ಗದಗ ಜಿಲ್ಲೆಯಲ್ಲಿ ಮೂರನೇ ಹಂತದಲ್ಲಿ ಚುನಾವಣೆ

ಗದಗ 11:    ಭಾರತ ಚುನಾವಣಾ ಆಯೋಗವು ದಿ. 10ರಂದು ಲೋಕಸಭಾ ಸಾರ್ವತ್ರಿಕ ಚುನಾವಣೆಯನ್ನು ಘೋಷಿಸಿದ್ದು,   ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯು   ಮಾರ್ಚ  10 ರಿಂದ ಪ್ರಾರಂಭಗೊಂಡಿದ್ದು  ಇಡೀ ಚುನಾವಣೆ ಪ್ರಕ್ರಿಯೆ ಮುಗಿಯವ ದಿನಾಂಕ ಮೇ 27 ರವರೆಗೆ ಜಾರಿಯಲ್ಲಿರುತ್ತದೆ.   ಎಂದು  ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು. 

ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ   ಜರುಗಿದ  ಪತ್ರಿಕಾಗೋಷ್ಟಿಯನ್ನುದ್ದೇಶಿಸಿ  ಅವರು ಮಾತನಾಡಿದರು.    

         ಗದಗ ಜಿಲ್ಲೆಯಲ್ಲಿ ಒಟ್ಟು 4 ವಿಧಾನಸಭಾ ಕ್ಷೇತ್ರಗಳಿದ್ದು,   65-ಶಿರಹಟ್ಟಿ, 66-ಗದಗ & 67-ರೋಣ ವಿಧಾನಸಭಾ ಕ್ಷೇತ್ರಗಳು 10-ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತಿದ್ದು ಹಾವೇರಿ ಜಿಲ್ಲಾಧಿಕಾರಿಗಳು   ಇದರ ಚುನಾಣಾಧಿಕಾರಿಗಳು ಆಗಿದ್ದಾರೆ.   ಹಾಗೂ 68-ನರಗುಂದ ವಿಧಾನಸಭಾ ಕ್ಷೇತ್ರವು 3-ಬಾಗಲಕೋಟ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತಿದ್ದು  ಬಾಗಲಕೋಟಿ  ಜಿಲ್ಲಾಧಿಕಾರಿಗಳು ಇದರ ಚುನಾವಣಾಧಿಕಾರಿಗಳಾಗಿದ್ದಾರೆ.     ಗದಗ ಜಿಲ್ಲೆಯಲ್ಲಿ  ಒಟ್ಟು 426712 ಪುರುಷ, 419526 ಮಹಿಳಾ, 49 ಇತರೆ ಮತದಾರರು ಹೀಗೆ ಒಟ್ಟು 846287 ಮತದಾರರು ಇದ್ದಾರೆ. ರಾಜ್ಯದಲ್ಲಿ  ಒಟ್ಟು ಎರಡು  ಹಾಗೂ ಮೂರನೇ ಹಂತದಲ್ಲಿ ಚುನಾವಣೆ ಜರುಗುತ್ತಿದ್ದು, ಗದಗ ಜಿಲ್ಲೆಯಲ್ಲಿ ಮೂರನೇ ಹಂತದಲ್ಲಿ ಚುನಾವಣೆ ಜರುಗಲಿದೆ. 

ಚುನಾವಣಾ ವೇಳಾಪಟ್ಟಿ: ಸಂಬಂಧಿತ ಲೋಕಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು  ಅಧಿಸೂಚನೆಯನ್ನು  ಮಾರ್ಚ 28 ರಂದು  ಹೊರಡಿಸಲಿದ್ದು, ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿ. ಎಪ್ರಿಲ್   04. ಇದ್ದು  ನಾಮಪತ್ರಗಳ ಪರಿಶೀಲನೆಯು  ಎಪ್ರಿಲ್ 05 ರಂದು ಜರುಗಲಿದೆ.   ಎಪ್ರಿಲ್ 8 ನಾಮಪತ್ರ ಹಿಂಪಡೆಯಲು  ಕೊನೆಯ ದಿನಾಂಕವಾಗಿದ್ದು , ಮತದಾನದ ದಿನಾಂಕ ಎಪ್ರಿಲ್ 23 ಆಗಿರುತ್ತದೆ.  ಮತ ಎಣಿಕೆಯು ಮೇ 23ರಂದು ಜರುಗಲಿದೆ.     

ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ  ಚುನಾವಣಾಧಿಕಾರಿ  ಜಿಲ್ಲಾ ಹಾಗೂ ವಿಧಾನಸಭಾ ಕ್ಷೇತ್ರಗಳ  ಸಹಾಯಕ  ಚುನಾವಣಾಧಿಕಾರಿಗಳನ್ನು ನಿಯಮಿಸಲಾಗಿದೆ.  ಜಿಲ್ಲಾ ಸಹಾಯಕ ಚುನಾವಣಾಧಿಕಾರಿ  ಶಿವಾನಂದ ಕರಾಳೆ ಅಪರ ಜಿಲ್ಲಾಧಿಕಾರಿಗಳು ಗದಗ.     65 ಶಿರಹಟ್ಟಿ  ವಿಧಾನಸಭಾ ಕ್ಷೇತ್ರ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ  ಆರ್.ಟಿ. ಪಡಗಣ್ಣವರ, 66 ಗದಗ -  ಉಪವಿಭಾಗಾಧಿಕಾರಿ  ಶಿವಾನಂದ ಭಜಂತ್ರಿ,    67 ರೋಣ -  ಜಿ.ಪಂ. ಉಪಕಾರ್ಯದಶರ್ಿ  ಡಿ. ಪ್ರಾಣೇಶ  ರಾವ್  ಹಾಗೂ 68 ನರಗುಂದ ವಿಧಾನಸಭಾ ಕ್ಷೇತ್ರಕ್ಕೆ ಸದಾಶಿವ ಮಜರ್ಿ ಅವರುಗಳು ಸಹಾಯಕ ಚುನಾವಣಾಧಿಕಾರಿಗಳಾಗಿದ್ದಾರೆ.   

ಮಾದರಿ ನೀತಿ ಸಂಹಿತೆ ಅನುಷ್ಟಾನ:  ಮಾದರಿ ನೀತಿ ಸಂಹಿತೆಯನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ    ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.  ಜಿಲ್ಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 6 ರಂತೆ ಒಟ್ಟು 24 ಸಂಚಾರಿ ದಳಗಳನ್ನು (ಈಟಥಿಟಿರ ಖಡಣಚಿಜ-ಈಖ) ರಚಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 18 ಚೆಕ್ಕ ಪೋಸ್ಟಗಳನ್ನು ತೆರೆಯಲಾಗಿದ್ದು, ಸದರಿ ಚೆಕ್ಕಪೋಸ್ಟ್ಗೆ ಒಟ್ಟು 54 ಅಧಿಕಾರಿಗಳ ಸ್ಥಿರ ಕಣ್ಗಾವಲು ತಂಡ (ಖಣಚಿಣಛಿ ಖಣಡಿತಜಟಟಚಿಟಿಛಿಜ ಖಿಜಚಿಟ-ಖಖಖಿ) ವನ್ನು ರಚಿಸಲಾಗಿದೆ. ಪ್ರತಿ ಅಭ್ಯಥರ್ಿಯ ಚುನಾವಣಾ ವೆಚ್ಚಗಳ ಕುರಿತು ನಿಗಾ ವಹಿಸಲು ಜಿಲ್ಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರಂತೆ 4 ಸಹಾಯಕ ವೆಚ್ಚ ವೀಕ್ಷಕರನ್ನು (ಂಇಔ), ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 3 ರಂತೆ ವಿಡಿಯೋ ಕಣ್ಗಾವಲು ತಂಡವನ್ನು (ಗಿಖಖಿ), ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಇಬ್ಬರಂತೆ 4 ಲೆಕ್ಕ ತಂಡವನ್ನು (ಂಛಿಛಿಠಣಟಿಣಟಿರ ಖಿಜಚಿಟ) ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರಂತೆ 4 ವಿಡಿಯೋ ವೀಕ್ಷಕರ ತಂಡವನ್ನು (ಗಿಗಿಖಿ) ರಚಿಸಲಾಗಿದೆ. ಆಯೋಗದ ನಿದರ್ೇಶನಗಳಂತೆ ವೇಳಾಪಟ್ಟಿ ಘೋಷಣೆಯಾದ 24 ಗಂಟೆಯೊಳಗೆ ಸಾರ್ವಜನಿಕರಿಗೆ ಕಾಣುವ ರೀತಿಯಲ್ಲಿ ಸರಕಾರಿ / ಖಾಸಗಿ ಕಟ್ಟಡ ಹಾಗೂ ಸ್ಥಳಗಳಲ್ಲಿ ಹಾಕಲಾಗಿರುವ ಕಟೌಟ್, ಬ್ಯಾನರ್ಸ್ ಇತರೆ ಸಾಮಗ್ರಿಗಳನ್ನು ತೆರವುಗೊಳಿಸಲು ನಗರ / ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಹಾಗೂ  ಗ್ರಾ. ಪಂ.  ಪಿ.ಡಿ.ಓಗಳಿಗೆ ನಿದರ್ೇಶನ ನೀಡಲಾಗಿದೆ.      

