ಕರಡೋಣಾ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲನೆ

ಕೊಪ್ಪಳ 02: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ  ಕರಡೋಣಾ ಗ್ರಾಮ ಪಂಚಾಯತಿ ಕೂಲಿಕಾರರಿಗೆ ನೀಡುತ್ತಿರುವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಕೆರೆ ಹೂಳೆತ್ತುವ ಕಾಮಗಾರಿಯನ್ನು ಪ್ರೊಬೆಷನರಿ ಐ.ಎ.ಎಸ್ ಅಧಿಕಾರಿ ಅಕ್ಷಯ ಶ್ರೀಧರ ಹಾಗೂ ಗ್ರಾ.ಉ ಸಹಾಯಕ ನಿದರ್ೇಶಕ ಮಹಾಂತೇಶ ಪಾಟೀಲ್ ಪರಿಶೀಲಿಸಿದರು.  

ಪ್ರೊಬೆಷನರಿ ಐ.ಎ.ಎಸ್ ಅಧಿಕಾರಿ ಅಕ್ಷಯ ಶ್ರೀಧರ ಹಾಗೂ ಗ್ರಾ.ಉ ಸಹಾಯಕ ನಿದರ್ೇಶಕ ಮಹಾಂತೇಶ ಪಾಟೀಲ್ ಅವರು ಬುಧವಾರದಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕರಡೋಣಾ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಅನುಷ್ಠಾನಗೊಂಡ ಕೆರೆ ಹೂಳೆತ್ತುವ ಕಾಮಗಾರಿಯನ್ನು ಪರಿಶೀಲನೆ ಮಾಡಿ ಕೂಲಿಕಾರರ ಜೊತೆಗೆ ಚಚರ್ೆ ಮಾಡಿದರು.  ಅಲ್ಲದೇ ಕೂಲಿಕಾರರ ಸಮಸ್ಯೆಯನ್ನು ಆಲಿಸಿದರು.  582 ಜನ ಕೂಲಿಕಾರರಿಗೆ ಕಾಮಗಾರಿ ನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಹೊಸ ಜಾಬಕಾರ್ಡಗಳನ್ನು ವಿತರಿಸಿ, ಮಹಾತ್ಮಾ ಗಾಂಧಿ  ನರೇಗಾ ಯೋಜನೆಯ ಬಗ್ಗೆ ಕೂಲಿಕಾರರಿಗೆ ತಿಳುವಳಿಕೆಯನ್ನು ನೀಡಿ ಗುಳೆ ಹೋಗದಂತೆ ತಿಳಿಸಿದರು.  ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಗೋದಾಮು, ಅಂಗನವಾಡಿ ಕಟ್ಟಡಗಳನ್ನು ಪರಿಶೀಲಿಸಿ ಅಂಗನವಾಡಿ ಮಕ್ಕಳ ಜೊತೆಗೆ ಪೌಷ್ಠಿಕ ಆಹಾರ ವಿತರಿಸುವ ಬಗ್ಗೆ ಮಕ್ಕಳಿಂದ ಮಾಹಿತಿಯನ್ನು ಪಡೆದರು.   

ಗಂಗಾವತಿ ತಾಲೂಕಾ ಪಂಚಾಯತ ಸಿಬ್ಬಂದಿ ಐ.ಇ.ಸಿ ಸಂಯೋಜಕರು, ತಾಂತ್ರಿಕ ಸಂಯೋಜಕರು ಹಾಗೂ ತಾಂತ್ರಿಕ ಸಹಾಯಕರು ಮತ್ತು ಗ್ರಾ.ಪಂ. ಪಂಚಾಯತ ಅಭಿವೃಧ್ದಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.