ಜಿಂದಾಲ್ ವಿದ್ಯಾನಗರ ಮಾದರಿಯಲ್ಲಿ ವಿಜಯಪುರ ವಿಮಾನ ನಿಲ್ದಾಣ ನಿಮರ್ಾಣ

ಲೋಕದರ್ಶನ ವರದಿ

ವಿಜಯಪುರ 14: ಐತಿಹಾಸಿಕ ಪ್ರವಾಸಿ ತಾಣ ವಿಜಯಪುರ ನಗರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ವಿಮಾನ ನಿಲ್ದಾಣವನ್ನು ಜಿಂದಾಲ್ ವಿದ್ಯಾನಗರ ಓಠ ಈಡಿಟಟ ಂಡಿಠಿಠಡಿಣ (ಜಿಂದಾಲ್ ವಿದ್ಯಾನಗರ) ಮಾದರಿಯಲ್ಲಿ ನಿಮರ್ಾಣ ಕಾರ್ಯಕೈಗೊಳ್ಳಲು ಇಂದು ಗೃಹ ಸಚಿವಎಂ.ಬಿ.ಪಾಟೀಲ್ರ ಅಧ್ಯಕ್ಷತೆಯಲ್ಲಿ ನಡೆದ ಪ್ರಮುಖ ಅಧಿಕಾರಗಳ ಸಭೆಯಲ್ಲಿ ನಿರ್ಧರಿಸಲಾಯಿತು.

ಓಠ ಈಡಿಟಟ ಂಡಿಠಿಠಡಿಣ (ಜಿಂದಾಲ್ ವಿದ್ಯಾನಗರ) ಮಾದರಿಯಲ್ಲಿ ನಿಮರ್ಾಣ ಮಾಡಿ ಂಖಿಖ ವಿಮಾನಗಳು ಇಳಿಯುವಂತೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಲು ಸಚಿವ ಪಾಟೀಲ್ ತಿಳಿಸಿದರು. 

ಮೂಲಭೂತಸೌಕರ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದಶರ್ಿ ಸಂದಿಪ ದವೆ ಮಾತನಾಡಿ ವಿಜಯಪುರ ವಿಮಾನ ನಿಲ್ದಾಣವನ್ನು ಗೃಹ ಸಚಿವರ ಸೂಚನೆಯಂತೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಖಕಗಿ (ಖಠಿಜಛಿಚಿಟ ಕಣಡಿಠಿಠಜ ಗಿಜಛಿಟಜ) ಮುಖಾಂತರ ತೆಗೆದುಕೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು. 

ವಿಜಯಪುರ ಜಿಲ್ಲೆಯ ಉಸ್ತುವಾರಿ ಕಾರ್ಯದಶರ್ಿ ಮೊಹಮ್ಮದ್ ಮೊಹಸಿನ್, ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳು ವಿಜಯಪುರ ವಿಮಾನ ನಿಲ್ದಾಣದ ಇಲ್ಲಿಯವರೆಗಿನ ಮಾಹಿತಿಯನ್ನು ಸಭೆಯ ಮುಂದಿಟ್ಟರು. 

ಅಂತಿಮವಾಗಿ ವಿಜಯಪುರ ವಿಮಾನ ನಿಲ್ದಾಣವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಎಲ್ಲ ಇಲಾಖೆಯ ಅಧಿಕಾರಿಗಳ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಲು ಗೃಹ ಸಚಿವ ಎಂ.ಬಿ.ಪಾಟೀಲ್ ಸೂಚಿಸಿದರು.