ಕೊಪ್ಪಳ 26: ಭ್ರೂಣಲಿಂಗ ಪತ್ತೆ ಹಚ್ಚಿದವರಿಕೆ ಕಠಿಣವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೊಪ್ಪಳ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಟಿ. ಶ್ರೀನಿವಾಸ ಅವರು ಹೇಳಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಸಲಹಾ ಸಮಿತಿ (ಪಿ.ಸಿ.ಪಿ.ಎನ್.ಡಿ.ಟಿ.), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿ ಶಿಕ್ಷಣ ಇಲಾಖೆ ಇವರ ಸಹಭಾಗಿತ್ವದಲ್ಲಿ "ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ತಂತ್ರ ವಿಧಾನಗಳ ಕಾಯ್ದೆ 1994''ರ ಕುರಿತು ಕ್ಷೇತ್ರ ಸಿಬ್ಬಂದಿಗಳಿಗಾಗಿ ಜಿಲ್ಲಾ ಪಂಚಾಯತ್ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಮಂಗಳವಾರದಂದು ಆಯೋಜಿಸಲಾದ ಜಿಲ್ಲಾ ಮಟ್ಟದ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ನಾವೆಲ್ಲರೂ ಭರತ ಖಂಡದಲ್ಲಿರುವ ಪ್ರಜ್ಞಾವಂತ ನಾಗರೀಕರು. ಸಮಾಜದಲ್ಲಿನ ಹಲವಾರು ಸಮಸ್ಯೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಬದುಕ ಬೇಕಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ಗಮನಿಸಿ ಅವರಿಗೆ ಸರಿಯಾದ ನ್ಯಾಯವನ್ನು ಕೊಡಿಸುವಲ್ಲಿ ಮುಂದಾಗಬೇಕು. ಇಂದು ನಾಗರೀಕರಾದ ನಾವೂ ಸ್ವ-ಆಸೆಯಿಂದ ಗಭರ್ಿಣಿ ಮಹಿಳೆಯ ಭ್ರೂಣಲಿಂಗ ಪತ್ತೆ ಮಾಡಿಸುವ ವ್ಯೆಕ್ತಿಗಳನ್ನು ಗುರುತಿಸಿ ಅವರಿಗೆ ಕಾನೂನಿನಿಂದ ಕಠಿಣ ಕ್ರಮ ಕೊಡಿಸುವಲ್ಲಿ ಮುಂದಾಗಬೇಕು. ಮಹಿಳೆಯರ ವಳತಿಗಾಗಿ ಸಕರ್ಾರಗಳು ತಂದಿರೋ ಕಾಯ್ದೆಗಳ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡುವುದು ಅತ್ಯವಶ್ಯಕವಾಗಿದೆ. ಸಮಾಜದಲ್ಲಿ ಎಲ್ಲರೂ ಉತ್ತಮ ಸೇವೆಯನ್ನು ನೀಡಬೇಕೆಂದರೆ ಸಮಾಜದಲ್ಲಿ ಮೂಡ ನಂಬಿಕೆಯನ್ನು ಹೊಗಲಾಡಿಸುವುದರ ಜೊತೆಗೆ ಭ್ರೂಣ ಲಿಂಗದ ಪತ್ತೆ ಹಚ್ಚುವರ ಬಗ್ಗೆ ಮಾಹಿತಿಯನ್ನು ಕಾನೂನಿಗೆ ಸರಿಯಾದ ಮಗುವಿನ ಆರೈಕೆಯ ಬೆಳವಣಿಯ ಬಗ್ಗೆ ಮಾತಿಯನ್ನು ಗಭರ್ಿಣಿ ಮಹಿಳೆಯರಿಗೆ ನೀಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದಶರ್ಿ ಟಿ. ಶ್ರೀನಿವಾಸ ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಂಬಯ್ಯ ಬಿ. ಅವರು ಮಾತನಾಡಿ ಸ್ಕ್ಯಾನಿಂಗ್ ಸೇಂಟರ ವೈದ್ಯರು ಭ್ರೂಣ ಲಿಂಗ ಪತ್ತೆ ಮಾಡಿದ್ದಲ್ಲಿ ಅವರಿಗೆ ಮೊದಲಿನ ಅಪರಾಧಕ್ಕೆ ಮೂರು ವರ್ಷಗಳ ವರೆಗೆ ಜೈಲು ಶಿಕ್ಷೆ ಜೊತೆಗೆ ರೂ. 