ಬೆಳಗಾವಿ: ಸಾಂಸ್ಕೃತಿ, ಸಾಹಿತ್ಯಕ್ಕೆ ಮಹಿಳೆಯರ ಸೇವೆ ಅನನ್ಯ: ಜ್ಯೋತಿ ಬದಾಮಿ

ಲೋಕದರ್ಶನ ವರದಿ

ಬೆಳಗಾವಿ 18: ಜಿಲ್ಲಾ ಲೇಖಕಿಯರ ವತಿಯಿಂದ ಕನ್ನಡ  ಸಾಹಿತ್ಯ ಕ್ಷೇತ್ರದ ಉದಯೋನ್ಮುಖ ಲೇಖಕಿಯರಿಗಾಗಿ  ಪ್ರತಿಷ್ಠಿತ ಸಾಹಿತಿಗಳನ್ನು ಆಹ್ವಾನಿಸಿ ಕಾವ್ಯ, ಕಥಾ ಕಮ್ಮಟಗಳನ್ನು ಹಮ್ಮಿಕೊಳ್ಳಾಗುವುದು, ಈ ಸಂಘಟನೆಯು ರಾಜಾದ್ಯಂತ ಛಾಪು ಮೂಡಿಸುತ್ತಿದೆ ಎಂಉ ಅಧ್ಯಕ್ಷೆ ಜ್ಯೋತಿ ಬದಾಮಿ ಹೇಳಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರ 16 ರಂದು ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಆಯೋಜಿಸಲಾಗಿದ್ದ, ಜಿಲ್ಲಾ ಲೇಖಕಿಯರ 19 ನೇ ವಾಷರ್ಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, 

ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಮಹಿಳೆಯರ ಸೇವೆ ಅನನ್ಯ, ನಮ್ಮ ನಡೆನುಡಿಗಳನ್ನು ನಾಟಕ ಮುಖಾಂತರ ಪ್ರರ್ದಶನ ಮಾಡುವ ಕಲಾವಿರ ಪಾತ್ರ ಮರೆಯಲಾಗದು. ಸಂಘಟನೆ ಸರ್ವತೋಮುಖ ಬೆಳವಣಿಗೆಗೆ ಸಾಕಷ್ಟೂ ಮಹಿಳೆಯರು ಶ್ರಮಿಸಿದ್ದಾರೆ. ವಾಷರ್ಿಕೋತ್ಸವ  ನಿಮಿತ್ತವಾಗಿ ಮೂವತ್ತು  ಲೇಖಕಿಯರನ್ನು  ಸಾಹಿತ್ಯ, ಸಾಂಸ್ಕೃತಿಕ, ಕಲೆಯ ಸೊಗಡು ಪರಿಗಣಿಸಿ  ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದ ಸಂಘದ ಸದಸ್ಯರನ್ನು  ಸನ್ಮಾನಿಸಿ ಗೌರವಿಸಲಾಯಿತು ಎಂದರು.

ಪಿ.ಎಚ್.ಡಿ ಪದವಿ ಗೌರವ  ಪಡೆದ ಡಾ.ಭಾರತಿ ಮಠದ,ಡಾ.ನೀತಾ ರಾವ್,ಡಾ.ಶೈಲಜಾ ಕುಲಕಣರ್ಿ ಯವರನ್ನು ಸನ್ಮಾನಿಸಲಾಯಿತು.

2018-19 ಸಾಲಿನಲ್ಲಿ   ಅತ್ಯಂತ ಕ್ರಿಯಾ ಶೀಲವಾಗಿ ಕಾರ್ಯನಿರ್ವಹಿಸಿದ  ಲೇಖಕಿಯರ ಸಂಘದ ವಾಷರ್ಿಕ ವರದಿಯನ್ನು ಕಾರ್ಯದಶರ್ಿ ಆಶಾಯಮಕನಮರಡಿ ನೀಡಿದರು.

ಕಾರ್ಯಕ್ರಮದಲ್ಲಿ ವಿಜಯ ಪುಟ್ಟಿಯವರನ್ನು  ರಾಣಿ ಚೆನ್ನಮ್ಮ ವಿ.ವಿ.ಯ ಇಂಗ್ಲಿಷ್ ಪೋರಂನ ಅಧ್ಯಕ್ಷರಾಗಿ ಆಯ್ಕೆಯಾಗಿರುವ  ನಿಮಿತ್ತ ಸನ್ಮಾನಿಸಲಾಯಿತು. ರತ್ನ ಬೆಲ್ಲದ,ರಂಜನಾ ನಾಯಕ,ಪ್ರೇಮಾ ತಹಶಿಲ್ದಾರ,ಶಾಂತಾ ಮಸೂತಿ,ಬಸವರಾಜ ಸಸಾಲಟ್ಟಿ,ಜಯಶ್ರಿ ಅಬ್ಬಿಗೇರಿ ಪ್ರೇಮ ಅಂಗಡಿ,ಜ್ಯೋತಿ ಭಾವಿಕಟ್ಟಿ,ಅನಿತಾ ಚಟ್ಟರ ಹಾಗು ಹಲವಾರು  ಹಿರಿ ಕಿರಿಯ ಸಾಹಿತಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಈ ಸಂದರ್ಭದಲ್ಲಿ  ಆಶಾ ಕಡಪಟ್ಟಿ ,ಸರಿತಾ ಕುಲಕಣರ್ಿ, ಸುನಂದ ಎಮ್ಮಿ, ಶ್ವೇತಾ ನರಗುಂದ, ನೀಲಗಂಗಾ ಚರಂತಿಮತಿ, ದೀಪಿಕಾ ಚಾಟೆ,  ಸದಸ್ಯರಾದ ಸುಧಾ ಪಾಟೀಲ, ನಿರ್ಮಲಾ ಎಲಿಗಾರ, ರೇಖಾ ಶ್ರೀನಿವಾಸ್, ಉಮಾ ಅಂಗಡಿ, ಹಮೀದಾ ಬಾನು, ಸುನಿತಾ ಪಾಟೀಲ , ಜಯಶ್ರೀ ನಿರಾಕಾರಿ , ಶೈಲಜಾ ಕುಲಕಣರ್ಿ, ರುದ್ರಾಂಭಿಕಾ ಯಾಳಗಿ, ರಾಜನಂದಾ ಘಾಗರ್ಿ. ದ್ರಾಕ್ಷಾಯಿಣಿ ಕಾಪ್ಸೆ ಪ್ರಾರ್ಥನೆ ಗೀತೆ ಹಾಡಿದರು.ಲಲಿತಾ ಕ್ಯಾಸಣ್ಣವರ ವಂದಿಸಿದರು.

***