ನಾಗರಾಜ್ ಹರಪನಹಳ್ಳಿ
ಕಾರವಾರ 09: ರವೀಂದ್ರನಾಥ ಟ್ಯಾಗೋರ್ ಕಡಲ ತೀರದಲ್ಲಿ ನಿಮರ್ಾಣಗೊಂಡಿರುವ ರಾಕ್ ಗಾರ್ಡನ್ ಅತ್ಯಂತ ಕಡಿಮೆ ಸಮಯದಲ್ಲಿ ಜನಪ್ರಿಯವಾಯಿತು. ರಾಕ್ ಗಾರ್ಡನ್ಗೆ ವೆಚ್ಚ ಮಾಡಿದ ಹಣವನ್ನು ಸಹ ಮರಳಿ ಗಳಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಕಡಲತೀರಗಳ ಅಭಿವೃದ್ಧಿ ಮತ್ತು ಸಂರಕ್ಷಣಾ ಸಮಿತಿ ಕೈಗೊಂಡ ಅತ್ಯಂತ ಸಮಯೋಚಿತ ನಿಧರ್ಾರ ಎಂಬುದು ಸಹ ಸಾಬೀತಾಗಿದೆ. ಉದ್ಘಾಟನೆಗೊಂಡ ಎಂಟೇ ತಿಂಗಳಲ್ಲಿ ಶಿಲ್ಪ ಉದ್ಯಾನಕ್ಕೆ ಲಕ್ಷಕ್ಕೂ ಮಿಕ್ಕಿ ಪ್ರವಾಸಿಗರು ಭೇಟಿ ನೀಡಿರುವುದು ಇದಕ್ಕೆ ಸಾಕ್ಷಿಯಾಗಿದೆ. ಆದರೆ ರಾಕ್ ಗಾರ್ಡನ್ ಪ್ರವೇಶಕ್ಕೆ ಇಟ್ಟ ದರದ ಬಗ್ಗೆ ಸ್ಥಳೀಯರ ತೀವ್ರ ಆಕ್ಷೇಪಗಳಿವೆ. ವಯಸ್ಕರಿಗೆ 35 ರೂ.,ಮಕ್ಕಳಿಗೆ 15 ರೂ. ಪ್ರವೇಶ ದರ ಹೆಚ್ಚಾಯಿತು. ಸ್ಥಳೀಯರಿಗೆ ಪ್ರವೇಶ ಶುಲ್ಕ ಇರಬಾರದು. ಪ್ರವಾಸಿಗರಿಗೆ ಮಾತ್ರ ರೂ.15 ರಿಂದ 20 ರೂ. ದರ ವಿಧಿಸಬಹುದು. 12 ವರ್ಷದೊಳಗಿನ ಮಕ್ಕಳಿಗೆ ರೂ.5 ರಂತೆ ಶುಲ್ಕ ವಿಧಿಸಿದ್ದರೆ ಸಾಕು. ಶಾಲಾ ಮಕ್ಕಳು ಸಾಮೂಹಿಕವಾಗಿ ಶಾಲೆವತಿಯಿಂದ ಬಂದಾಗ ಈಗ ಇರುವ ದರವನ್ನೇ ಮುಂದುವರಿಸಬಹುದು ಎಂಬ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿವೆ. ಪ್ರವಾಸಿತಾಣಗಳನ್ನು ವ್ಯಾಪಾರಿ ದೃಷ್ಟಿಯಿಂದ ಅಭಿವೃದ್ಧಿಪಡಿಸಬಾರದು. ಬೀಚ್ ಹಾಗೂ ಬೀಚ್ಗೆ ಹೊಂದಿಕೊಂಡಿರುವ ರಾಕ್ ಗಾರ್ಡನ್, ಕಾಳಿ ರಿವರ್ ಗಾರ್ಡನ್ ಹಾಗೂ ಅರಣ್ಯ ಇಲಾಖೆಯ ಸಾಲುಮರದ ತಿಮ್ಮಕ್ಕ ವನಗಳಿಗೆ ಪ್ರವೇಶ ಶುಲ್ಕ ವಿಧಿಸಬಾರದು. ದೇವಭಾಗದಂತಹ ಸಕರ್ಾರಿ ಹಿಡಿತದ ಕಾಪರ್ೂರೇಟ್ ಪ್ರವಾಸಿಕೇಂದ್ರಗಳಿಗೆ ಶುಲ್ಕ ವಿಧಿಸುವುದು ಸರಿ. ಜಲ ಸಾಹಸಿ ಬೊಟ್ ರೈಡಿಂಗ್, ಪ್ಯಾರಾ ಗ್ಲೈಡಿಂಗ್ ಇಂಥವುಗಳಿಗೆ ಶುಲ್ಕ ಸರಿ. ಬೀಚ್ಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮಾಡಿದ ಉಪಕ್ರಮಗಳಿಗೆ ಶುಲ್ಕ ವಿಧಿಸಬಾರದು ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ರಾಕ್ ಗಾರ್ಡನ್ಗೆ ವಿವಿಧ ಇಲಾಖೆಗಳ ನೆರವು:
ರಾಕ್ ಗಾರ್ಡನ್ಗೆ ಶಿಲ್ಪಗಳನ್ನು ರೂಪಿಸುವಾಗ ನಗರಸಭೆ ವಿದ್ಯುತ್ ಸೇರಿದಂತೆ ಹಲವು ಬಗೆಯ ನೆರವು ನೀಡಿದೆ. ಪ್ರವಾಸೋದ್ಯಮ ಇಲಾಖೆ ಕಲಾವಿದರಿಗೆ ವಿವಿಧ ಸೌಕರ್ಯ
ಕಲ್ಪಿಸಿದೆ. ಹಾಗೂ ಶಿಲ್ಪಕಲಾ ಅಕಾಡೆಮಿ ರಾಜ್ಯದ ವಿವಿಧ ಭಾಗದ ಕಲಾವಿದರನ್ನು ಕರೆಯಿಸಿ ಜಿಲ್ಲೆಯ ಸಂಸ್ಕೃತಿ, ಜನಾಂಗಗಳ ಹಾಡು, ಕುಣಿತ ,ಬದುಕಿನ ಪ್ರತಿಬಿಂಬದ ಶಿಲ್ಪಗಳನ್ನು ರೂಪಿಸಿಕೊಟ್ಟಿದೆ. 2017ನೇ ಸಾಲಿನ 3 ಲಕ್ಷ ರೂ. ಕರಾವಳಿ ಉತ್ಸವದ ನಿಧಿಯನ್ನು ಆರು ಶಿಲ್ಪಗಳಿಗೆ ಬಳಸಲಾಗಿದೆ. ಉಳಿದಂತೆ ಹೆಚ್ಚಿನ ಶಿಲ್ಪಗಳ ನಿಮರ್ಾಣದ ವೆಚ್ಚವನ್ನು ಬೀಚ್ ಅಭಿವೃದ್ಧಿ ಮತ್ತು ಸಂರಕ್ಷಣಾ ಸಮಿತಿ ನೋಡಿಕೊಂಡಿದೆ. ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ರಾಕ್ ಗಾರ್ಡನ್ ನಿಮರ್ಾಣಗೊಂಡಿದ್ದು ಜಿಲ್ಲೆಯ ಗೌಳಿ,ಹಾಲಕ್ಕಿ,ಸಿದ್ದಿ,ಕುಣಬಿ ಜನಾಂಗಗಳ ,ಗ್ರಾಮೀಣ ಜೀವನದ ಶಿಲ್ಪಗಳನ್ನು ರಾಕ್ ಗಾರ್ಡನನಲ್ಲಿ ಜೋಡಿಸಲಾಗಿದೆ. ಇದೇ ಪ್ರವಾಸಿಗರ ಆಕರ್ಷಣೆಯೂ ಆಗಿದೆ. ಹಾಲಕ್ಕಿ ಸುಕ್ರಜ್ಜಿ ಹರಟೆ ಹೊಡೆಯುವ ಸನ್ನಿವೇಶ ಮತ್ತು ಆಕೆಯ ಧ್ವನಿ ಸಹಿತ ಒಂದು ಹಾಡು ಪ್ರವಾಸಿಗರ ಮುಖ್ಯ ಆಕರ್ಷಣೆ. 2018 ಫೆ. 25ರಂದು ಉದ್ಘಾಟನೆಗೊಂಡಿರುವ ರಾಕ್ ಗಾರ್ಡನ್ಗೆ ಈವರೆಗೆ 1.30 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಯೋಜನೆ ಯಶಸ್ವಿಯಾಗಿದೆ. ಆದರೆ ಪ್ರವೇಶ ದರ ಮಾತ್ರ ಹೆಚ್ಚು ಎಂಬ ಮಾತು ಕೇಳಿಬರತೊಡಗಿದೆ.