10 ಸಾವಿರ ದಂಡ ವಿಧಿಸಲಾಗುವುದು. ಇದೇ ಅಪರಾಧ ಮೊತ್ತೊಮ್ಮೆ ಮಾಡಿದ್ದಲ್ಲಿ ಐದು ವರ್ಷಗಳ ವರೆಗೆ ಜೈಲು ಶಿಕ್ಷೆ ಜೊತೆಗೆ ರೂ. 50 ಸಾವಿರ ದಂಡ ವಿಧಿಸಲಾಗುವುದು. ಇಷ್ಟಾದರೂ ಪುನಃ ಪ್ರಕರಣ ಕಂಡುಬಂದಲ್ಲಿ ವೈದ್ಯರ ನೋಂದಣಿ ರದ್ದುಪಡಿಸಲಾಗುವುದು. ಮಹಿಳೆ, ಆಕೆಯ ಪತಿ ಹಾಗೂ ಅವರ ಸಂಬಂಧಿಕರು ಭ್ರೂಣ ಲಿಂಗ ಪತ್ತೆಗೆ ಒತ್ತಾಯಿಸಿದಲ್ಲಿ ಅಂತಹವರೂ ಸಹ ಶಿಕ್ಷೆಗೆ ಗುರಿಯಾಗುತ್ತಾರೆ. ಮೊದಲ ಅಪರಾದಕ್ಕೆ ಮೂರು ವರ್ಷಗಳ ಜೈಲು ಶಿಕ್ಷೆ ಜೊತೆಗೆ ರೂ. 50 ಸಾವಿರ ತಂಡ. ನಂತರದ ಅಪರಾಧಕ್ಕೆ ಐದು ವರ್ಷಗಳ ಜೈಲು ಶಿಕ್ಷೆ ಜೊತೆಗೆ ಒಂದು ಲಕ್ಷಗಳವರೆಗೆ ತಂಡ ವಿಧಿಸಲಾಗುವುದು. ಪಿ.ಸಿ. ಮತ್ತು ಪಿ.ಎನ್.ಡಿ.ಟಿ. ಕಾಯ್ದೆಯಡಿ ಭ್ರೂಣ ಅಂಗ ಪತ್ತೆ ಮಾಡುವ ವೈದ್ಯರು ಸ್ಕ್ಯಾನಿಂಗ್ ಸೆಂಟರ್ ಅಥವಾ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವ ಗಭರ್ಿಣಿ ಸ್ತ್ರಿ ಮತ್ತು ಕುಟುಂಬದವರ ವಿರುದ್ಧ ಮಾಹಿತಿ ನೀಡಿದ ಕಾರ್ಯಕರ್ತರಿಗೆ ಅವರ ಮಾಹಿತಿಯು ಸರಿಯಾಗಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾದರೆ ರೂ. 50 ಸಾವಿರಗಳ ಬಹುಮಾನವನ್ನು ಅಂತಹವರಿಗೆ ನೀಡಲಾಗುವುದು. ಅಲ್ಲದೇ ಇಂತಹ ಸಮಸ್ಯೆಗಳು ಕಂಡು ಬಂದರೆ ಇಲಾಖೆಗೆ ಮಾಹಿತಿ ನೀಡಿ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿದರ್ೇಶಕ ಈರಣ್ಣ ಪಂಚಾಳ, ಸಾರ್ವಜನಿಕ ಶಿಕ್ಷಣ ಇಲಾಖೆಯ ಪತ್ತಾರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಿರೇಂದ್ರ ನಾವದಗಿ, ಪಿ.ಸಿ.ಪಿ.ಎನ್.ಡಿ.ಟಿ. ಜಿಲ್ಲಾ ಸಮಿತಿಯ ಸದಸ್ಯೆ ಸರೋಜ ಬಾಕಳೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲೆಯ ವಿವಿಧ ತಾಲೂಕುಗಳ ಆಶಾ ಹಾಗೂ ಅಂಗನವಾಡಿ ಕಾರ್ಯಕತರ್ೆಯರು, ಆರೋಗ್ಯ ಸಹಾಯಕೀಯರು ಮತ್ತಿತರರು ಉಪಸ್ಥಿತರಿದ್ದರು.