ಅಂಕಲಿ ಡಾ. ಪ್ರಭಾಕರ ಕೋರೆ ಕೋ-ಆಫ್ ಸೊಸಾಯಿಟಿಗೆ ಲಾಭ

Uncle Dr. Proceeds to Prabhakara Kore Co-Off Society

ಅಂಕಲಿ ಡಾ. ಪ್ರಭಾಕರ ಕೋರೆ ಕೋ-ಆಫ್ ಸೊಸಾಯಿಟಿಗೆ ಲಾಭ 

ಮಾಂಜರಿ 24: ಡಾ. ಪ್ರಭಾಕರ ಕೋರೆ ಕೋ-ಆಫ್ ಕ್ರೆಡಿಟ್ ಸೊಸಾಯಿಟಿ ಅಂಕಲಿ (ಬಹು ರಾಜ್ಯ) ಸಂಸ್ಥೆಯು ಸಂಸ್ಥಾಪಕ  ಡಾ. ಪ್ರಭಾಕರ ಕೋರೆಯವರ ಮಾರ್ಗದರ್ಶನದಲ್ಲಿ  ಗಡಿರಾಜ್ಯಗಳಾದ ಮಾಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಶಾಖೆಗಳನ್ನು ಪ್ರಾರಂಭಿಸಲಿದೆ. ಶಾಖೆಯು ಇಲ್ಲಿಯವರೆಗೆ 40.50 ಕೋಟಿ ಠೇವು ಸಂಗ್ರಹಿಸಿ, 7.93 ಕೋಟಿ ಸಾಲ ವಿತರಿಸಿ 70.97 ಲಕ್ಷ.ರೂ. ಗಳ ಲಾಭ ಗಳಿಸಿದೆ ಎಂದು ಶಾಖೆಯ ಸದಸ್ಯರಾದ ಸದಾನಂದ ಹಿರೇಮಠ ರವರು ಹೇಳಿದರು. 

ಅವರು ಯಕ್ಸಂಬಾ ಪಟ್ಟಣದಲ್ಲಿನ ಡಾ. ಪ್ರಭಾಕರ ಕೋರೆ ಕೋ-ಆಫ್ ಕ್ರೆಡಿಟ್ ಸೊಸಾಯಿಟಿ  ಅಂಕಲಿ (ಬಹು ರಾಜ್ಯ) ಸಂಸ್ಥೆಯ ಶಾಖೆಯಲ್ಲಿ ನಡೆದ 11 ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮಾತನಾಡಿದ ಅವರು 2014 ರಲ್ಲಿ ಪ್ರಾರಂಭಗೊಂಡ ಈ ಶಾಖೆಯು ಗ್ರಾಮೀಣ ಭಾಗದ ಜನರಿಗೆ ಹಲವಾರು ರೀತಿಯ ಆರ್ಥಿಕ ಸೇವೆಗಳನ್ನು ಮತ್ತು ಜೀವ ವಿಮೆ ಹಾಗೂ ವಾಹನ ವಿಮೆ ಒದಗಿಸುತ್ತಾ ಕೋರ ಬ್ಯಾಂಕಿಂಗ ಸೇವೆಯೋಂದಿಗೆ ಗ್ರಾಹಕರ ವಿಶ್ವಾಸನೀಯ ಸಂಸ್ಥೆಯಾಗಿ ಹೊರಹೊಮ್ಮುತ್ತಿದೆ. ಶಾಖೆಯ ಬೆಳವಣಿಗೆಗೆ ಶಾಖೆಯ ಎಲ್ಲ ಸದಸ್ಯರು, ಸಲಹಾ ಸಮಿತಿ ಸದಸ್ಯರು, ಸಿಬ್ಬಂದಿಗಳ ಪ್ರಾಮಾಣಿಕ ಸೇವೆ, ಗ್ರಾಹಕರ ಪ್ರೀತಿ, ವಿಶ್ವಾಸ ಹಾಗೂ ಸಹಾಯ ಸಹಕಾರ ನೀಡುತ್ತಿರುವುದೇ ಕಾರಣ ಎಂದು ಹೇಳಿದರು.  

ಸಲಹಾ ಸಮಿತಿ ಸದಸ್ಯರಾದ ಶಿವಗೌಡ ಬಾವಚೆ, ಅಮೋಲ ಶಹಾ, ಭರತ ಗಿಡ್ಡ, ಅಮಿತ ಹುಕ್ಕೆರಿ, ಮಾರುತಿ ಖೋತ, ರಾಮಚಂದ್ರ ಬಾಕಳೆ, ರಾಘವೇಂದ್ರಸಿಂಗ ರಜಪೂತ, ಸಂಜಯ ಇಂಗಳೆ, ಮಹಾದೇವ ರೇಂದಾಳೆ, ಕೃಷ್ಣಾ ಕೋಕಣೆ, ಬಸವರಾಜ ಅವಟೆ, ಶಾಖಾ ವ್ಯವಸ್ಥಾಪಕರಾದ ಸುನೀಲ ಸಾವಳವಾಡೆ, ಗ್ರಾಹಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.