ಪೀರಾಪೂರ-ಬೂದಿಹಾಳ ಏತ ನೀರಾವರಿ ಕಾಮಗಾರಿಗೆ ಚಾಲನೆ ನೀಡುವಂತೆ ಒತ್ತಾಯ
ತಾಳಿಕೋಟಿ 25: ತಾಲೂಕಿನ ವ್ಯಾಪ್ತಿಯ ಪೀರಾಪೂರ-ಬೂದಿಹಾಳ ಏತ ನೀರಾವರಿ ಮುಂದಿನ ಹಂತದ ಕಾಮಗಾರಿಗೆ ಶೀಘ್ರ ಚಾಲನೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಕಲಕೇರಿ ಅಸ್ಕಿ ಹಾಗೂ ಬೆಕಿನಾಳ ಗ್ರಾಮಗಳ ರೈತರು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲರಿಗೆ ಮನವಿ ಸಲ್ಲಿಸಿದರು.