ಕಲಾಕೃತಿಗಳು:
ಕಲಾಕೃತಿಗಳನ್ನು ನಿಮರ್ಿಸುವ ಕಾರ್ಯ 2016 ಅಗಸ್ಟನಿಂದಲೇ ಪ್ರಾರಂಭವಾಗಿತ್ತು. ಶಿಲ್ಪಕಲಾ ಆಕಾಡೆಮಿಯ ನೆರವಿನಿಂದ ಮೂರು ಸಹ ಪ್ರತ್ಯೇಕ ಶಿಬಿರಗಳನ್ನು 2016 ರಿಂದ 2017ರಲ್ಲಿ ನಡೆಸಲಾಯಿತು. ಒಂದೊಂದು ಶಿಬಿರದಲ್ಲಿ ಒಂದೊಂದು ಜನಾಂಗದ ಬದುಕು ಹಿಡಿದಿಡಲು ಶ್ರಮವಹಿಸಲಾಗಿತ್ತು.
ಜಿಲ್ಲೆಯ ಬುಡಕಟ್ಟು ಪಂಗಡಗಳಾದ ಹಾಲಕ್ಕಿ, ಸಿದ್ಧಿ, ಗೌಳಿ ಮೊದಲಾದ ಸಮುದಾಯಗಳ ಜೀವನ ಶೈಲಿಯನ್ನು ಪ್ರತಿಬಿಂಬಿಸುವ ಶಿಲ್ಪಗಳು, ಸಾಂಪ್ರದಾಯಿಕ ಮೀನುಗಾರರ ಬದುಕು, ಗ್ರಾಮೀಣ ಸೊಗಡಿನ ಮನೆ,ಗದ್ದೆ, ತೋಟ,ಬಾವಿ, ಪಶುಪಾಲನೆ,ಮೀನುಗಾರಿಕೆ ಮುಂತಾದ ಕಸಬುಗಳನ್ನೊಳಗೊಂಡ ಪರಿಕಲ್ಪನೆ ಶಿಲ್ಪಗಳನ್ನು ರೂಪಿಸಿ ರಾಕ್ ಗಾರ್ಡನ್ನಲ್ಲಿ ಜೋಡಿಸಲಾಯಿತು.
ಇಲ್ಲಿ ರಚಿಸಲಾದ ಮನುಷ್ಯ,ಪ್ರಾಣಿ,ಮನೆ ನೈಜತೆ ಹೊಂದಿವೆ. ಮನುಷ್ಯ,ಪ್ರಾಣಿಗಳ ಪ್ರತಿಯೊಂದು ಸಿಮೆಂಟ್ ಪುತ್ಥಳಿಯ ಕಲಾಕೃತಿಗಳು ನೈಜವಾಗಿ ಮೂಡಿಬಂದಿದೆ. ಎಂಟತ್ತು ಶಿಲ್ಪಗಳು ಕಲ್ಲಿನಲ್ಲಿ ಕೆತ್ತಿದವುಗಳಾಗಿವೆ.
