ನಾವೆಲ್ಲರೂ ಸಂವಿಧಾನದ ಆದರ್ಶಗಳನ್ನು ತಪ್ಪದೆ ಪಾಲಿಸಬೇಕು: ದೇಯಣ್ಣವರ
ಬೆಟಗೇರಿ, 27: ಜಗತ್ತಿನ ಹಲವಾರು ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ, ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ಭಾರತ ದೇಶಕ್ಕೆ ಸರಿಹೊಂದುವ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ ಅವರು ರಚಿಸಿದ್ದಾರೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ತಾಪಂ ಮಾಜಿ ಸದಸ್ಯ ಈರ್ಪ ದೇಯಣ್ಣವರ ಹೇಳಿದ್ದಾರೆ.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಚೈತನ್ಯ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ನಾವೆಲ್ಲರೂ ಸಂವಿಧಾನದ ಆದರ್ಶಗಳನ್ನು ತಪ್ಪದೆ ಪಾಲಿಸಬೇಕು ಎಂದರು.
ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆ ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಿದ ಬಳಿಕ ಶಾಲಾ ಮಕ್ಕಳಿಗೆ ಸಿಹಿ ವಿತರಿಸಲಾಯಿತು, ಶಾಲೆಯ ಮಕ್ಕಳು ಸ್ವಾತಂತ್ರ್ಯ ಹೊರಾಟಗಾರರ ವೇಷಭೂಷಣ ಧರಿಸಿ ಎಲ್ಲರ ಗಮನ ಸೆಳೆದರು.
ಉಭಯ ಶಾಲೆಗಳ ಆಡಳಿತಾಧಿಕಾರಿ ರವಿ ಭರಮನಾಯ್ಕ, ಬೆಟಗೇರಿ ವಲಯದ ಸಿಆರ್‌ಪಿ ಎಮ್.ಬಿ.ನಾಯ್ಕರ, ಬಸಪ್ಪ ಮೇಳೆಣ್ಣವರ ರಮೇಶ ನಾಯ್ಕ, ಕಮಲಾಕ್ಷಿ ನಾಯ್ಕ, ವಿದ್ಯಾಶ್ರೀ ಜನ್ಮಟ್ಟಿ, ಕಾವೇರಿ ಹೊಸಮಠ,ಗೀತಾ ಬನ್ನೂರ, ಸುದಾ ಪಾಟೀಲ, ದೀಪಾ ಪಾಟೀಲ, ಸಾವಿತ್ರಿ ಮುಕಪ್ಪಗೋಳ, ಪಾರ್ವತಿ ಮುಧೋಳ, ಶಿಕ್ಷಕರು, ಪಾಲಕರು ಸಿಬ್ಬಂದಿ, ಶಿಕ್ಷಣಪ್ರೇಮಿಗಳು, ವಿದ್ಯಾರ್ಥಿಗಳು, ಗಣ್ಯರು ಇದ್ದರು.
ಪೋಟೊ: 27 ಬಿಟಿಜಿ 1
ಬೆಟಗೇರಿ:ಗ್ರಾಮದ ಚೈತನ್ಯ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವ ಆಚರಿಸಲಾಯಿತು.