ಪ್ರಯಾಗ ರಾಜ್‌ನಲ್ಲಿ ಕಾಲ್ತುಳಿತದಲ್ಲಿ ಮೃತರಿಗೆ ಶ್ರದ್ಧಾಂಜಲಿ
ಬೆಳಗಾವಿ 30: ಜನವರಿ30, 2025 ರಂದು, ಪ್ರಯಾಗರಾಜ್ನಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಬೆಳಗಾವಿಯ ನಾಲ್ವರು ನಿಧನರಾದ ಹಿನ್ನಲೆಯಲ್ಲಿ ಇಂದು ಆ ಪುಣ್ಯ ಆತ್ಮಗಳಿಗೆ ಭಾರತೀಯ ಜನತಾ ಪಾರ್ಟಿ ಬೆಳಗಾವಿ ಮಹಾನಗರ ವತಿಯಿಂದ ಜಿಲ್ಲಾ ಕಾರ್ಯಾಲಯದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಭಾರತೀಯ ಜನತಾ ಪಾರ್ಟಿಯ ಬೆಳಗಾವಿ ಮಹಾನಗರ ಜಿಲ್ಲಾ ಕಾರ್ಯದರ್ಶಿ ಕಾಂಚನ ಕೊರೆ್ಡ ಅವರ ಪತಿ ಅರುಣ್ಕೋರೆ್ಡ, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಮಹಾದೇವಿ ಹನುಮಂತ ಭಾವನೂರ್, ಬೆಳಗಾವಿ ದಕ್ಷಿಣ ಮತಕ್ಷೇತ್ರದ ಜ್ಯೋತಿ ಹಾಗೂ ಮೇಘಾ ಅವರು ದಿವಂಗತರಾಗಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಅನಿಲ ಬೆನಕೆ, ಶಾಸಕರಾದ ಅಭಯ ಪಾಟೀಲಗೂ ಮಹಾನಗರ ಜಿಲ್ಲಾ ಅಧ್ಯಕ್ಷರಾದ ಗೀತಾ ಸುತಾರ್ಜಿಲಾ ಪ್ರಧಾನ ಕಾರ್ಯದರ್ಶಿಗಳಾದ ಈರಯ್ಯ ಖೋತ, ಗಣೇಶ ದೇಸಾಯ ಜಿಲ್ಲಾ ಪದಾಧಿಕಾರಿಗಳು. ಪ್ರಮುಖರು ಕಾರ್ಯಕರ್ತರು ಎಲ್ಲರೂ ಸೇರಿ ಶೋಕಾಚರಣೆ ಮಾಡಿ, ಶ್ರದ್ಧಾಂಜಲಿ ಸಲ್ಲಿಸಿದರು.