ವಿಜಯಾನಂದ ಕಾಶಪ್ಪನವರು ಅವಹೇಳನಕಾರಿ ಹೇಳಿಕೆ ಖಂಡಿಸಿ

Vijayananda Kashyap condemns derogatory remarks

ಲೋಕದರ್ಶನ ವರದಿ 

ವಿಜಯಾನಂದ ಕಾಶಪ್ಪನವರು ಅವಹೇಳನಕಾರಿ ಹೇಳಿಕೆ  ಖಂಡಿಸಿ 

ಸಿಂದಗಿ 18: ಇಡೀ ಕರ್ನಾಟಕ ರಾಜ್ಯದಲ್ಲಿ ಪಂಚಮಸಾಲಿ ಸಮಾಜವನ್ನು ಎಲ್ಲರ ಮನೆ ಮಾತಾಗುವಂತೆ ಮಾಡಿದ ಕೂಡಲ ಶ್ರೀಗಳ ಬಗ್ಗೆ ಹಾಗೂ ಪೀಠದ ಬಗ್ಗೆ ಹುಬ್ಬಳ್ಳಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ  ಬಸವ ಮೃತ್ಯುಂಜಯ ಮಹಾಸ್ವಾಮಿಗಳನ್ನು ಪಂಚಮಸಾಲಿ ಸಮಾಜದ ಪೀಠದಿಂದ ಕೆಳಗಿಳಿಸುತ್ತೇವೆ ಎಂದು ಹೇಳಿದ ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರು ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದನ್ನು ರಾಜ್ಯ ಉದ್ಯಮ ಘಟಕದ ಅಧ್ಯಕ್ಷ ಶಿವರಾಜ್ ಪೊಲೀಸ್ ಪಾಟೀಲ್ ಉಗ್ರವಾಗಿ ಖಂಡಿಸಿದ್ದಾರೆ  

       ಪಟ್ಟಣದ ಬಸವ ಮಂಟಪದಲ್ಲಿ ಹೇಳಿಕೆಯನ್ನು ಖಂಡಿಸಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವೀಣಾ ಕಾಶಪ್ಪನವರಿಗೆ ಎಂಪಿ ಟಿಕೆಟ ಸಿಗದಿರುವ ಸಂದರ್ಭದಲ್ಲಿ ಶ್ರೀಗಳು ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಒತ್ತಾಯ ಮಾಡಿರುವ ವಿಷಯ ಕೂಡ ವಿಜಯಾನಂದ ಕಾಶಪ್ಪನವರಿಗೆ ಗೊತ್ತಿದೆ. ಕಳೆದ ಎರಡು ವರ್ಷದಿಂದ ಸಮಾಜಕ್ಕೆ ನ್ಯಾಯ ಕೊಡಿಸುವಲ್ಲಿ ಹೋರಾಟ ನಡೆಯುತ್ತಿದೆ. ಸುವರ್ಣ ಸೌಧದ ಮುಂದೆ ಹೋರಾಟ ಮಾಡಿದಾಗ ಕಾಂಗ್ರೆಸ್ ಸರ್ಕಾರ ಲಾಟಿ ಏಟು ತೋರಿಸಿತ್ತು. ಸುಮಾರು ನೂರಕ್ಕೆ ಹೆಚ್ಚು ಜನರು ಗಾಯಗೊಂಡರು ಮಾರಣಾಂತಿಕ ಹಲ್ಲೆ ಮಾಡಿದರು. ಅದರೂ ತುಟಿ ಪಿಟಕ್ ಅನ್ನಲಿಲ್ಲ ಮತ್ತು ವಿರುದ್ಧ ಹೇಳಿಕೆಯನ್ನು ನೀಡಿದರು. ಈಗ ಸ್ವಾಮೀಜಿಯ ಬಗ್ಗೆ ಅವಹೇಳನಕಾರಿ ಮಾತನಾಡುತ್ತಿರುವುದು ಸರಿಯಲ್ಲ. ಟ್ರಸ್ಟ್‌ ಏನು ಮಾಡಿದ್ದಾರೆ ಅದು ಕಾನೂನು ಬದ್ಧವಾಗಿಲ್ಲ ಸಮಾಜದ ಜನರು ಸೇರಿ ವಿಜಯಾನಂದ ಕಾಶಪ್ಪನವರನ್ನು ಅಗ್ರಗಣ್ಯ ನಾಯಕರೆಂದು ಒಪ್ಪಿಕೊಂಡಿದ್ದೆವು. ಆದರೆ ಇವಾಗ ಸಮಾಜ ಬಾಂಧವರು ಅವರ ಹೇಳಿಕೆಯನ್ನು ನೋಡಿ ಮತ್ತು ಹೋರಾಟದಲ್ಲಿ ಪಾಲ್ಗೊಂಡಿಲ್ಲ ಆದರಿಂದ ಸಮಾಜ ಬಾಂಧವರು ಕಾಶಪ್ಪನವರಿಗೆ ಖಳನಾಯಕ ಅಂತ ಪಟ್ಟ ಕಟ್ಟುತ್ತಿದ್ದಾರೆ. ವಿಜಯಾನಂದ ಕಾಶಪ್ಪನವರೆ ನೀವು ಮೂರನೇ ಜನರ ಮಾತು ಕೇಳಿ ಪೀಠ ಒಡೆಯುವ ಕೆಲಸ ಮಾಡಬೇಡಿ ಹೇಗೆ ಮೂರನೇ ಪೀಠ ಮಾಡಿ ನಿರಾಣಿ ಅವರು ಆಟಕ್ಕುಂಟು ಲೆಕ್ಕಕ್ಕಿಲ್ಲ ತರಾ ಆದರೂ ನೀವು ಅದೇ ತರ ಆಗುತ್ತೀರಿ ಈ ಕ್ಷಣದಿಂದಲೇ ಕಾಶಪ್ಪನವರು ಕೂಡಲಸಂಗಮ ಶ್ರೀಗಳ ಬಗ್ಗೆ ಪೀಠದ ಬಗ್ಗೆ ನೀಡಿದ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.  