        ಜಿಲ್ಲೆಯಲ್ಲಿ ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ಸಲಹೆ, ಮಾಹಿತಿ, ಪ್ರತಿಕ್ರಿಯೆ ಹಾಗೂ ದೂರು ಸಲ್ಲಿಸಲು ಜಿಲ್ಲಾ ಮಟ್ಟದಲ್ಲಿ 1950   ಎಂಬ ದೂರವಾಣಿ ಸಂಖ್ಯೆಯುಳ್ಳ  ಸಹಾಯವಾಣಿ ತೆರೆಯಲಾಗಿದ್ದು, ಮತದಾರರು / ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದಂತೆ  ಇದರ    ಸದುಪಯೋಗ ಪಡೆಯಲು ತಿಳಿಸಲಾಗಿದೆ..    

       ಭಾರತ ಚುನಾವಣಾ ಆಯೋಗವು ಈ ಬಾರಿ ನೂತನವಾಗಿ   ಸಿ ವಿಜಿಲ್  ಎಂಬ ಆಪ್ ರೂಪಿಸಿದ್ದು,  ಇದನ್ನು  ಸಾರ್ವಜನಿಕರು ಗೂಗಲ್  ಪ್ಲೇಸ್ಟೋರ್ನಲ್ಲಿ ಡೌನ್ಲೋಡ್  ಮಾಡಿಕೊಂಡು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕುರಿತು ಯಾವುದೇ ಘಟನೆಗಳು ಜರುಗಿದಲ್ಲಿ ಈ ಕುರಿತು  ದಾಖಲಿಸಬಹುದು,    ಜಿಲ್ಲೆಯಲ್ಲಿ ಸ್ಥಾಪಿಸಲಾದ ಒಟ್ಟು 959 ಮತಗಟ್ಟೆಗಳ ಪೈಕಿ 100 ಮತಗಟ್ಟೆಗಳನ್ನು ಕ್ರಿಟಿಕಲ್ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಸದರಿ ಮತಗಟ್ಟೆಗಳಿಗೆ ಆಯೋಗದ ಮಾನದಂಡದಂತೆ ಸಿ.ಎ.ಪಿ.ಎಫ್ ಅಥವಾ ಮೈಕ್ರೋ ಅಬ್ಸರ್ವರ್ ಅಥವಾ ವೆಬ್ ಕಾಸ್ಟಿಂಗ್ ಅಥವಾ ವಿಡಿಯೋ ಚಿತ್ರೀಕರಣ ಕಾರ್ಯವನ್ನು ಜರುಗಿಸಲಾಗುವುದು ಹಾಗೂ ಎಲ್ಲ ಮತಗಟ್ಟೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತಿದೆ.  

        ಪತ್ರಿಕಾಗೋಷ್ಟಿಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ನಗರಾಭಿವೃದ್ಧಿ ಕೋಶದ ಯೋಜನಾ  ನಿದರ್ೇಶಕ ಕರಿಲಿಂಗಣ್ಣವರ ಹಾಗೂ ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಿದ್ದರು.