ಸಾಮಾಜಿಕ ಕ್ರಾಂತಿ ಮತ್ತು ಸಮಾನತೆಯ ಹರಿಕಾರ ಅಣ್ಣ ಬಸವಣ್ಣ

Anna Basavanna, the pioneer of social revolution and equality

ವಿಜಯಪುರ 1: ಬಸವಣ್ಣ ಅವರು ತಮ್ಮ ಭಕ್ತಿ ಪ್ರಧಾನ ವಚನಗಳಲ್ಲಿ ಸಮಜದ ಅಂಕು-ಡೊಂಕುಗಳನ್ನು ಹಾಗೂ ಅಂದಿನ ಕಲದ ಸಮಾಜದಲ್ಲಿದ್ದ ಮೇಲು-ಕೀಳು, ಡಂಭಾಚಾರ, ಮೂಢನಂಬಿಕೆ ಮುಂತಾದವುಗಳ ಬಗ್ಗೆ ಧ್ವನಿ ಎತ್ತಿ ಸಮಾನತೆಗಾಗಿ ಹೋರಾಡಿದವರು. ಜಗಜ್ಯೋತಿ ಬಸವಣ್ಣ ಅವರು ಮನಾವೀಯತೆ, ಏಕತೆ, ಸಮಾನತೆ, ಸಹೋದರತ್ವವನ್ನು ವಿಶ್ವದಾದ್ಯಂತ ನೀಡಿದ ಸಂದೇಶವು ಪ್ರಸ್ತುತ ಸಮಕಾಲೀನ ಮತ್ತು ಪ್ರಗತಿಪರ ಸಮಾಜವನ್ನು ನಿರ್ಮಿಸಲು ಅತ್ಯಂತ ಪ್ರಸ್ತುತರಾಗಿದ್ದಾರೆ.  

ಅವರು ಬಾಲ್ಯದವರಿದ್ದಾಗಲೇ ಚಿಂತನೆಶೀಲತೆ, ಗೊಡ್ಡು ಸಂಪ್ರದಾಯಗಳನ್ನು ಪ್ರಶ್ನಿಸುವ ಮತ್ತು ಪ್ರತಿಭಟಿಸುವ ಗುಣವನ್ನು ಬಸವಣ್ಣನವರು ಹೊಂದಿದ್ದರು. ಕಾಯಕವೇ ಕೈಲಾಸ ಎಂಬ ತತ್ವವನ್ನು ಪ್ರತಿಪಾದಿಸುತ್ತಾ, ಕಾಯಕದಲ್ಲಿ ಮೇಲು-ಕೀಳೆಂಬುದು ಇಲ್ಲ. ಶರಣರು ಮಾಡುವ ಕಾಯಕವು ಸತ್ಯ ಶುದ್ಧವಾಗಿರಬೇಕು ಮತ್ತು ಸಮಾಜಮುಖಿಯಾಗಿರಬೇಕೆಂಬುದು ಅವರ ಅಚಲವಾದ ನಂಬಿಕಯಾಗಿತ್ತು. ಇವನಾರವ, ಇವನಾರವ ಎನ್ನದೇ ಇವ ನಮ್ಮವ, ಇವ ನಮ್ಮವ ಎಂಬ ಎಲ್ಲರೂ ನಮ್ಮವರೇ ಎಂಬ ಸಮಷ್ಠಿಭಾವ ಹೊಂದುವಂತೆ ತಮ್ಮ ವಚನಗಳಲ್ಲಿ ಸಂದೇಶ ಸಾರಿದ್ದಾರೆ. ಆದ್ದರಿಂದ ಬಸವಣ್ಣ ಅವರ ಜಯಂತಿ ಕೇವಲ ಪೂಜೆಗೆ ಮಾತ್ರ ಸಿಮೀತವಾಗಬಾರದು. ಅವರ ತತ್ವ-ಆದರ್ಶ, ವೈಚಾರಿಕತೆ, ಜೀವನ-ಮೌಲ್ವಿಕ ಸಂದೇಶಗಳು ನಮಗೆಲ್ಲ ದಾರೀದೀಪವಾಗಬೇಕು ಮತ್ತು ನಮ್ಮ ಜೀವನದಲ್ಲಿ ನಿತ್ಯವು ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ಜಯಂತಿ ಆಚರಣೆ ನಿಜಕ್ಕೂ ಅರ್ಥಪೂರ್ಣವಾಗಬಲ್ಲದು ಎಂದು ಜ್ಞಾನ ಯೋಗಾಶ್ರಮದ ಪರಮ ಪೂಜ್ಯ ಶ್ರೀ ಜ್ಞಾನಾನಂದ ಸ್ವಾಮೀಜಿ ಅವರು ಕಿವಿಮಾತು ಹೇಳಿದರು. 

