ಯುವಾ ಬ್ರಿಗೇಡ್ ವತಿಯಿಂದ ವಿವೇಕ ಮಾಲಾಧಾರಣೆ ಕಾರ್ಯಕ್ರಮ
ಗದಗ 25: ಯುವಾ ಬ್ರಿಗೇಡ್ ಗದಗ ಸಂಘಟನೆ ವತಿಯಿಂದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ ಗದಗ ದಿವ್ಯತ್ರಯರ ಸನ್ನಿಧಿಯಲ್ಲಿ ಪರಮಪೂಜ್ಯ ಶ್ರೀ ಸ್ವಾಮಿ ಜಗನ್ನಾಥಾನಂದಜೀಯವರ ಸಾನಿಧ್ಯದಲ್ಲಿ ಡಿಸೆಂಬರ್ 25ರ ರಾಕ್ ಡೆ ಯಂದು ಯುವಾ ಬ್ರಿಗೇಡನ ಅನೇಕ ಕಾರ್ಯಕರ್ತರು ವಿವೇಕ ಮಾಲೆಯನ್ನೂ ಧಾರಣೆ ಮಾಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಪೂಜ್ಯ ಶ್ರೀ ಜಗನ್ನಾಥಾನಂದಜೀಯವರು ಮಾತನಾಡಿ ಪ್ರತಿವರ್ಷದಂತೆ ಡಿಸೆಂಬರ್ 25 ರಂದು ಆಚರಿಸುವ ರಾಕ್ ಡೇ ಯಿಂದ ಜನೆವರಿ 12 ರ ವಿವೇಕಾನಂದರ ಜಯಂತಿ ಹಾಗು ರಾಷ್ಟ್ರೀಯ ಯುವ ದಿನಾಚಣೆಯವರೆಗೆ 18 ದಿನಗಳ ಕಾಲದವರೆಗೆ ವಿವೇಕ ಮಾಲೆ ಅಭಿಯಾನದ ಆಚರಣೆಯನ್ನು ಆಯೋಜಿಸಲಾಗುತ್ತದೆ.
ಈ ದಿನ ಎಳಿ ಎದ್ದೇಳಿ ಗುರಿ ಮುಟ್ಟುವವರೆಗೆ ನಿಲ್ಲದಿರಿ ಎಂದು ಕನಸಿನ ತರುಣರ ಭಾರತ ನಿರ್ಮಾಣಕ್ಕಾಗಿ ಕರೆ ಕೊಟ್ಟ ಸ್ವಾಮಿ ವಿವೇಕಾನಂದರು ಭಾರತದ ಉದ್ಧಾರಕ್ಕಾಗಿ ಕನ್ಯಾಕುಮಾರಿ ಬಂಡೆಯ ಮೇಲೆ ಡಿಸೆಂಬರ್ 25 ರಿಂದ ಮೂರು ದಿನಗಳ ಕಾಲ ಧ್ಯಾನಸ್ಥರಾಗಿ ಕುಳಿತ ದಿನವಾಗಿದೆ. ಈ ದಿನವನ್ನು ಯುವಾ ಬ್ರಿಗೇಡ್ ಸಂಘಟನೆ ವತಿಯಿಂದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸಹಯೋಗದಲ್ಲಿ ರಾಷ್ಟ್ರದಾದ್ಯಂತ “ರಾಕ್ ಡೇ” ಎಂದು ಆಚರಿಸುವುದಲ್ಲದೆ ಸಹಸ್ರಾರು ಯುವಕರಿಗೆ ವಿವೇಕಾಮಾಲೆಯನ್ನೂ ಧರಿಸಲು ಪ್ರೇರಣೆ ನೀಡುವದರ ಜೊತೆಗೆ ಬಲಿಷ್ಠ ದೇಹಕ್ಕಾಗಿ ವ್ಯಾಯಾಮ ಮತ್ತು ಯೋಗಾಸನ, ಸದೃಢ ಮನಸ್ಸಿಗಾಗಿ ದ್ಯಾನ, ಮಿಂಚಿನಂತಾ ಬುದ್ದಿಗಾಗಿ ವಿವೇಕ ಸಾಹಿತ್ಯದ ಅಧ್ಯಯನದ ಮೂಲಕ ವಿವೇಕಾನಂದರು ಬಯಸಿದ್ದ ಕಬ್ಬಿಣದ ಸ್ನಾಯುಗಳು ಉಕ್ಕಿನ ನರಗಳು ಸಿಡಿಲಿನಂತಹ ಮನಸ್ಸುಗಳು ಅಂತಹ ಕೆಲವೇ ಕೆಲವು ತರುಣರಿಂದ ದೇಶದ ಭವಿಷ್ಯ ಬದಲಾಯಿಸಬಲ್ಲೆ ಎಂಬ ಕನಸ್ಸನ್ನು ಈಡೇರಿಸಲು ತರುಣರನ್ನೂ ಉತ್ಕೃಷ್ಟ ಮಾಡುವ ಮೂಲಕ ನನಸಾಗಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಆಶೀರ್ವಚನ ನೀಡಿದರು. ಈ ಸಂದರ್ಬದಲ್ಲಿ ಗದಗ ಜಿಲ್ಲಾ ಸಂಚಾಲಕರಾದ ಮಂಜುನಾಥ ಜಕ್ಕಲಿ, ಕಪಿಲ ಜಿ. ಆನಂದ ಕುರವತ್ತಿ, ವಿಜಯಕುಮಾರ್, ಪಾಂಡು ಚವ್ಹಾಣ, ಗುರು ಹೊಸಂಗಡಿ, ಸಂಗಮೇಶ ಹಡಪದ, ಮಂಜು ಹಿಂಡಿ, ವಿನಾಯಕ, ಶಿವರಾಜ, ಸೇರಿದಂತೆ ಯುವಾ ಬ್ರಿಗೇಡ್ ಕಾರ್ಯಕರ್ತರು ಆಶ್ರಮದ ಪೂಜ್ಯರು ಉಪಸ್ಥಿತರಿದ್ದರು.