ರಾಕ್ ಗಾಡರ್್ನ್ನ ಮತ್ತೊಂದು ಆಕರ್ಷಣೆ ಫೈಬರ್ನಿಂದ ರಚಿಸಲಾದ ಮೀನುಗಾರರ 30 ಅಡಿ ಎತ್ತರದ ಪ್ರತಿಮೆಗಳು. ಮಕ್ಕಳ ಮನರಂಜನೆಗಾಗಿ ಹಳೆಯ ಕಾಲದ ಬಿದಿರು ಮತ್ತು ಕಟ್ಟಿಗೆಗಳಿಂದ ಜೋಕಾಲಿ,ತಿರುಗಣಿ,ಅಟ್ಟಣಿಕೆ, ಮರಗಳ ಆಸರೆಯಲ್ಲಿ ಕೆನೊಪಿ ವಾಕ್ ಸೇತುವೆ ಸಹ ಇಲ್ಲಿವೆ.
ಲಕ್ಷಕ್ಕೂ ಮಿಕ್ಕಿ ಪ್ರವಾಸಿಗರು :
ಫೆ. 25ರಿಂದ ಆಗಸ್ಟ್ 30ರವರೆಗೆ ರಾಕ್ ಗಾರ್ಡನ್ಗೆ ಒಟ್ಟು 131118 ಜನ ಭೇಟಿ ನೀಡಿದ್ದಾರೆ. ಈ ಪೈಕಿ 115475 ವಯಸ್ಕರು, 15085 ಮಕ್ಕಳು, 558 ವಿದ್ಯಾಥರ್ಿಗಳು ಇದ್ದಾರೆ. ಫೆಬ್ರವರಿಯಲ್ಲಿ ಒಟ್ಟು 1059 ಜನ ಭೇಟಿ ನೀಡಿದ್ದರೆ ಮಾಚರ್್ನಲ್ಲಿ 27668, ಏಪ್ರಿಲ್ನಲ್ಲಿ 26933, ಮೇದಲ್ಲಿ 44057, ಜೂನ್ನಲ್ಲಿ 13566, ಜುಲೈ ನಲ್ಲಿ 9250 ಹಾಗೂ ಆಗಸ್ಟ್ನಲ್ಲಿ 8585 ಜನ, ಅಕ್ಟೋಬರ್ನಲ್ಲಿ ಸಹ 7500 ಜನ ಭೇಟಿ ನೀಡಿದ್ದಾರೆ. ನವ್ಹೆಂಬರ್ನಲ್ಲಿ ಪ್ರವಾಸಿಗರ ಸಂಖ್ಯೆ ಸ್ವಲ್ಪ ಕಡಿಮೆ ಇದೆ.
ಮಳೆಗಾಲದಲ್ಲೂ ಜನ ಬತರ್ಾರೆ :
ಸಾಮಾನ್ಯವಾಗಿ ಮಳೆಗಾಲದಲ್ಲಿ ಪ್ರವಾಸೋದ್ಯಮ ಕೊಂಚ ತಣ್ಣಗಿರುತ್ತದೆ. ಆದರೆ ರಾಕ್ ಗಾರ್ಡನ್ಗೆ ಮಳೆಗಾಲದಲ್ಲೂ ಪ್ರವಾಸಿಗರು ಬರುವುದು ಕಡಿಮೆಯಾಗಿಲ್ಲ. ಪ್ರಸಕ್ತ ಜೂನ್ ಜುಲೈ ಮತ್ತು ಆಗಸ್ಟ್ ತಿಂಗಳಿನಿಂದ ಒಟ್ಟು 31398 ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ಅವಧಿಯಲ್ಲಿ ಪ್ರತಿ ದಿನ ಸರಾಸರಿ ಸುಮಾರು 300ಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡದ ದಾಖಲೆಯಿದೆ.