ನಾಳೆ ಮರೆಯದ ಹಾಡು ಸಂಗೀತ ಕಾರ್ಯಕ್ರಮ

ಲೋಕದರ್ಶನ ವರದಿ

ಧಾರವಾಡ 12: ಇಲ್ಲಿನ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ  ಮತ್ತು ರಂಗಸಂಗ ಸಂಸ್ಥೆ,ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಮಹಾನಂದಾ ಗೋಸಾವಿ ಅವರಿಂದ "ಮರೆಯದ ಹಾಡು" "ಇದು ಕವಿತೆಯ ಕಥೆ" ಎಂಬ ಸಂಗೀತ ಕಾರ್ಯಕ್ರಮವನ್ನು ದಿ. 14ರಂದು ಗುರುವಾರ ಸಂಜೆ 6-30 ಗಂಟೆಗೆ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಕಾರ್ಯದಶರ್ಿ ಮಾತರ್ಾಂಡಪ್ಪ ಕತ್ತಿ ತಿಳಿಸಿದ್ದಾರೆ.

     ಈ ಕಾರ್ಯಕ್ರಮದಲ್ಲಿ ಓಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಯಗತಿಮಠ ಉದ್ಘಾಟಕರಾಗಿ ಆಗಮಿಸುವರು. ಮುಖ್ಯ ಅತಿಥಿಗಳಾಗಿ ಆಕಾಶವಾಣಿಯ ನಿವೃತ್ತ ನಿದರ್ೇಶಕರಾದ ಸಿ ಯು ಬೆಳ್ಳಕ್ಕಿ,ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಪೇಡರೇಷನ್ನ ಉಪಾಧ್ಯಕ್ಷರಾದ ಬಸವರಾಜ ಗುರಿಕಾರ, ಆಕಾಶವಾಣಿಯ ಸಂಗೀತ ಸಂಯೋಜಕ ಶ್ರೀಕಾಂತ ಕುಲಕಣರ್ಿ, ಹಿರಿಯ ಕವಿಗಳಾದ ಎ ಎ ದಗರ್ಾ, ನೌಕರರ ಸಂಘದ ಜಿಲ್ಲಾ ಅಧ್ಯಕ್ಷರ ಎಸ್ ಎಫ್ ಸಿದ್ದನಗೌಡರ ಆಗಮಿಸುವರು.  ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷರಾದ ಕೆ.ಎಚ್ ನಾಯಕ ವಹಿಸುವರು. 

         ನಂತರ ಮಹಾನಂದಾ ಗೋಸಾಯಿ ಅವರಿಂದ ಮರೆಯದ ಹಾಡು ಇದು ಕವಿತೆಯ ಕಥೆ ಎಂಬ ವಿನೂತನ ಸಂಗೀತ ಕಾರ್ಯಕ್ರಮ ನಡೆಯುವುದು. ವಾಯಲಿನ್ನಲ್ಲಿ ಪಂ.ವಾದಿರಾಜ ನಿಂಬರಗಿ, ಹಾರ್ಮೋನಿಯಂನಲ್ಲಿ ಪರಶುರಾಮ ಕಟ್ಟಿ ಸಂಗಾವಿ,ತಬಲಾದಲ್ಲಿ ಅನೀಲ ಮೇತ್ರಿ ಸಾಥ ನೀಡಲಿದ್ದಾರೆ. 

   ಈ ಕಾರ್ಯಕ್ರಮದ ನಿರ್ವಹಣೆಯನ್ನು ಮಾತರ್ಾಂಡಪ್ಪ ಕತ್ತಿ, ಪರಿಕಲ್ಪನೆ ನಾಗರಾಜ ಪಾಟೀಲ ಮಾಡಿದ್ದಾರೆ ಎಂದು ಪ್ರತಿಷ್ಠಾನದ ಕಾರ್ಯದಶರ್ಿ ಮಾತರ್ಾಂಡಪ್ಪ ಎಮ್ ಕತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.