ಇಂದು ಬಾಗಲಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಣಕಹಳೆ

ಬಾಗಲಕೋಟೆ17: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬಾಗಲಕೋಟೆಯಲ್ಲಿ ಏಪ್ರೀಲ್ 18 ರಂದು ಮಧ್ಯಾಹ್ನ 2 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿರುವ ಬಿಜೆಪಿ ಸಮಾವೇಶಕ್ಕೆ ವೇದಿಕೆ ಸಿದ್ದಗೊಂಡಿದ್ದು, ಅಂದಾಜು 2 ಲಕ್ಷ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದೆ 

ನಗರದ ರೋಟರಿ ವೃತ್ತದ ಬಳಿ ನಿಮರ್ಿಸಲಾದ ಬೃಹತ್ ವೇದಿಕೆಯು ಎಲ್ಲ ರೀತಿಯಲ್ಲಿ ಸಿದ್ದಗೊಂಡಿದ್ದು, 75 ಸಾವಿರ ಜನರು ಕುಳಿಕೊಳ್ಳಲು ಕುಚರ್ಿ ವ್ಯವಸ್ಥೆ, 1.25 ಲಕ್ಷ ಜನರು ನಿಂತುಕೊಂಡು ಸಮಾವೇಶ ವೀಕ್ಷಣೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ವಿಜಯಪುರ ಜಿಲ್ಲೆಯ 8 ಹಾಗೂ ಬಾಗಲಕೋಟೆ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಒಟ್ಟು 2 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.

60*40 ಅಳತೆಯ ವೇದಿಕೆಯನ್ನು ಸಿದ್ದಪಡಿಸಲಾಗಿದ್ದು, ಸಮಾವೇಶಕ್ಕೆ ಬರುವ ಜನರಿಗಾಗಿ 2 ಲಕ್ಷ ಕುಡಿಯುವ ನೀರಿನ ಪ್ಯಾಕೇಟ್, 8 ಟ್ಯಾಂಕರ್ಗಳ ಮೂಲಕ ಕುಡಿಯುವ ನೀರು ಒದಗಿಸಲಾಗುತ್ತಿದೆ.

    ಸಾರ್ವಜನಿಕರು ನೀರಿನ ಬಾಟಲ್ ಅಥವಾ ಕ್ಯಾಮರಾ ಸೇರಿದಂತೆ ಬೇರೆ ಬೇರೆ ವಸ್ತುಗಳಿಗೆ ಅವಕಾಶ ವಿರುವದಿಲ್ಲ. ನಗರದ ಸಿಮೆಂಟ್ ಕಾಖರ್ಾನೆ ಆವರಣ, ಸಕ್ರಿ ಕಾಲೇಜು ಆವರಣ, ಅಮರ್ ಪ್ರೌಢಶಾಲೆ ಆವರಣ, ಸಕರ್ಾರಿ ಬಾಲಕಿಯರ ಪ್ರೌಢಶಾಲೆಯ ಆವರಣ ಹೀಗೆ ಒಟ್ಟು ನಾಲ್ಕು ಕಡೆ ವಾಹನ ಪಾಕರ್ಿಂಗ್ ವ್ಯವಸ್ಥೆ ಮಾಡಲಾಗಿದೆ.

ಸಮಾವೇಶ ಮಧ್ಯಾಹ್ನ 2ಕ್ಕೆ ಆರಂಭಗೊಳ್ಳಲಿರುವ ಸಮಾವೇಶದ ಮೋದಿ ಆಗಮನಕ್ಕೆ ಮೂರು ಪ್ರತ್ಯೇಕ ಹೆಲಿಪ್ಯಾಡ್ ನಿಮರ್ಾಣ ಮಾಡಲಾಗಿದ್ದು, ಸಮಾವೇಶಕ್ಕೆ 2 ಸಾವಿರ ವಿವಿಐಪಿ, 4 ಸಾವಿರ ವಿಐಪಿ ಪಾಸ್ ನೀಡಲಾಗುತ್ತಿದೆ.

      ಅಲ್ಲದೇ ಮಹಿಳೆಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ಈ ಸಮಾವೇಶದಲ್ಲಿ ಪ್ರಧಾನಿಯಾದ ನರೇಂದ್ರ ಮೋದಿ ಅವರಿಗೆ ಇದೇ ಮೊದಲ ಬಾರಿಗೆ ಮೋದಿ ಆಗಮಿಸುತ್ತಿದ್ದು, ಜಿಲ್ಲೆಯ ಪರವಾಗಿ ಅವರಿಗೆ ಬೆಳ್ಳಿಯ ಬಿಲ್ಲು ಹಾಗೂ ಬಾಣ ನೀಡಿ ಸನ್ಮಾನಿಸಲು ತಯಾರಿ ಮಾಡಿಕೊಳ್ಳಲಾಗಿದೆ.

ಏಪ್ರೀಲ್ 18 ರಂದು ಪ್ರಧಾನಿ ಮೋದಿಯವರ ಜೊತೆ ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್.ಯಡೆಯೂರಪ್ಪ ಕೂಡ ಬರಲಿದ್ದಾರೆ. ಸ್ಥಳೀಯರಾದ ಮಾಜಿ ಶಾಸಕ ಪಿ.ಎಚ್.ಪೂಜಾರ, ಬಸವೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದಶರ್ಿ ರಾಜು ರೇವಣಕರ, ನಗರ ಘಟಕದ ಅಧ್ಯಕ್ಷ ರಾಜು ನಾಯ್ಕರ, ಜಿಲ್ಲಾ ವಕ್ತಾರ ಜಯಂತ ಕುರಂದವಾಡ, ಪ್ರಮುಖರಾದ ಅಶೋಕ ಲಿಂಬಾವಳಿ, ಯಲ್ಲಪ್ಪ ಬೆಂಡಿಗೇರಿ, ಶರಣಪ್ಪ ಗುಳೇದ ಉಪಸ್ಥಿತರಿರುವರು.