ವೇಣುಗೋಪಾಲಗೆ ರಾಜ್ಯದ ರಾಜಕೀಯ ಗೊತ್ತಿಲ್ಲ

ಕಲಬುರಗಿ 14: ಲೋಕಸಭಾ ಚುನಾವಣೆ ಫಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ಏನು ಬೇಕಾದರೂ ನಡೆಯಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

   ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫಲಿತಾಂಶದ ನಂತರ ಬಿಜೆಪಿಯ ಹಲವು ಶಾಸಕರು, ಕಾಂಗ್ರೆಸ್ ಗೆ ಬರಲಿದ್ದಾರೆ ಎಂಬ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಹೇಳಿಕೆ ಅರ್ಥವಿಲ್ಲದ್ದು. ಅವರಿಗೆ ರಾಜ್ಯ ರಾಜಕಾ ರಣದ ವಿಚಾರವೇ ಸರಿಯಾಗಿ ಗೊತ್ತಿಲ್ಲ. ಕಾಂಗ್ರೆಸ್ ಗೆ ಹೋಗಲು ಬಿಜೆಪಿ ಶಾಸಕರಿಗೆ ತಲೆಕೆಟ್ಟಿದೆಯೇ? ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭೆ ಉಪಚುನಾವಣೆಯ ನಂತರ ರಾಜ್ಯ ರಾಜಕೀಯದಲ್ಲಿ ಬದಲಾವಣೆಗಳಾಗಿ ಬಿಜೆಪಿ ಸಕರ್ಾರ ಮಾಡುವಂತಹ ಅವಕಾಶ ಇರುವಾಗ ನಮ್ಮ ಶಾಸಕರು ಏಕೆ ಬೇರೆ ಪಕ್ಷಕ್ಕೆ ಹೋಗುತ್ತಾರೆ? ಇದೆಲ್ಲಾ ಅರ್ಥವಿಲ್ಲದ ವ್ಯರ್ಥ ಪ್ರಲಾಪ ಎಂದರು.

   ಇದೇ 21 ರಂದು ಬರಗಾಲದ ಪರಿಸ್ಥಿತಿ ಕುರಿತು ಚಚರ್ೆ ಮಾಡಲು ಪಕ್ಷದ ಎಲ್ಲ ಶಾಸಕರ ಸಭೆಯನ್ನು ಬೆಂಗಳೂರಿನಲ್ಲಿ ಕರೆಯಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.