ವಿಶ್ವಕಲ್ಯಾಣಕ್ಕಾಗಿ ಉದಕ ಶಾಂತಿ, ಮತ್ತು ಯಜ್ಞ ಹೋಮಗಳು ನಡೆದವು ಸಂಕೇಶ್ವರ: ಎಂ.ಬಿ. ಘಸ್ತಿ

Udaka Shanti for Universal Welfare, and Yajna Homam held at Sankeshwar: M.B. Ghasti

ವಿಶ್ವಕಲ್ಯಾಣಕ್ಕಾಗಿ ಉದಕ ಶಾಂತಿ, ಮತ್ತು ಯಜ್ಞ ಹೋಮಗಳು ನಡೆದವು ಸಂಕೇಶ್ವರ: ಎಂ.ಬಿ. ಘಸ್ತಿ 

ಬೆಳಗಾವಿ,31: ಇಂದು ಶಂಕರಾಚಾರ್ಯ ಮಠದಲ್ಲಿ ಇಂದು ವಿಶ್ವಕಲ್ಯಾಣಕ್ಕಾಗಿ ಉದಕ ಶಾಂತಿ, ಮತ್ತು ಯಜ್ಞ ಹೋಮಗಳನ್ನು ಏರಿ​‍್ಡಸಲಾಗಿತ್ತು ಈ ಯಜ್ಞ ಹೋಮಗಳು ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಸ್ವಾಮಿಗಳು ಇವರ ಮಾರ್ಗದರ್ಶನದಲ್ಲಿ ಜರುಗಿದವು 20 ದಂಪತಿಗಳು ಈ ಯಜ್ಞ ಹೋಮದಲ್ಲಿ ಸಹಭಾಗಿಯಾಗಿ ವಿಶ್ವಕಲ್ಯಾಣದ ಸಲುವಾಗಿ ಸಂಕಲ್ಪ ಮಾಡಿದರು ಹಾಗೂ ಎಲ್ಲ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮವು ಶ್ರೀ. ಗುರುದೇವ ದತ್ತ ಮಂದಿರದ ಮುಂಭಾಗದಲ್ಲಿ ನಡೆಯಿತು. 

  ಈ ಹೋಮ ಯಜ್ಞವನ್ನು ಪುರೋಹಿತರಾದ ಸಂತೋಷ ಜೋಶಿ, ಶ್ರೀಪಾದ ಉಪಾಧ್ಯೆ, ವಾಮನ ಪುರಾಣಿಕ, ಮದನ ಪುರಾಣಿ, ಸಂತೋಷ ಹೆಬಳಿಕರ, ಅಮೋಲ ಹೆಬಳಿಕರ, ಭಾಗ್ಯೇಶ ಜೋಶಿ, ಕೇಶವ ಜೋಶಿ, ಶ್ರೀಪಾದ ಕುಲಕರ್ಣಿ, ಅಭಯ ಗೋಟುರಕರ, ಅವಧುತ ಜೋಶಿ, ಇವರು ನಡೆಸಿಕೊಟ್ಟರು, ಈ ಹೋಮ ಯಜ್ಞದಲ್ಲಿ ಸಂಕೇಶ್ವರದ ಗಣ್ಯ ವ್ಯಕ್ತಿಗಳಾದ ಅಪ್ಪಾಸಾಹೇಬ ಶಿರಕೋಳಿ, ಸಂಜಯ ಶಿರಕೋಳಿ ದಂಪತಿ, ಜಯಪ್ರಕಾಶ ಸಾವಂತ ದಂಪತಿ, ಪಿಂಟೂ ಪರೀಟ ದಂಪತಿ, ರಾಜು ಸುತಾರ ದಂಪತಿ, ಸಂತೋಷ ಮಗದುಮ ದಂಪತಿ, ನಾರಾಯಣ ಕದಮ ದಂಪತಿ, ಗಣೇಶ ಕೋಳೆಕರ ದಂಪತಿ. ಉಪಸ್ಥಿತರಿದ್ದರು, ಪ್ರಾರಂಭದಲ್ಲಿ ವಕ್ರತುಂಡ ವಿಘ್ನೇಶ್ವರನಿಗೆ ಪುರೋಹಿತರು ಪೂಜೆ ಸಲ್ಲಿಸಿದರು.