       ತಾಲೂಕು ಅಧ್ಯಕ್ಷ ಎಂ.ಎಂ.ಹಂಗರಗಿ ಮಾತನಾಡಿ, ಮೃತ್ಯುಂಜಯ ಸ್ವಾಮಿಗಳು ಮಠ ಕಟ್ಟದೇ ಸಮಾಜವನ್ನು ಕಟ್ಟಿದ್ದಾರೆ ಇಂತಹ ಸ್ವಾಮಿಜಿಗಳು ನಮ್ಮಗೆ ಸಿಕ್ಕಿರುವುದು ಸಮಾಜದ ಪುಣ್ಯ. ಅವರ ವಿರುದ್ಧ ಕಾಶಪ್ಪನವರ ಹೇಳಿಕೆಯನ್ನು ಖಂಡಿಸುತ್ತೇವೆ. ಇದೇ 20ರಂದು ಕೂಡಲಸಂಗಮದಲ್ಲಿ ಮಧ್ಯಾಹ್ನ 3 ಗಂಟೆಗೆ ರಾಜಮಟ್ಟದ ಸಮಾವೇಶವಿದ್ದು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೂಡಲ ಶ್ರೀಗಳಿಗೆ ಬೆಂಬಲ ನೀಡಬೇಕೆಂದು ವಿನಂತಿಸಿದರು. 

        ನಿವೃತ್ತ ಕೃಷಿ ಅಧಿಕಾರಿ ವಿ.ಬಿ.ಕುರುಡಿ ಮಾತನಾಡಿ, ಪೀಠ ಟ್ರಸ್ಟಿಗಳು ವಿಜಯಾನಂದ ಕಾಶಪ್ಪನವರು ಹಾಗೂ ಕೂಡಲ ಶ್ರೀಗಳು ಕುಳಿತುಕೊಂಡು 4ಗೋಡೆ ಮಧ್ಯೆ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಬೀದಿ ರಂಪ ಮಾಡಬಾರದು ಎಂದು ಹೇಳಿದ್ದಾರೆ. 

        ಗೋಷ್ಠಿಯಲ್ಲಿ ಗುರ​‍್ಪ ಮಳ್ಳಿ, ಶಂಕರ್ ಬಿರಾದಾರ, ಗುರಣ ಶಾಪುರ್, ಕಾಂತು ಯಳಮೇಲಿ, ಬಸವರಾಜ ಐರೋಡಗಿ, ಸಂಗಣ್ಣ ಎಳಮೇಲಿ, ದಾನೇಪ್ಪ ಜೋಗುರ, ಮಲ್ಲಿಕಾರ್ಜುನ ಅರ್ಜುಣಗಿ, ಸೇರಿದಂತೆ ಅನೇಕರಿದ್ದರು.