ಲೋಕದರ್ಶನ ವರದಿ
ರಾಯಬಾಗ 05: ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ ವಾರ್ಡಗಳ ಮನೆಗಳಿಗೆ ರವಿವಾರ ವಿಧಾನ ಪರಿಷತ್ ಸದಸ್ಯ ವಿವೇಕರಾವ ಪಾಟೀಲ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಪಟ್ಟಣದ ಪ್ರತಿ ವಾರ್ಡಗಳಲ್ಲಿಯ ಸಾರ್ವಜನಿಕರ ಬೇಡಿಕೆಗಳನ್ನು ಆಲಿಸಿ ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿದರು. ಪಟ್ಟಣ ಪಂಚಾಯತ ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನು ಕೆಲವು ರಸ್ತೆ, ಚರಂಡಿ, ಕುಡಿಯುವ ನೀರು, ಕಸ ವಿಲೇವಾರಿ ಸೇರಿದಂತೆ ಇನ್ನುಳಿದ ಮೂಲ ಭೂತ ಸೌಕರ್ಯಗಳನ್ನು ಮಾಡಿಸಿಕೊಡಲು ಅಧಿಕಾರಿಗಳಿಗೆ ಆದೇಶಿಸುವದಾಗಿ ತಿಳಿಸಿದರು.
ಸಾರ್ವಜನಿಕರಿಂದ ಸ್ವೀಕರಿಸಿದ ಮನವಿಗಳ ಬಗ್ಗೆ ಪೌರಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿಯವರೊಂದಿಗೆ ಚಚರ್ಿಸಿ ಪಟ್ಟಣ ಪಂಚಾಯತಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿ ಕೊಡುವದಾಗಿ ಭರವಸೆ ನೀಡಿದರು.
ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಡಿ.ಶಿಂಧೆ, ಲಕ್ಷ್ಮೀಕಾಂತ ದೇಸಾಯಿ, ಸಾತಗೌಡಾ ಪಾಟೀಲ, ಭೂಪಾಲ ಪುಣೇಕರ, ಪ.ಪಂ.ಸದಸ್ಯರಾದ ಸಂತೋಷ ಮೇತ್ರಿ, ಅಪ್ಪಾಜಿ ಪೂಜೇರಿ, ಕಲಂದರ ಅತ್ತಾರ, ಹಣಮಂತ ಸಾನೆ, ರವಿ ತರಾಳ, ಜಾವೇದ ಮೋಮಿನ್, ಗಣೇಶ ಕಾಂಬಳೆ, ಅಪ್ಪು ಗಡ್ಡೆ, ದೀಪಾ ಕುರಾಡೆ, ರಿಜವಾನಾ ಮುಲ್ಲಾ, ಜಯಶ್ರೀ ಭಿರಡೆ ಹಾಗೂ ವಾರ್ಡಗಳ ಮುಖಂಡರು ಇದ್ದರು.