ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತರ ಭೇಟಿ
ಗದಗ 29: ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತರಾದ ದೇವರಾಜು ಅವರು ಮಂಗಳವಾರ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿನ ಸ್ಮಾರಕಗಳಿಗೆ ಭೇಟಿ ನೀಡಿದರು. ದಿನಾಂಕ: 22-11-2024 ರಿಂದ 24-11-2024 ರವರೆಗೆ ಲಕ್ಕುಂಡಿ ಗ್ರಾಮದಲ್ಲಿ ಜರುಗಿಸಲಾದ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾ0ುರ್ಕ್ರಮದಲ್ಲಿ ಸಂಗ್ರಹವಾದ ಶಿಲಾ ಶಾಸನಗಳು, ಶಿಲ್ಪಗಳು, ನಾಣ್ಯಗಳು ಮುಂತಾದ ಪ್ರಾಚ್ಯಾವಶೇಷಗಳನ್ನು ವೀಕ್ಷಿಸಿದರು. ಇವುಗಳನ್ನು ಸೂಕ್ತ ರೀತಿ0ುಲ್ಲಿ ಸಂರಕ್ಷಣೆ ಮಾಡಲು ಸೂಚಿಸಿದರು. ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಡಿ0ುಲ್ಲಿ ಪುರಾತತ್ವ, ಸಂಗ್ರಹಾಲ0ುಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ರೂ. 5.00 ಕೋಟಿ ವೆಚ್ಚದಲ್ಲಿ ಮಂಜೂರಾಗಿ ಕಾ0ಾರ್ರಂಭ ಮಾಡಿದ ವಿವಿಧ ಸ್ಮಾರಕಗಳ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು ಹಾಗೂ ತ್ವರಿತವಾಗಿ ಕಾಮಗಾರಿಗಳನ್ನು ಮುಕ್ತಾ0ುಗೊಳಿಸುವಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.