ಅವರು ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ವಿಭಾಗದಡಿಯಲ್ಲಿ ಜರುಗಿದ “ಬಸವ ಜಯಂತಿ” ಕಾರ್ಯಕ್ರಮದಲ್ಲಿ ಬಸವಣ್ಣವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ತಮ್ಮ ಆಶೀರ್ವಚನದಲ್ಲಿ ಮಾತನಾಡುತ್ತಿದ್ದರು. 

ಅವರು ಮಾತನಾಡುತ್ತಾ, ಎಲ್ಲ ಶರಣರ ಸಮೂಹದೊಂದಿಗೆ ಅನುಭಾವದ ಬಗ್ಗೆ ಚಿಂತನೆ-ಮಂಥನ ಮತ್ತು ಸಂವಾದಕ್ಕಾಗಿ ಬಸವಣ್ಣನವರು ನಿರ್ಮಿಸಿದ್ದ ಅನುಭವ ಮಂಟಪವು ಜಗತ್ತಿನ ಮೊದಲ ಸಂಸತ್ತು ಎಂದು ಗುರುತಿಸಲ್ಪಟ್ಟಿತ್ತು. ಆದ್ದರಿಂ ವಿಶ್ವಮಾನ್ಯತೆ ಪಡೆದ ಮಹಾಮಾನವತಾವಾದಿ ಅಣ್ಣ ಬಸವಣ್ಣನವರ ಸಾಮಾಜಿಕ. ಆರ್ಥಿಕ, ರಾಜಕೀಯ, ಶೈಕ್ಷಣಿಕ ಮತ್ತು ವೈಚಾರಿಕ ನೆಲೆಗಟ್ಟಿನ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು. 

ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಎ.ಐ.ಹಂಜಗಿ ಅವರು ಮಾತನಾಡಿ, ಬಸವಣ್ಣನವರು ಯಾವುದೇ ಒಂದು ಜಾತಿಗೆ ಸಿಮೀತವಾದವರಲ್ಲ. ಅವರು ಇಡೀ ಮಾನವ ಕುಲಕೋಟಿಗೆ ಸಲ್ಲುವ ಶ್ರೇಷ್ಠ ವ್ಯಕ್ತಿ. 12 ನೇಯ ಶತಮಾನದಲ್ಲಿ ಸಮಾಜದ ಅನಾಚಾರಗಳಿಗೆ ವಿರುದ್ಧವಾಗಿ ವಚನಗಳ ಮೂಲಕ ಉತ್ತರ ನೀಡಿದವರು. ಬಸವಣ್ಣನವರು ನಮ್ಮ ನಾಡಿನ ಸಾಂಸ್ಕೃತಿಕ ನಾಯಕ ಎಂದು ಹೇಳುವುದು ಹೆಮ್ಮೆಯ ವಿಚಾರ ಎಂದರು.  

ಸಾಂಸ್ಕೃತಿಕ ಸಂಚಾಲಕ ಡಾ. ಬಿ.ಎನ್‌.ಶಾಡದಳ್ಳಿ, ಪ್ರೊ. ವಲ್ಲಭ ಕಬಾಡೆ ಇನ್ನಿತರರು ಸಹ ವೇದಿಕೆಯಲ್ಲಿದ್ದರು. ಗಂಗಾ ಬಿರಾದಾರ ಪ್ರಾರ್ಥಿಸಿದರು. ಪ್ರೊ. ಸುನೀಲ ಹತ್ತಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ವಿನೋದ ಹುಲ್ಲೂರ ಶರಣು ಸಮರೆ​‍್ಣ ಮಾಡಿದರು. ಈ ಕಾರ್ಯಕ್ರಮದಲ್ಲಿ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.