿಗೆ ಆಶ್ರಯ ನೀಡಿ ಬದುಕು ಕಟ್ಟಿ ಕೊಡುವ ಮಹತ್ತರ ಕಾರ್ಯಕ್ರಮವನ್ನು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆಯವರುಹಮ್ಮಿಕೊಂಡಿರುವುದುಶ್ಲ್ಯಾಘನೀಯ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು. ಅವರು ಅಖಂಡ ಶಿರಹಟ್ಟಿ ತಾಲೂಕಿನ ಯಳವತ್ತಿ ಗ್ರಾಮದ ನಿರಾಶ್ರಿತ ವೃದ್ದ ಮಹಿಳೆ ಶ್ರೀಮತಿ ಪಾತಿಮಾಚಿಂಚಲಿ ಅವರಿಗೆ ಕ್ಷೇತ್ರ ಗ್ರಾಮಾಭಿವೃದ್ದಿ ವಾತ್ಸಲ್ಯ ಯೋಜನೆಯಡಿ ನಿರ್ಮಿಸಲಾದ ನೂತನ ಮನೆಯನ್ನು ಸೋಮವಾರ ಹಸ್ತಾಂತರಿಸಿ ಮಾತನಾಡಿದರು. ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾತ್ಸಲ್ಯ ಸದಸ್ಯರಿಗೆ ಮನೆ ನಿರ್ಮಾಣ.ಮಾತೃಶ್ರೀ ಹೇಮಾವತಿ ವಿಹೆಗ್ಗಡೆಯವರ ಅದ್ಭುತ ಚಿಂತನೆಯ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿನ ವಾತ್ಸಲ್ಯ ಮನೆ ಹಸ್ತಾಂತರ ಈ ಸಂದರ್ಭದಲ್ಲಿ ಗದಗ ಜಿಲ್ಲಾ ಗ್ರಾಮಾಭಿವೃದ್ದಿ ಯೋಜನೆಯ ನಿರ್ದೇಶಕ ಯೋಗೀಶ್ ಎಸ್. ಶಿರಹಟ್ಟಿಯ ಧರ್ಮಸ್ಥಳ ಸಂಘದ ಯೋಜನಾಧಿಕಾರಿಪುನೀತ್‌ಓಲೇಕಾರ, ಜ್ಞಾನ್ ವಿಕಾಸ ಯೋಜನಾಧಿಕಾರಿ ಶ್ರೀಮತಿ ಸುಧಾ, ವಲಯದ ಮೇಲ್ವಿಚಾರಕರು. ತಾಲೂಕಿನ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ. ತಾಲೂಕಿನ ಕೃಷಿ ಮೇಲ್ವಿಚಾರಕರು. ಒಕ್ಕೂಟದ ಅಧ್ಯಕ್ಷರು ಸೇವಾ ಪ್ರತಿನಿಧಿಗಳು. ಅಖಅ ಸೇವಾದಾರರು. ಸಂಘದ ಸದಸ್ಯರು ಉಪಸ್ಥಿತರಿದ್ದರು