ಸುಪ್ತ ಪ್ರತಿಭೆಗಳು ಬೆಳಕಿಗೆ ಬರಲು ವೇದಿಕೆ ಅವಶ್ಯ: ಅಮಾತೆ

ಲೋಕದರ್ಶನ ವರದಿ

ವಿಜಯಪುರ 21: ಯಾವ ಮಕ್ಕಳಲ್ಲಿ ಎಂತಹ ಪ್ರತಿಭೆ ಅಡಗಿದೆಯೊ ಗೊತ್ತಿಲ್ಲ ಅಂತಹ ಸುಪ್ತ ಪ್ರತಿಭೆಗಳು ಬೆಳಕಿಗೆ ಬರಬೇಕು ಎಂದರೆ ಅದಕ್ಕೆ ಒಂದು ವೇದಿಕೆ ಅತಿ ಅವಶ್ಯ. ಈ ರೀತಿಯ ಸಾಂಸ್ಕೃತಿಕ ಚಟುವಟಿಕಾ ಸ್ಪಧರ್ೆಗಳನ್ನು ನಡೆಸುವದರಿಂದ ಎಲೆಯ ಮರೆಯ ಕಾಯಿಯಂತಹ ಅನೇಕ ವಿದ್ಯಾಥರ್ಿಗಳು ತಮ್ಮ ಪ್ರತಿಭಾ ಪ್ರದರ್ಶನದಿಂದ ವ್ಯಕ್ತಿತ್ವ ವಿಕಾಸ ಮಾಡಿಕೊಳ್ಳಲು ಸಾಧ್ಯ ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿದರ್ೆಶಕ ಎಸ್.ವಾಯ್.ಅಮಾತೆ ಹೇಳಿದರು.

ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 2018-19 ನೇ ಸಾಲಿನ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಚಟುವಟಿಕಾ ಸ್ಪಧರ್ೆಯನ್ನು ಉದ್ಘಾಟಿಸಿ ಮಾತನಾಡುತ್ತ ಮಕ್ಕಳಲ್ಲಿನ ಪ್ರತಿಭೆ ರಾಜ್ಯ, ರಾಷ್ಟ್ರ ಮಟ್ಟಕ್ಕೆ ಹರಡಿ ಜಿಲ್ಲೆಯ ಕೀತರ್ಿ ಹೆಚ್ಚಲಿ ಎಂದು ಶುಭ ಹಾರೈಸಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ.ಡಿ.ಆರ್.ನಿಡೋಣಿಯವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವಿಕರಿಸಿ ಮಾತನಾಡಿದ ಅವರು ಮಕ್ಕಳ ಸಾಧನೆಗೆ ಉಪನ್ಯಾಸಕರ ಹಾಗೂ ಪಾಲಕರ ಪ್ರೇರಣೆ, ಸಹಕಾರ ಅಗತ್ಯ ಹಾಗಾಗಿ ಪ್ರಾಮಾಣಿಕ ಮತ್ತು ನಿರಂತರ ಪ್ರಯತ್ನ ಮಾಡಬೇಕು ಎಂದರು.     

ಪ್ರಾಚಾರ್ಯ ಎಚ್.ಆಯ್.ಮಾಲಗಾರ ಅಧ್ಯಕ್ಷತೆಯನ್ನು ವಹಿಸಿದ್ದರು. ಪ.ಪೂ.ಶಿ.ಇಲಾಖೆಯ ಆಧೀಕ್ಷಕ ಹಾಗೂ ಜಿಲ್ಲಾ ಸಾಂಸ್ಕೃತಿಕ ಚಟುವಟಿಕೆಗಳ ಸಂಘಟನಾ ಕಾರ್ಯದಶರ್ಿ ಪ್ರಕಾಶ.ಗೊಂಗಡಿ, ರಾಜ್ಯ ಪ್ರಶಸ್ತಿ ವಿಜೇತರಾದ ಪ್ರಾಚಾರ್ಯ  ಆರ್.ಎ.ಜಹಾಗಿರದಾರ, ಉಪನ್ಯಾಸಕರಾದ ಪ್ರೊ.ಮೀನಾಕ್ಷಿ.ಪಾಟೀಲ, ಪ್ರೊ. ಎಂ.ಬಿ.ರೆಬಿನಾಳ ವೇದಿಕೆಯ ಉಪಸ್ಥಿತರಿದ್ದರು.