ಲೋಕದರ್ಶನವರದಿ
ಧಾರವಾಡ02: ಶಾಂತಿನಿಕೇತನ ನಗರದ ಆರಾಧ್ಯ ದೈವವಾದ ಕರಿಯಮ್ಮ ದೇವಿ ದೇವಸ್ಥಾನದ ವತಿಯಿಂದ ನಿಮರ್ಿಸಲಾದ ನೂತನ ಸಭಾ ಭವನ ಲೋಕಾರ್ಪಣೆ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದಶರ್ಿಯಾಗಿ ನೇಮಕಗೊಂಡ ದೇವಸ್ಥಾನದ ಚೇರಮೆನ್ ರಾದ ಎನ್.ಹೆಚ್. ಕೋನರಡ್ಡಿ ಅವರಿಗೆ ಅಭಿನಂದನಾ ಸಮಾರಂಭವನ್ನು ಮಾ. 3ರಂದು ಭಾನುವಾರ ಸಂಜೆ 5 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಕರಿಯಮ್ಮ ದೇವಿಯ ಸದ್ಭಕ್ತರ 25 ಲಕ್ಷ ರೂಪಾಯಿ ಆಥರ್ಿಕ ಸಹಾಯದಿಂದ ನಿಮರ್ಿಸಲಾದ ಈ ಸಭಾಭವನವನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದಶರ್ಿಯಾದ ಹಾಗೂ ದೇವಸ್ಥಾನದ ಚೇರಮೆನ್ ರಾದ ಎನ್.ಹೆಚ್. ಕೋನರಡ್ಡಿ ಅವರು ಲೋಕಾರ್ಪಣೆಗೊಳಿಸುವರು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಬಸವರಾಜ ಹೊರಟ್ಟಿ, ವಿನಯ ಕುಲಕಣರ್ಿ ಅವರು ಆಗಮಿಸುವರು.
ಅತಿಥಿಗಳಾಗಿ ಮಕ್ಕಳ ತಜ್ಞ ಡಾ. ರಾಜನ್ ದೇಶಪಾಂಡೆ, ಉದ್ಯಮಿಗಳಾದ ಶಿವಾನಂದ ಸಾಣಿಕೊಪ್ಪ, ಬಿ.ಟಿ. ರಡ್ಡಿ ಆಗಮಿಸುವರು. ಇದರ ಅಧ್ಯಕ್ಷತೆಯನ್ನು ಮಾಜಿ ಶಾಸಕರು ಹಾಗೂ ದೇವಸ್ಥಾನದ ಅಧ್ಯಕ್ಷರಾದ ಶಿವಾನಂದ ಅಂಬಡಗಟ್ಟಿ ಅವರು ವಹಿಸುವರು.
ದೇವಸ್ಥಾನದ ಟ್ರಸ್ಟಿಗಳಾದ ಕೆ.ಎನ್. ಕುರಕುರಿ, ಸಿ.ಜಿ.ಸಾಣಿಕೊಪ್ಪ, ವಿನಾಯಕ ಜಾಧವ, ಮಹಾವೀರ ಉಪಾಧ್ಯಾಯ, ವಿಶ್ವನಾಥ ಯಲಿಗಾರ, ಎನ್.ಬಿ. ಅರಳಿಕಟ್ಟಿ, ಹೇಮಾವತಿ ಪೂಜಾರ, ಸುಶೀಲಾ ಮಾನಕರ್ ಪಾಲ್ಗೊಳ್ಳುವರು. ಈ ಹಿನ್ನಲೆಯಲ್ಲಿ ಕರಿಯಮ್ಮ ದೇವಿ ದೇವಸ್ಥಾನದ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಶೋಭೆ ಹೆಚ್ಚಿಸುವ ಜೊತೆಗೆ ದೇವಿಯ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಬೇಕು ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.