ಉತ್ತಮ ಪತ್ರಕರ್ತರಾಗಲು ಬರವಣಿಗೆ, ಸಾಮಾನ್ಯ ಜ್ಞಾನ, ಸಕರ್ಾರದ ಯೋಜನೆಗಳ ತಿಳುವಳಿಕೆ ಅಗತ್ಯ: ಬಸವರಾಜ ಕಂಬಿ

ಧಾರವಾಡ 30: ಉತ್ತಮ ಪತ್ರಕರ್ತರಾಗಲು ಸುದ್ದಿ ಬರವಣಿಗೆ ಸಾಮಾನ್ಯ ಜ್ಞಾನದ ಜೊತೆಗೆ  ಸಕರ್ಾರದ ಯೋಜನೆಗಳ ಕುರಿತು ತಿಳುವಳಿಕೆ ಇರಬೇಕು ಎಂದು ಬೆಂಗಳೂರಿನ ರಾಜ್ಯ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿದರ್ೇಶಕ ಬಸವರಾಜ ಕಂಬಿ ಹೇಳಿದರು.

    ಕನರ್ಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು  ಸಂವಹನ ವಿಭಾಗದಲ್ಲಿ  ಶನಿವಾರ 'ವಿದ್ಯಾಸಮಾಚಾರ' ವಿದ್ಯಾಥರ್ಿಗಳ ಪ್ರಾಯೋಗಿಕ ಎಂಟು ಸಂಚಿಕೆಗಳನ್ನು ಬಿಡುಗಡೆ ಮಾಡಿ ವಿದ್ಯಾಥರ್ಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

 ಕವಿವಿ ಪತ್ರಿಕೋದ್ಯಮ ವಿಭಾಗದಲ್ಲಿ 1982 ರಲ್ಲಿ ಪ್ರಥಮ ಬ್ಯಾಚ್ ವಿದ್ಯಾಥರ್ಿಯಾಗಿದ್ದಾಗ ವಿದ್ಯಾ ಸಮಾಚಾರದ ಮೊದಲ ಸಂಚಿಕೆಯಲ್ಲಿ ಬರೆದಿದ್ದ ಲೇಖನವನ್ನು ನೆನಪಿಸಿಕೊಂಡ ಅವರು, ಕಳೆದ ಮೂವತೈದು ವರ್ಷಗಳಲ್ಲಿ ಹಲವಾರು  ಜನ ವಿದ್ಯಾಥರ್ಿಗಳು ಈ ಪತ್ರಿಕೆಯಲ್ಲಿ ಲೇಖನ ಬರೆದು, ಈಗ ನಾಡಿನ ವಿವಿಧ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು. 

   ಕನರ್ಾಟಕದ ಹೆಮ್ಮೆಯ ಪತ್ರಕರ್ತ ಹಾಗೂ ಸಾಹಿತಿಯಾದ ನಾಡೋಜ ಡಾ. ಪಾಟೀಲ ಪುಟ್ಟಪ್ಪನವರ  ಶತಮಾನೋತ್ಸವ ಅಂಗವಾಗಿ ಕನರ್ಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಕನರ್ಾಟಕ ಮಾಧ್ಯಮ ಅಕಾಡೆಮಿ, ಕನರ್ಾಟಕ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವುಗಳ ಸಹಯೋಗದಲ್ಲಿ ಬರುವ 2019ರ ಫೆಬ್ರುವರಿಯಲ್ಲಿ ಒಂದು ದಿನದ ಸಮ್ಮೇಳನ ನಡೆಸಲು ಎಲ್ಲ ಸಹಕಾರ ನೀಡಲಾಗುವುದು. ಮತ್ತು ಇದೇ ಸಂದರ್ಭದಲ್ಲಿ ವಿವಿಧ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸುತ್ತಿರುವ  ಕನರ್ಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ (ಕವಿಪವಿ) ಹಳೆಯ ಎಲ್ಲ  ವಿದ್ಯಾಥರ್ಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

     ಪ್ರತಿ ವರ್ಷ ಜನವರಿ 26 ರಂದು ಗಣರಾಜ್ಯೋತ್ಸವದಲ್ಲಿ  ರಾಷ್ಟ್ರದ  ರಾಜಧಾನಿ  ದಿಲ್ಲಿಯಲ್ಲಿ ನಡೆಯುವ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಕನರ್ಾಟಕ ರಾಜ್ಯದ ಸ್ತಬ್ಧ ಚಿತ್ರವು ಸತತ 10 ವರ್ಷಗಳಿಂದ ಆಯ್ಕೆ ಆಗುತ್ತಲೇ ಬಂದಿರುವದು ರಾಜ್ಯದ ಹೆಮ್ಮೆಯಾಗಿದೆ. ಈ ವರ್ಷ (2019) ಗಣರಾಜ್ಯೋತ್ಸವ ಸ್ತಬ್ಧ ಚಿತ್ರಕ್ಕೆ  ಮಹಾತ್ಮ ಗಾಂಧೀಜಿಯವರ 150 ನೇ ವರ್ಷ ವಷರ್ಾಚರಣೆ ಹಿನ್ನಲೆಯಲ್ಲಿ, 1924 ರಲ್ಲಿ ಬೆಳಗಾವಿಯಲ್ಲಿ  ನಡೆದ ಕಾಂಗ್ರೇಸ್ ಅಧೀವೇಶನದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಗಾಂಧೀಜಿಯವರ ಪಾತ್ರ, ಅವರ ಒಡನಾಟಗಳ ಕುರಿತು ರಾಜ್ಯಕ್ಕೆ ಸ್ತಬ್ಧ ಚಿತ್ರ ತಯಾರಿಸಲು ನಿರ್ಧರಿಸಲಾಗಿದ್ದು ಸಿದ್ದತೆ,ನಡೆದಿದೆ ಎಂದರು. 

ಸಭೆಯ ಅಧ್ಯಕ್ಷತೆಯ ವಹಿಸಿದ್ದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಜೆ, ಎಂ ಚಂದುನವರ ಮಾತನಾಡಿ, ಪಾಪು ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ವಿಭಾಗದ ಎಲ್ಲ ವಿದ್ಯಾಥರ್ಿಗಳು ಪಾಲ್ಗೊಳಲಿದ್ದಾರೆ ಎಂದರು. ವಹಿಸಿದ್ದರು. ಮಂಜುನಾಥ ಕವಳಿ ಸ್ವಾಗತಿಸಿ, ವಂದಿಸಿದರು.